ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದ್ವೆಯಾಗಿದ್ದೇವೆ, ರಕ್ಷಣೆ ಕೊಡ್ರೀ: ಹುಡ್ಗೀರಿಂದ ಅವಾಜ್ (Mayur Vihar police station | living together | Pinki Anand | Same sex couple)
Bookmark and Share Feedback Print
 
ತಾವು 'ಮದುವೆ'ಯಾಗಿದ್ದೇವೆ, ಸಹಬಾಳ್ವೆ ನಡೆಸುತ್ತಿದ್ದೇವೆ ಎಂದು ಅಫಿದಾವಿತ್ ಸಲ್ಲಿಸಿರುವ ಇಬ್ಬರು ಯುವತಿಯರು, ರಕ್ಷಣೆ ನೀಡಬೇಕು ಎಂದು ರಾಷ್ಟ್ರ ರಾಜಧಾನಿಯಲ್ಲಿನ ಪೊಲೀಸ್ ಠಾಣೆಯೊಂದಕ್ಕೆ ದೂರು ನೀಡಿದ್ದಾರೆ!

ಸಲಿಂಗಕಾಮ ಅಪರಾಧವಲ್ಲ ಎಂದು ನ್ಯಾಯಾಂಗವೇ ಸಾರಿದ ನಂತರ ಆ ವರ್ಗಕ್ಕೆ ಸೇರಿರುವ ಮಂದಿ ಬಹಿರಂಗವಾಗಿಯೇ ತಮಗೆ ನ್ಯಾಯ ಬೇಕೆಂದು ಗೋಗರೆಯುತ್ತಿದ್ದಾರೆ. ಅದರಂತೆ 22 ಮತ್ತು 21ರ ಹರೆಯದ ಇಬ್ಬರು ಬಾಲೆಯರು ಕೂಡ ಪೊಲೀಸರ ಮೊರೆ ಹೋಗಿದ್ದಾರೆ.
IFM

ದೆಹಲಿಯ ಮಯೂರ್ ವಿಹಾರ್ ಪೊಲೀಸ್ ಠಾಣೆಗೆ ಅಫಿದಾವಿತ್ ಸಲ್ಲಿಸಿರುವ ಈ 'ದಂಪತಿ', ತಾವು ಸಹಬಾಳ್ವೆ ನಡೆಸಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಈ ಇಬ್ಬರಲ್ಲೊಬ್ಬಾಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ, ಮತ್ತೊಬ್ಬಳು ನಿರುದ್ಯೋಗಿ. ಅವರಿಬ್ಬರು ಜತೆಯಾಗಿ ವಾಸಿಸುವುದಿದ್ದರೆ, ಅದಕ್ಕೆ ಯಾವುದೇ ರೀತಿಯ ಅಫಿದಾವಿತ್ ಸಲ್ಲಿಸುವ ಅಗತ್ಯವಿಲ್ಲ. ಅವರು ಇಷ್ಟ ಬಂದಂತೆ ಇರಬಹುದಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಐ.ಬಿ. ಇರಾನಿ ಪ್ರಕರಣದ ಕುರಿತು ವಿವರ ನೀಡಿದ್ದಾರೆ.

ಮೂಲಗಳ ಪ್ರಕಾರ ಯುವತಿಯರ ಕುಟುಂಬದ ಸದಸ್ಯರಿಂದ ಬೆದರಿಕೆಗಳು ಬರುತ್ತಿರುವುದರಿಂದ ರಕ್ಷಣೆ ಬೇಕೆಂದು ಅವರು ಪೊಲೀಸ್ ಠಾಣೆಗೆ ಬಂದಿದ್ದರು.

ತ್ರಿಲೋಕಪುರಿ ಮತ್ತು ವಜೀರಾಬಾದ್ ನಿವಾಸಿಗಳಾಗಿರುವ ಸಲಿಂಗಿ ಹುಡುಗಿಯರು (Lesbians) ಆರು ತಿಂಗಳುಗಳ ಹಿಂದೆ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಸ್ಪರ ಹತ್ತಿರವಾಗಿದ್ದರು. ನಂತರದ ದಿನಗಳಲ್ಲಿ ಅವರ ನಡುವೆ 'ರೊಮ್ಯಾಂಟಿಕ್' ಸಂಬಂಧ ಬೆಳೆಸಿಕೊಂಡಿದ್ದರು.

ಇದೇ ತಿಂಗಳ ಆರಂಭದಲ್ಲಿ 'ಮದುವೆ'ಯನ್ನೂ ಮಾಡಿಕೊಂಡಿದ್ದಾರೆ. ನಂತರ ತಮ್ಮ ಮನೆಗಳಿಂದ ಪರಾರಿಯಾಗಿದ್ದು, ಆಗಸ್ಟ್ 12ರಿಂದ ಸಹಬಾಳ್ವೆ ನಡೆಸುತ್ತಿದ್ದಾರೆ.

ಈ ಹುಡುಗಿಯರಲ್ಲೊಬ್ಬರ ಹೆತ್ತವರು ಮತ್ತೊಬ್ಬ ಹುಡುಗಿಯ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ. ತಮ್ಮ ಮಗಳನ್ನು ನಿಮ್ಮ ಮಗಳಿಂದ ಬಿಡಿಸಿಕೊಡದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.

ಈ ರೀತಿ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜೋಡಿಯು ಪೊಲೀಸರಿಗೆ ಅಫಿದಾವಿತ್ ಸಲ್ಲಿಸಿದೆ. ಪೊಲೀಸರಿಂದ ನಿರೀಕ್ಷಿತ ಪ್ರತಿಕ್ರಿಯೆ ಲಭ್ಯವಾಗದೇ ಇರುವುದರಿಂದ ಇದೀಗ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಸಲಿಂಗಿಗಳ ಮದುವೆ ಅನೂರ್ಜಿತ...
ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಸಲಿಂಗಿಗಳ ಮದುವೆ ಊರ್ಜಿತವಲ್ಲ. ಆದರೆ ಇಬ್ಬರು ವಯಸ್ಕರು ಪರಸ್ಪರ ಇಚ್ಛೆಯೊಂದಿಗೆ ಸಹಬಾಳ್ವೆ ನಡೆಸಲು ಬಯಸಿದಲ್ಲಿ, ಅದು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲೆ ಪಿಂಕಿ ಆನಂದ್ ಹೇಳುತ್ತಾರೆ.

ಗಂಭೀರ ಬೆದರಿಕೆಗಳು ಬರುತ್ತಿದ್ದರೆ, ಈ ಸಂಬಂಧ ನ್ಯಾಯಾಲಯವು ದಂಪತಿಗೆ ಸೂಕ್ತ ಭದ್ರತೆ ಒದಗಿಸುವ ಕ್ರಮದ ಕುರಿತು ಒಲವು ತೋರಿಸುತ್ತದೆ. ಆದರೆ ಅವರು ವಿರುದ್ಧ ಲಿಂಗಿ ಜೋಡಿಯೋ ಅಥವಾ ಸಲಿಂಗಿ ಜೋಡಿಯೋ ಎಂಬುದನ್ನು ಆಧರಿಸಿರುತ್ತದೆ ಎಂದು ಆಕೆ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ