ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ನಾಯಕನಿಂದ ಯುವತಿ ಅತ್ಯಾಚಾರ; ಭೂಗತ (Congress | rape | Assam | Moni Kumar Subba)
Bookmark and Share Feedback Print
 
ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮಾಜಿ ಸಂಸದ ಮೋನಿ ಕುಮಾರ್ ಸುಬ್ಬ ಭೂಗತರಾಗಿದ್ದಾರೆ. ಗುವಾಹತಿ ಉಚ್ಚ ನ್ಯಾಯಾಲಯ ಎರಡೆರಡು ಬಾರಿ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದ ನಂತರ ಅವರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಅಸ್ಸಾಂ ಮಾಜಿ ಸಂಸದನಾಗಿರುವ ಸುಬ್ಬಾ ಅವರನ್ನು ಬಂಧಿಸುವ ಸಲುವಾಗಿ ರಾಜ್ಯದ ಪೊಲೀಸ್ ಅಧಿಕಾರಿಗಳ ತಂಡವೊಂದು ದೆಹಲಿಯಲ್ಲಿ ಬೀಡು ಬಿಟ್ಟಿದೆ. ಬುಧವಾರ ಮತ್ತು ಗುರುವಾರ ದಕ್ಷಿಣ ದೆಹಲಿಯ ಛತ್ತಾರಪುರದಲ್ಲಿನ ಸುಬ್ಬಾ ಅವರ ತೋಟದ ಮನೆಗಳಿಗೆ ಅಸ್ಸಾಂ ಮತ್ತು ದೆಹಲಿ ಪೊಲೀಸರು ದಾಳಿ ನಡೆಸಿದರಾದರೂ, ಅವರನ್ನು ಪತ್ತೆ ಮಾಡುವುದು ಸಾಧ್ಯವಾಗಿಲ್ಲ.

ಮೂರು ತಿಂಗಳ ಹಿಂದೆ ಯುವತಿಯೊಬ್ಬಳನ್ನು ಅತ್ಯಾಚಾರ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸುಬ್ಬಾ ವಿರುದ್ಧ ಗುವಾಹತಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ವೈದ್ಯಕೀಯ ಪರೀಕ್ಷಾ ವರದಿಯೂ ಅತ್ಯಾಚಾರ ನಡೆದಿದೆ ಎಂದು ಪುರಸ್ಕರಿಸಿದ್ದರಿಂದ ತಕ್ಷಣವೇ ಕಾರ್ಯ ಪ್ರವೃತ್ತರಾಗಿದ್ದ ಸುಬ್ಬಾ ಕೆಳಗಿನ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.

ಇದರ ವಿರುದ್ಧ ಹೈಕೋರ್ಟ್‌ಗೆ ಮನವಿ ಹೋದ ಹಿನ್ನೆಲೆಯಲ್ಲಿ ಸುಬ್ಬಾ ಜಾಮೀನನ್ನು ರದ್ದುಗೊಳಿಸಲಾಗಿತ್ತು. ಅಲ್ಲದೆ ಅವರ ಜಾಮೀನು ಅರ್ಜಿಯನ್ನು ಕೂಡ ತಿರಸ್ಕರಿಸಲಾಗಿತ್ತು.

ಈ ಹಿಂದೆಯೂ ಹಲವಾರು ವಿವಾದಗಳಲ್ಲಿ ಮಾಜಿ ಸಂಸದ ಸುಬ್ಬಾ ಅವರು ಸಿಲುಕಿದ್ದಾರೆ. ನೇಪಾಳಿ ಪ್ರಜೆಯಾಗಿರುವ ಸುಬ್ಬಾ ಅಲ್ಲಿ ಹತ್ಯಾ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಜೈಲಿನಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. ಅವರ ನೇಪಾಳಿ ಹೆಸರು ಮೋನಿ ರಾಜ್ ಲಿಂಬೋ ಎಂದಾಗಿತ್ತು ಎಂದು ಸ್ವತಃ ಸಿಬಿಐ ಹೇಳಿತ್ತು.

ಸುಬ್ಬಾ ಅವರು ಭಾರತದಲ್ಲಿ ಜನಿಸಿದ್ದನ್ನು ಖಚಿತಪಡಿಸುವ ಜನನ ಪ್ರಮಾಣ ಪತ್ರ ಹೊರತುಪಡಿಸಿ ಉಳಿದೆಲ್ಲ ದಾಖಲೆಗಳು ನೇಪಾಳ ಪ್ರಜೆ ಎಂದು ತೋರಿಸುತ್ತಿದ್ದವು. ಪ್ರಸಕ್ತ ಈ ಪ್ರಕರಣ ನ್ಯಾಯಾಲಯದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ