ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಯಲಲಿತಾ ಪಕ್ಷದ ಮೂವರಿಗೆ ಗಲ್ಲು ವಿಧಿಸಿದ ಸುಪ್ರೀಂ (Dharmapuri Bus Burning Case | AIADMK | Jayalalithaa | Tamil Nadu)
Bookmark and Share Feedback Print
 
ಧರ್ಮಪುರಿಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರು ಜೀವಂತವಾಗಿ ಸುಟ್ಟು ಕರಕಲಾಗಿದ್ದ ಪ್ರಕರಣದಲ್ಲಿ ಜಯಲಲಿತಾ ಅವರ ಎಐಎಡಿಎಂಕೆಯ ಮೂವರು ಸದಸ್ಯರಿಗೆ ಸರ್ವೋಚ್ಛ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ಘೋಷಿಸಿದೆ.

ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಯಲಲಿತಾ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದನ್ನು ಪ್ರತಿಭಟಿಸಿ ಬಸ್ಸೊಂದಕ್ಕೆ ಎಐಎಡಿಎಂಕೆ ಕಾರ್ಯಕರ್ತರು ದಾಳಿ ನಡೆಸಿದ್ದರು.
PR

2000ನೇ ಇಸವಿಯ ಫೆಬ್ರವರಿ 2ರಂದು 44 ವಿದ್ಯಾರ್ಥಿಗಳು ಮತ್ತು ಇಬ್ಬರು ಉಪನ್ಯಾಸಕರಿದ್ದ ಕಾಲೇಜು ಬಸ್ಸಿಗೆ ಬೆಂಕಿ ಹಚ್ಚಲಾಗಿತ್ತು. ಬಸ್ಸಿನಲ್ಲಿ ಇತರರು ಪಾರಾಗಿದ್ದರೂ, ಕೊಯಂಬತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಕೋಕಿಲವಾಣಿ, ಗಾಯತ್ರಿ ಮತ್ತು ಹೇಮಲತಾ ವಿದ್ಯಾರ್ಥಿನಿಯರು ಜೀವಂತವಾಗಿ ಸುಟ್ಟು ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ 2007ರಲ್ಲಿ ಸಿ. ಮುನಿಯಪ್ಪನ್, ನೆಡುಂಚೆಳಿಯನ್ ಮತ್ತು ರವೀಂದ್ರನ್ ಎಂಬ ಮೂವರಿಗೆ ಮರಣ ದಂಡನೆ ವಿಧಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಬಿ.ಎಸ್. ಚೌಹಾನ್ ಎತ್ತಿ ಹಿಡಿದಿದ್ದಾರೆ.

ವಿಚಾರಣಾ ನ್ಯಾಯಾಲಯವೂ ಈ ಮೂವರು ದೋಷಿಗಳು ಎಂದು ಹೇಳಿ, ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಿತ್ತು. ಈ ಪ್ರಕರಣದಲ್ಲಿ ಇತರ 25 ಮಂದಿಗೆ ಎರಡು ತಿಂಗಳಿಂದ ಎರಡು ವರ್ಷಗಳವರೆಗಿನ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.

ಇದು ಸಮಾಜದ ವಿರುದ್ಧ ನಡೆಸಲಾದ ಹೇಯ, ಕ್ರೂರ ಪ್ರಕರಣ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಘಟನೆ ನಡೆಯುವಾಗ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳಿಗೆ ಪೊಲೀಸರೂ ಸಹಕಾರ ನೀಡದೇ ಇರುವುದನ್ನು ತೀವ್ರವಾಗಿ ಖಂಡಿಸಿದೆ.

ಘಟನೆ ನಡೆಯುವಾಗ ಪೊಲೀಸರು ಮತ್ತು ಮಾಧ್ಯಮದವರು ಸ್ಥಳದಲ್ಲಿದ್ದರು. ಆದರೆ ಯಾರೊಬ್ಬರೂ ಸಹಾಯಕ್ಕೆ ಧಾವಿಸಿರಲಿಲ್ಲ. ಪೊಲೀಸರು ಹಾಗೆ ಕೈ ಕಟ್ಟಿ ಕುಳಿತಿರಬಾರದಿತ್ತು. ಪೊಲೀಸರು ಯಾಕೆ ಸಹಾಯ ಮಾಡಲಿಲ್ಲ ಎಂದು ನ್ಯಾಯಾಲಯವು ಪ್ರಶ್ನಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ