ಅಸ್ಸಾಂನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಶನಿವಾರ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಲಖಂಪುರ ಜಿಲ್ಲೆಯಲ್ಲಿ ಕನಿಷ್ಟ 50 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಬ್ರಹ್ಮಪುತ್ರ ನದಿಯ ಉಪನದಿ ಸಂಗೋರಾ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ನೀರು 40 ಗ್ರಾಮಗಳಿಗೆ ನುಗ್ಗಿದೆ. ಗ್ರಾಮಸ್ಥರು ಪ್ರವಾಹದ ಭೀತಿಯಿಂದ ಎತ್ತರದ ಫ್ಲ್ಯಾಟ್ ಫಾರ್ಮ್‌ಗಳು, ರೈಲ್ವೇ ಹಳಿಗಳಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಈವರೆಗೆ ಯಾವುದೇ ಸಾವುನೋವು ಪ್ರಕರಣಗಳು ವರದಿಯಾಗಿಲ್ಲ. ಆದರೂ ಈಗಾಗಲೇ ಎರಡು ಅಣೆಕಟ್ಟುಗಳು ಒಡೆದಿದ್ದು, ವಾಸಸ್ಥಳಗಳತ್ತ ನೀರು ನುಗ್ಗುತ್ತಿವೆ. ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು ರಕ್ಷಣಾ ಕಾರ್ಯ ಚುರುಕುಗೊಂಡಿದೆ.