ಸಾಕ್ಷಾತ್ ತನ್ನ ಧರ್ಮ ಪತ್ನಿಯದೇ ಅಶ್ಲೀಲ ವಿಡಿಯೋ ಚಿತ್ರಿಸಿ ತನ್ನ ಗೆಳೆಯರಿಗೆ ಕಳುಹಿಸಿದ ಭೂಪನ ವಿಕ್ಷಿಪ್ತ ಕಥೆಯಿದು.
ಹೌದು. ನೋಯ್ಡಾದ ಪ್ರಖ್ಯಾತ ಎಂಎನ್‌ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 28ರ ಹರೆಯರ ಎಂಜಿನಿಯರ್, ಸ್ವತಃ ತನ್ನ ಹೆಂಡತಿಯ ಅಶ್ಲೀಲ ವಿಡಿಯೋವನ್ನು ಗುಪ್ತ ಪೆನ್ ಕ್ಯಾಮರಾ ಮೂಲಕ ಸೆರೆಹಿಡಿದು ತನ್ನ ಗೆಳೆಯರಿಗೆ ಕಳುಹಿಸಿ ಎಂಜಾಯ್ ಮಾಡುತ್ತಿದ್ದ. ಇದನ್ನು ತಿಳಿದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ 2000ರಲ್ಲಿ ಇಲ್ಲಿನ ಪ್ರತಿಷ್ಟಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ ತನ್ನ ಕಿರಿಯ ಸಹಪಾಠಿಯನ್ನು ಪ್ರೀತಿಸಿ 2002ರಲ್ಲಿ ಆಕೆಯ ಜೊತೆಗೆ ಹಿರಿಯರ ಒಪ್ಪಿಗೆ ಪಡೆದೇ ಮದುವೆಯಾಗಿತ್ತು. ಇಬ್ಬರಿಗೂ ಒಂದು ಗಂಡು ಮಗುವಿದ್ದು ಕೆಲ ವರ್ಷ ಸುಖ ಸಂಸಾರ ನಡೆಸಿದ್ದರು.
ಆದರೆ ಸಂಸಾರದಲ್ಲಿ ಎಡವಟ್ಟು ಶುರುವಾಗಿದ್ದು 2006ರಲ್ಲಿ. ಗಂಡ ಕೆಲಸದ ನಿಮಿತ್ತ ಅಮೆರಿಕದಲ್ಲಿದ್ದಾಗ ಹೆಂಡತಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಅದಕ್ಕೆ ಕಾಮೆಂಟು ಮಾಡಲು ಹೇಳುತ್ತಿದ್ದ. ಇದು ಹೆಂಡತಿಗೆ ಸಹ್ಯವಾಗಲಿಲ್ಲ. ಆಕೆ ಕಾಮೆಂಟು ಮಾಡಲು ನಿರಾಕರಿಸಿದಾಗ ಗಂಡ ಫೋನಿನಲ್ಲಿ ಬೆದರಿಕೆಯೊಡ್ಡಲು ಆರಂಭಿಸಿದ. 2008ರಲ್ಲಿ ಯುಎಸ್‌ನಿಂದ ಮರಳಿದ ಮೇಲೆ ಹೆಂಡತಿಯೊಂದಿಗಿದ್ದಾಗಲೆಲ್ಲಾ ತನ್ನ ಜೇಬಿನಲ್ಲಿ ಗುಪ್ತ ಕ್ಯಾಮರಾ ಅಳವಡಿಸಿದ್ದ ಪೆನ್ನನ್ನು ಇಟ್ಟುಕೊಳ್ಳುತ್ತಿದ್ದ. ಹೆಂಡತಿಯನ್ನು ಬಲವಂತ ಮಾಡಿ ಅಶ್ಲೀಲ ವಿಡಿಯೋ ಚಿತ್ರಿಸಿ ಅದನ್ನು ತನ್ನ ಗೆಳೆಯರಿಗೆ ಕಳುಹಿಸಿದ್ದ. ಇದಕ್ಕೆ ವಿರೋಧಿಸಿದ ಹೆಂಡತಿಯನ್ನು ಹೊಡೆದು ಚಿತ್ರಹಿಂಸೆ ನೀಡಿ 2009ರಲ್ಲಿ ಆಕೆಯನ್ನು ಮನೆಯಿಂದ ಹೊರದಬ್ಬಿದ್ದ ಎಂದು ಪ್ರಕರಣ ದಾಖಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಆರೋಪಿಯಿಂದ ಪೆನ್ ಕ್ಯಾಮರಾವನ್ನು ನಾನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.