ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ ನಂತರ ಐಎಸ್‌ಐ-ಲಖ್ವಿ ಭೇಟಿ: ಉಗ್ರ ಹೆಡ್ಲಿ (ISI | David Headley | Ahmed Shuja Pasha | Zaki-ur-Rehman Lakhvi)
Bookmark and Share Feedback Print
 
ಪಾಕಿಸ್ತಾನದ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶೂಜಾ ಪಾಶಾ ಮತ್ತು ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಝಾಕೀರ್ ರೆಹಮಾನ್ ಲಖ್ವಿ ರಾವಲ್ಪಿಂಡಿಯಲ್ಲಿನ ಆಡಿಯಾಲಾ ಜೈಲಿನಲ್ಲಿ ಪರಸ್ಪರ ಭೇಟಿಯಾಗಿದ್ದರು ಎಂದು ಅಮೆರಿಕಾ ಬಂಧನದಲ್ಲಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಭಾರತದ ಅಧಿಕಾರಿಗಳಿಗೆ ಬಹಿರಂಗಪಡಿಸಿದ್ದಾನೆ.

ಪಾಕಿಸ್ತಾನಿ ಸರಕಾರಿ ವ್ಯವಸ್ಥೆಯಾಗಿರುವ ಐಎಸ್ಐ ಮತ್ತು ಲಷ್ಕರ್ ಇ ತೋಯ್ಬಾ ನಡುವಿನ ಸಂಬಂಧದ ಕುರಿತು ಹೆಡ್ಲಿ ಈ ಮಾಹಿತಿಯನ್ನು ನೀಡಿದ್ದಾನೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಆತನ ಪ್ರಕಾರ ಲಷ್ಕರ್ ಇ ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಅನುಮತಿ ನೀಡಿದ ನಂತರವಷ್ಟೇ ಉಗ್ರ ಸಂಘಟನೆಯು ತನ್ನ ಮಹತ್ವದ ಕಾರ್ಯಾಚರಣೆಗಳನ್ನು ನಡೆಸುತ್ತದೆ.

ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆಯಾಗಿರುವ ಹೆಡ್ಲಿಯನ್ನು ಜೂನ್ ಮೂರರಿಂದ ಜೂನ್ ಒಂಬತ್ತರ ನಡುವೆ ಚಿಕಾಗೋದಲ್ಲಿ ಭಾರತೀಯ ಅಧಿಕಾರಿಗಳು 34 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಸರಕಾರ ಮತ್ತು ಐಎಸ್ಐ ಪಾತ್ರಗಳ ಕುರಿತು ಹೇಳಿಕೆ ನೀಡಿರುವ ಹೆಡ್ಲಿ, ದಾಳಿಗೆ ತೆರಳಲು ಬೋಟೊಂದನ್ನು ಖರೀದಿಸಲು ಐಎಸ್ಐ 25 ಲಕ್ಷ ರೂಪಾಯಿಗಳನ್ನು ನೀಡಿರುವುದನ್ನು ಹೇಳಿದ್ದಾನೆ. ಆ ದೋಣಿಯನ್ನು ಮುಂಬೈ ತಲುಪುವ ಮೊದಲೇ ನಾಶಪಡಿಸಲಾಗಿತ್ತು.

ಮುಂಬೈ ದಾಳಿಯ ನಂತರ ಝಾಕೀರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನವು ಬಂಧಿಸಿ, ಆಡಿಯಾಲಾ ಜೈಲಿನಲ್ಲಿಟ್ಟಿತ್ತು. ಈ ಸಂದರ್ಭದಲ್ಲಿ ಐಎಸ್ಐ ಡಿಜಿಯಾಗಿರುವ ಶೂಜಾ ಪಾಶಾ ಭೇಟಿ ನೀಡಿ, ಮುಂಬೈ ದಾಳಿಯ ಪಿತೂರಿಯ ಕುರಿತು ಚರ್ಚೆ ನಡೆಸಿದ್ದ. ಸಾಜಿದ್ (ಲಷ್ಕರ್ ಕಮಾಂಡರ್ ಸಾಜಿದ್ ಮಾಜಿದ್ ಅಥವಾ ಸಾಜಿದ್ ಮಿರ್ ಅಥವಾ ಮುಂಬೈ ದಾಳಿಯ ಸಂದರ್ಭದಲ್ಲಿ ಉಗ್ರರಿಗೆ ನಿರ್ದೇಶನ ನೀಡುತ್ತಿದ್ದ ವಾಸಿ) ತಾನು ಲಖ್ವಿಯನ್ನು ಜೈಲಿನಲ್ಲಿ ಭೇಟಿಯಾಗಿದ್ದೆ ಎಂದು ಹೆಡ್ಲಿಯಲ್ಲಿ ತಿಳಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳವು ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.

ಹೆಡ್ಲಿಯ ಪ್ರಕಾರ ಪಾಕಿಸ್ತಾನ ಬೇಹುಗಾರಿಕಾ ಇಲಾಖೆಯು ಮುಂಬೈ ದಾಳಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಿತ್ತು, ಅಲ್ಲದೆ ಲಷ್ಕರ್ ಇ ತೋಯ್ಬಾಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ