ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಸಂಸದ ತರೂರ್-ಪುಷ್ಕರ್ ಮದುವೆಗೆ ಕ್ಷಣಗಣನೆ (Kerala | Shashi Tharoor | Sunanda Pushkar | Marriage)
Bookmark and Share Feedback Print
 
ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದೆ. ಓಣಂ ಶುಭಾವಸರದಲ್ಲಿ ತನ್ನ 94ರ ಹರೆಯದ ಅಜ್ಜಿಯ ಸಮ್ಮುಖದಲ್ಲಿ ಪೂರ್ವಿಕರ ಮನೆಯಲ್ಲೇ ತರೂರ್ ಭಾನುವಾರ ಪುಷ್ಕರ್ ಜತೆ ದಾಂಪತ್ಯ ಜೀವನಕ್ಕೆ ಪ್ರವೇಶಿಸಲಿದ್ದಾರೆ.

ಓಣಂ ಹಬ್ಬದ ಮೊದಲ ದಿನವಾಗಿರುವ ಭಾನುವಾರ ಕೇರಳದ ಪಾಲಕ್ಕಾಡ್ ಸಮೀಪದ ತನ್ನ ಪೂರ್ವಿಕರ ಮನೆಯಲ್ಲಿ ಮದುವೆ ಸಮಾರಂಭ ಮುಗಿಸಿದ ನಂತರ ಮಧುಚಂದ್ರಕ್ಕಾಗಿ ದಂಪತಿ ದುಬೈ ಮತ್ತು ಸ್ಪೇನ್‌ಗೆ ತೆರಳಲಿದ್ದಾರೆ.
PTI

ಶನಿವಾರ ಕೊಯಂಬತ್ತೂರಿಗೆ ಬರಲಿರುವ ಮಾಜಿ ಕೇಂದ್ರ ಸಚಿವ ಅಲ್ಲಿಂದಲೇ ನೇರವಾಗಿ ತನ್ನ ಪೂರ್ವಿಕರ ಮನೆಗೆ ಬರಲಿದ್ದರೆ, ಕಾಶ್ಮೀರಿ ನಿವೃತ್ತ ಯೋಧನ ಪುತ್ರಿ-- ದುಬೈ ಮೂಲದ ಉದ್ಯಮಿ ಪುಷ್ಕರ್ ಪ್ರತ್ಯೇಕವಾಗಿ ಕೇರಳಕ್ಕೆ ಆಗಮಿಸಲಿದ್ದಾರೆ.

ಈ ವಿಚಾರವನ್ನು ಬಹಿರಂಗಪಡಿಸಿರುವುದು ತರೂರ್ ಆಪ್ತ ಸ್ನೇಹಿತರೊಬ್ಬರು. ಪುಷ್ಕರ್ ಇನ್ನೊಂದು ವಿಮಾನದಲ್ಲಿ ಕೇರಳಕ್ಕೆ ಬರಲಿದ್ದು, ಇಲ್ಲೇ ಸಮೀಪದ ಸ್ಥಳವೊಂದರಲ್ಲಿ ತಂಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮದುವೆ ಸಮಾರಂಭದ ಹಿನ್ನೆಲೆಯಲ್ಲಿ 200 ವರ್ಷ ಹಳೆಯದಾದ ಮನೆಗೆ ನೂತನವಾಗಿ ಪೈಂಟಿಂಗ್ ಮತ್ತಿತರ ಸಿಂಗಾರಗಳನ್ನು ಮಾಡಲಾಗಿದೆ. ಹಳೆಯ ಕಾಲದ ಮನೆಯೀಗ ಸುಂದರವಾಗಿ ಕಂಗೊಳಿಸುತ್ತಿದೆ.

ಹಿಂದೂ ನಾಯರ್ ಸಂಪ್ರದಾಯದಂತೆ ಭಾನುವಾರ ಬೆಳಿಗ್ಗೆ 7.30ಕ್ಕೆ ತನ್ನ ಅಜ್ಜಿಯ ಸಮ್ಮುಖದಲ್ಲಿ ತರೂರ್ ಮದುವೆ ನಡೆಯಲಿದೆ. ತರೂರ್ ಅವರ ಹತ್ತಿರದ ಸಂಬಂಧಿಕರು ಮತ್ತು ಗೆಳೆಯರು ಮಾತ್ರ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಮದುವೆ ಕಾರ್ಯಕ್ರಮ ಮುಗಿದ ನಂತರ ದುಬೈಯಲ್ಲಿ ಆರತಕ್ಷತೆ ನಡೆಯಲಿದೆ. ಅಲ್ಲಿಂದ ನಂತರ ಸೆಪ್ಟೆಂಬರ್ ಮೂರರಂದು ಅವರು ಸ್ಪೇನ್‌ಗೆ ತೆರಳಲಿದ್ದಾರೆ. ದೆಹಲಿಯಲ್ಲಿ ತನ್ನ ಗೆಳೆಯರಿಗಾಗಿ ಔತಣಕೂಟವೊಂದನ್ನೂ ಆಯೋಜಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ