ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎನ್ಆರ್ಐಗಳಿಗೆ ಮತದಾನದ ಹಕ್ಕು; ಮಸೂದೆ ಮಂಡನೆ (NRI voting | voting rights | India | M Veerappa Moily)
Bookmark and Share Feedback Print
 
ಅನಿವಾಸಿ ಭಾರತೀಯರಿಗೆ ತಮ್ಮ ತಾಯ್ನಾಡಿನ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡುವ ಬಹುನಿರೀಕ್ಷಿತ ಮಸೂದೆಯೊಂದನ್ನು ಶನಿವಾರ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

ಈ ಮಸೂದೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಮತದಾನದ ಹಕ್ಕನ್ನು ಒದಗಿಸುತ್ತದೆ. ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರು ತಮಗೂ ಮತದಾನದ ಹಕ್ಕು ಬೇಕೆಂದು ಇಡುತ್ತಿರುವ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಸರಕಾರ ನೀಡಿತ್ತು.

ಜನತೆಯ ಪ್ರಾತಿನಿಧ್ಯ (ತಿದ್ದುಪಡಿ) ಮಸೂದೆ 2010ನ್ನು ಸದನದ ಮುಂದಿಟ್ಟ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ, ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕನ್ನು ಒದಗಿಸುವ ಕುರಿತ ವಿವರಗಳು, ಮತದಾನ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸುವ ಕುರಿತ ನಿಬಂಧನೆಗಳನ್ನು ಸದನಕ್ಕೆ ನೀಡಿದರು.

ಈ ಹಿಂದೆ 2006ರಲ್ಲಿ ಮಂಡಿಸಲಾಗಿದ್ದ ಇದೇ ಪ್ರಸ್ತಾಪವನ್ನೊಳಗೊಂಡ ಮಸೂದೆಯನ್ನು ಹಿಂದಕ್ಕೆ ಪಡೆದುಕೊಂಡ ಸಚಿವರು, ಹಳೆಯ ಮಸೂದೆಯಲ್ಲಿ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕುಗಳನ್ನು ನೀಡುವ ಕುರಿತು ಹೆಚ್ಚಿನ ವಿವರಗಳು ಮತ್ತು ವಿಧಾನಗಳನ್ನು ನಮೂದಿಸಿರಲಿಲ್ಲ ಎಂದರು.

ತಮಗೆ ಮತದಾನದ ಹಕ್ಕು ನೀಡಬೇಕೆಂದು ಎನ್ಆರ್ಐಗಳು ಸತತವಾಗಿ ಮನವಿ ಮಾಡಿಕೊಂಡು ಬಂದಿದ್ದರೂ, ಇದುವರೆಗೆ ಸರಕಾರಕ್ಕೆ ಅದು ಸಾಧ್ಯವಾಗಿರಲಿಲ್ಲ. ಅವರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಭಾರತದ ಹೊರಗಡೆ ಮತದಾನಕ್ಕೆ ಅವಕಾಶ ನೀಡುವ ಕುರಿತು ಪ್ರಾಯೋಗಿಕ ಸಮಸ್ಯೆಗಳು ಎದುರಾಗಿದ್ದವು ಎಂದು ಮೊಯ್ಲಿ ವಿವರಣೆ ನೀಡಿದರು.

ಸಂಸದೀಯ ಸಮಿತಿಯ ಶಿಫಾರಸಿನಂತೆ ಈ ಹಿಂದೆ 2006ರಲ್ಲಿ ಮಂಡಿಸಲಾಗಿದ್ದ ಮಸೂದೆಯನ್ನು ಹಿಂದಕ್ಕೆ ಪಡೆದು, ನೂತನ ಮಸೂದೆಯನ್ನು ಪರಿಚಯಿಸಲಾಗಿದೆ. ಈ ಮಸೂದೆಯು ಅನಿವಾಸಿ ಭಾರತೀಯರಿಗೆ ಮತದಾನದಲ್ಲಿ ಪಾಲ್ಗೊಳ್ಳುವ ಹಕ್ಕನ್ನು ನೀಡುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ