ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಂತಿದೂತೆ ಥೆರೆಸಾ ಜನ್ಮ ಶತಮಾನೋತ್ಸವಕ್ಕೆ ಚಾಲನೆ (Mother Teresa | birth centenary | Roman Catholic | Pope Benedict XVI)
Bookmark and Share Feedback Print
 
ಶಾಂತಿಯನ್ನೇ ಉಸಿರಾಡಿ ಶ್ರೇಷ್ಠ ಮಾನವತಾವಾದಿ ಎಂದು ಹೆಸರು ಪಡೆದಿದ್ದ ಮದರ್ ಥೆರೆಸಾ ಅವರು ಹುಟ್ಟಿ ಇಂದಿಗೆ ಸರಿಯಾಗಿ ನೂರು ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಕೊಲ್ಕತ್ತಾದಲ್ಲಿ ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಗಿದೆ.

'ಮಿಷನರೀಸ್ ಆಫ್ ಚಾರಿಟಿ'ಯ ಪ್ರಧಾನ ಕಚೇರಿಯಲ್ಲಿ ಕೊಲ್ಕತ್ತಾ ರೋಮನ್ ಕ್ಯಾಥೊಲಿಕ್ ಆರ್ಚ್‌ಬಿಷಪ್ ಆಡಳಿತ ಪ್ರಾಂತ ಹಮ್ಮಿಕೊಂಡಿರುವ ವರ್ಷಗಳಷ್ಟು ಸುದೀರ್ಘವಾಗಿ ನಡೆಯಲಿರುವ ಮದರ್ ಥೆರೆಸಾ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಇಂದು ವಿಧ್ಯುಕ್ತ ಚಾಲನೆ ನೀಡಲಾಯಿತು.

ಮದರ್ ಹೌಸ್‌ನ ಮೊದಲ ಮಹಡಿಯಲ್ಲಿ ಇಂದು ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ರಾಂಚಿಯ ಪ್ರಮುಖ ಪಾದ್ರಿ ಹಾಗೂ ಆರ್ಚ್‌ಬಿಷಪ್ ಟೆಲೆಸ್ಫೋರ್ ಪ್ಲಾಸಿಡಸ್ ಟೊಪ್ಪೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕೊಲ್ಕತ್ತಾದ ಆರ್ಚ್‌ಬಿಷಪ್ ಲೂಕಸ್ ಸಿರ್ಕಾರ್, ಬಾರುಯಿಪುರ್ ಬಿಷಪ್ ಸಲ್ವಾಡೋರ್ ಲೋಬೋ, ಆರ್ಚ್‌ಬಿಷಪ್ ಎಮೆರಿಟಸ್ ಹೆನ್ರಿ ಡಿಸೋಜಾ, ಮದರ್ ಥೆರೆಸಾ ಅವರ ಸಂತಜೀವನದ ಪ್ರತಿಜ್ಞಾವಿಧಿ ಬೋಧಿಸಿದ್ದ ಫಾದರ್ ಬ್ರಿಯಾನ್ ಕೋಲೊಡೈಚಕ್ ಸೇರಿದಂತೆ 60ಕ್ಕೂ ಹೆಚ್ಚು ಇತರ ಪಾದ್ರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಮೊದಲ ಹಂತ ಮುಗಿದ ನಂತರ ನೆರೆದಿದ್ದ ಭಾರೀ ಜನರತ್ತ ಕೆಳಗಿಳಿದು ಬಂದ ಆರ್ಚ್‌ಬಿಷಪ್ ಟೊಪ್ಪೊ, ಭಗಿನಿಯರಾದ ಪ್ರೇಮಾ ಮತ್ತು ನಿರ್ಮಲಾ ಅವರು ಮದರ್ ಹೌಸ್ ಮೈದಾನಕ್ಕೆ ಬಂದು ಶಾಂತಿಯ ಸಂಕೇತವಾದ ಬಲೂನ್‌ಗಳು ಮತ್ತು ಪಾರಿವಾಳಗಳನ್ನು ಹಾರಿ ಬಿಟ್ಟರು. ಈ ಸಂದರ್ಭದಲ್ಲಿ ಅಲ್ಲಿದ್ದ ಸಾವಿರಾರು ಮಂದಿ ಮತ್ತು ಕ್ರೈಸ್ತ ಸನ್ಯಾಸಿಗಳು ಹರ್ಷಚಿತ್ತದಿಂದ ಸಂಭ್ರಮಿಸಿದರು.

1910ರ ಆಗಸ್ಟ್ 26ರಂದು ಮ್ಯಾಸೆಡೋನಿಯಾದಲ್ಲಿ ಜನಿಸಿದ ಥೆರೆಸಾ ಭಾರತದಲ್ಲಿ 1997ರ ಸೆಪ್ಟೆಂಬರ್ ಐದರಂದು ತನ್ನ 87ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದರು.

ಪೋಪ್ ಸಂದೇಶ...
ಮದರ್ ಥೆರೆಸಾ ಅವರನ್ನು ಸದ್ಗುಣ ಸಂಪನ್ನ ಕ್ರೈಸ್ತರ ಅನುಕರಣೀಯ ಮಾದರಿ ಎಂದು XVIನೇ ಪೋಪ್ ಬೆನಡಿಕ್ಟ್ ಬಣ್ಣಿಸಿದ್ದಾರೆ.

ಥೆರೆಸಾ ಅವರ ಆಧ್ಯಾತ್ಮಿಕ ಚಿಂತನೆಗಳು, ಬಡವರು ಮತ್ತು ಅಸೌಖ್ಯಕ್ಕೊಳಗಾದವರಿಗೆ ನೀಡಿರುವ ಸೇವೆಗಳ ಉದಾಹರಣೆಗಳನ್ನು ಪ್ರತಿಯೊಬ್ಬರೂ ಗಮನಕ್ಕೆ ತೆಗೆದುಕೊಂಡು ಪಾಲಿಸಬೇಕು ಎಂದು ಒತ್ತಾಯಿಸಿರುವ ಪೋಪ್, ಗುರುವಾರದಿಂದ ಆರಂಭವಾಗಿರುವ ಥೆರೆಸಾ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳಿಗೆ ವ್ಯಾಟಿಕನ್‌ನಿಂದ ಶುಭ ಹಾರೈಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ