ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 656 ಅಪರಾಧಿಗಳ ಪತ್ತೆಗೆ ನೆರವು ನೀಡಿ:ಇಂಟರ್‌ಪೋಲ್ (Interpol india)
Bookmark and Share Feedback Print
 
ಅಂತಾರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆ ಇಂಟರ್‌ಪೋಲ್‌ಗೆ ಭಾರತದ ಸುಮಾರು 656 ಅಪರಾಧಿಗಳ ಪತ್ತೆಗೆ ನೆರವಾಗುವಂತೆ ಕೇಂದ್ರ ಸರಕಾರವನ್ನು ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ವಿದೇಶಗಳಲ್ಲಿ ಅಪರಾಧಗಳನ್ನು ಎಸಗಿರುವ ಭಾರತದ 656 ಅಪರಾಧಿಗಳು ವಿದೇಶಗಳಲ್ಲಿ ನೆಲೆಸಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ವಿಶ್ವ ಅಪರಾಧ ಪತ್ತೆ ದಳ ಭಾರತಕ್ಕೆ ಮಾಹಿತಿ ನೀಡಿದೆ.

ಆರೋಪಿಗಳ ಚಲನವಲನಗಳ ಮೇಲೆ ಸಂಪೂರ್ಣ ನಿಗಾಯಿರಿಸಿದ್ದು, ಎನ್‌ಕೌಂಟರ್ ನಡೆಸಲು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅನುಮತಿ ಕೋರಲಾಗಿದೆ. ಭಾರತ ಸರಕಾರದ ನೆರವಿನ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ 656 ಅಪರಾಧಿಗಳ ಪಟ್ಟಿಯಲ್ಲಿ, ಖ್ಯಾತ ಭೂಗತ ದೊರೆ ದಾವುದ್ ಇಬ್ರಾಹಿಂ ಕೂಡಾ ಸ್ಥಾನಪಡೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಂಟರ್ಪೋಲ್ ಭಾರತ