ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಪ್ರಧಾನಿ, ಸೋನಿಯಾಗೆ ಬುದ್ಧಿ ಕಲಿಸಲು ಕಾರಟ್ ಬಯಸಿದ್ದರು' (Prakash Karat | Manmohan Singh | Sonia Gandhi | Somnath Chatterjee)
Bookmark and Share Feedback Print
 
ಪರಮಾಣು ಒಪ್ಪಂದ ವಿಚಾರದಲ್ಲಿ ಆದ ಅಪಮಾನಕ್ಕೆ ಪ್ರತೀಕಾರವಾಗಿ 2008ರಲ್ಲಿ ಸರಕಾರದಿಂದ ಬೆಂಬಲ ವಾಪಸ್ ಪಡೆದುಕೊಳ್ಳುವ ಮೂಲಕ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪಾಠ ಕಲಿಸಲು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ನಿರ್ಧರಿಸಿದ್ದರು.

ಸರಕಾರದ ಮೇಲೆ ಮಹತ್ತರ ಪ್ರಭಾವ ಬೀರಬಹುದಾದ 62 ಸಂಸದರನ್ನು ಹೊಂದಿದ್ದ ಕಾರಟ್, ಸಿಪಿಐಯ ಎ.ಬಿ. ಬರ್ದನ್ ಮತ್ತು ಇತರ ಎಡರಂಗದ ನಾಯಕರು ತಮ್ಮ ನಿರ್ಧಾರದಿಂದ ಸರಕಾರವು ಪತನಗೊಳ್ಳಲಿದೆ ಎಂದು ಬಲವಾಗಿ ನಂಬಿದ್ದರು ಎಂದು ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ಬಹಿರಂಗಪಡಿಸಿದ್ದಾರೆ.
PTI

ಪ್ರಧಾನಿ ಸಿಂಗ್ ಅವರು ಶನಿವಾರ ಬಿಡುಗಡೆ ಮಾಡಿದ 'Keeping the Faith: Memoirs of a Parliamentarian' ಎಂಬ ಚಟರ್ಜಿ ಆತ್ಮಕತೆಯಲ್ಲಿ ಈ ಎಲ್ಲಾ ಅಂಶಗಳು ದಾಖಲಾಗಿವೆ. ತನ್ನ ಸಂಸದೀಯ ಜೀವನದ ಕೊನೆಯ ದಿನಗಳಲ್ಲಿ ಎದುರಾದ ಕಹಿ ಅನುಭವಗಳನ್ನು ಅವರು ಇದರಲ್ಲಿ ನಮೂದಿಸಿದ್ದಾರೆ.

ಎಡರಂಗವು 62ರಷ್ಟು ಸಂಸದರನ್ನು ಹೊಂದಿರುವುದರಿಂದ ಕಾಂಗ್ರೆಸ್ ಎಷ್ಟೇ ದೊಡ್ಡ ಪಕ್ಷವಾಗಿದ್ದರೂ ನಾವು ಹೇಳಿದಂತೆ ಕೇಳುವುದು ಖಚಿತ. ಹಾಗಾಗಿ ಸರಕಾರದ ನಿಯಂತ್ರಕರು ನಾವೇ ಎಂದು ಕಾರಟ್ ಮುಂತಾದ ನಾಯಕರು ಭಾವಿಸಿದ್ದರು. ಎಡಪಕ್ಷಗಳ ನಾಯಕ ಕೃಪಾಕಟಾಕ್ಷ, ಅದರಲ್ಲೂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರ ಆಶೀರ್ವಾದ ಇದ್ದರಷ್ಟೇ ಯುಪಿಎ ಸರಕಾರ ಉಳಿದುಕೊಳ್ಳಬಹುದು ಎಂಬ ರೀತಿಯ ಅಹಿತಕರ ಪ್ರಭಾವವನ್ನು ಪಕ್ಷ ಹೊಂದಿತ್ತು ಎಂದು ಚಟರ್ಜಿ ತನ್ನ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಸಭ್ಯ ರಾಜಕಾರಣಿ ಎಂದು ಹೆಸರು ಪಡೆದಿರುವ 81ರ ಹರೆಯದ ಚಟರ್ಜಿಯವರ ಪ್ರಕಾರ, ಕಾರಟ್ ಅವರಿಂದ ತೊಂದರೆಗೊಳಗಾದ ಪರಮಾಣು ಒಪ್ಪಂದವನ್ನು ಕಾರ್ಯಗತಗೊಳಿಸಲು ಕಾಂಗ್ರೆಸ್ ಯಶಸ್ವಿಯಾಗಲಿದೆ.

ಆದರೆ ತನ್ನ ತಂತ್ರಕ್ಕೆ ಯುಪಿಎ ಸರಕಾರ ಮಣಿಯದೇ ಇದ್ದಾಗ ತನಗಾದ ಅವಮಾನವನ್ನು ಸಹಿಸಿಕೊಳ್ಳದ ಕಾರಟ್, ಪ್ರಧಾನ ಮಂತ್ರಿ ಮತ್ತು ಯುಪಿಎ ಅಧಿನಾಯಕಿಗೆ ಪಾಠ ಕಲಿಸಲು ನಿರ್ಧರಿಸಿದ್ದರು ಎಂದು ಆತ್ಮಕತೆಯಲ್ಲಿನ 'ಉಚ್ಛಾಟನೆ: ಅತಿದೊಡ್ಡ ಆಘಾತ' ಎಂಬ ಉಪನಾಮದಡಿಯಲ್ಲಿ ಚಟರ್ಜಿ ಬರೆದಿದ್ದಾರೆ.

ಎಡಪಕ್ಷಗಳು ಸರಕಾರದಿಂದ ಬೆಂಬಲ ವಾಪಸ್ ಪಡೆಯಲು ನಿರ್ಧರಿಸಿದ್ದರ ಹಿಂದೆ ತಾನು ಯಾವುದೇ ರೀತಿಯಲ್ಲೂ ಪಾತ್ರ ವಹಿಸಿರಲಿಲ್ಲ ಎಂದು ಸಿಪಿಎಂ ಪರವಾಗಿ 10 ಬಾರಿ ಲೋಕಸಭೆಗೆ ಆಯ್ಕೆಯಾಗಿ 2008ರಲ್ಲಿ ಪಕ್ಷದಿಂದ ಹೊರದಬ್ಬಲ್ಪಟ್ಟ ಮಾಜಿ ಸ್ಪೀಕರ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ