ಚತ್ತಿಸ್‌ಗಢ್ ರಾಜ್ಯದ ಕಂಕರ್ ಜಿಲ್ಲೆಯಲ್ಲಿ ನಕ್ಸಲೀಯರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ ಭಧ್ರತಾ ಪಡೆಗಳ ಮೇಲೆ 100 ಕ್ಕೂ ಹೆಚ್ಚಿನ ಸಂಖ್ಯೆಯ ನಕ್ಲಲೀಯರು ದಾಳಿ ನಡೆಸಿ ಐವರು ಯೋಧರನ್ನು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಕ್ಸಲೀಯ ದಾಳಿಗೆ ಪ್ರತ್ಯುತ್ತರವಾಗಿ ಮರುದಾಳಿ ನಡೆಸಿದ ಭದ್ರತಾ ಯೋಧರು ಮೂವರು ನಕ್ಸಲೀಯರನ್ನು ಹತ್ಯೆ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರಾಮ್‌ನಿವಾಸ್ ತಿಳಿಸಿದ್ದಾರೆ.
ಭದ್ರತಾ ಪಡೆಯ 77 ಯೋಧರ ತಂಡವನ್ನು ನಕ್ಸಲೀಯ ನಿಗ್ರಹಕ್ಕೆ ಮಾವೋಪೀಡಿತ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಕಂಕರ್ ಜಿಲ್ಲೆಯ ಭಾಸುಕಿ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಪ್ರವೇಶಿಸುತ್ತಿದ್ದಂತೆ, ನಕ್ಸಲೀಯರು ಗುಂಡಿನ ದಾಳಿ ನಡೆಸಿ ಐವರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.