ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ವಿಚಾರಣೆ ಮುಂದಕ್ಕೆ; ಸ್ಥಳೀಯ ಉಗ್ರರಿಗೆ ವಾರೆಂಟ್ (Pakistani terrorist | Ajmal Kasab | Faheem Ansari | Sabauddin Ahmed)
Bookmark and Share Feedback Print
 
ಮುಂಬೈ ದಾಳಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ವಿಧಿಸಲಾಗಿರುವ ಮರಣ ದಂಡನೆಯನ್ನು ಖಚಿತಪಡಿಸುವ ಕುರಿತು ನಡೆಸಬೇಕಾಗಿರುವ ವಿಚಾರಣೆಯನ್ನು ಆತನ ವಕೀಲರ ಮನವಿ ಮೇರೆಗೆ ಬಾಂಬೆ ಹೈಕೋರ್ಟ್ ಮೂರು ವಾರಗಳಿಗೆ ಮುಂದೂಡಿದೆ. ಅದೇ ಹೊತ್ತಿಗೆ ವಿಚಾರಣಾ ನ್ಯಾಯಾಲಯವು ಇಬ್ಬರು ಶಂಕಿತ ಭಾರತೀಯ ಉಗ್ರರಿಗೆ ವಾರೆಂಟ್ ಜಾರಿಗೊಳಿಸಿದೆ.

ವಿಚಾರಣಾ ನ್ಯಾಯಾಲಯದಲ್ಲಿ ಕಸಬ್ ಪರ ವಾದಿಸಿದ್ದ ವಕೀಲರು ಅಗತ್ಯ ಮಾಹಿತಿಗಳನ್ನು ನೀಡುವಾಗ ವಿಳಂಬವುಂಟಾಗಿರುವುದರಿಂದ ನಮಗೆ ಮೇಲ್ಮನವಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಬೇಕೆಂದು ಹೈಕೋರ್ಟ್‌ನಲ್ಲಿನ ಕಸಬ್ ಪರ ವಕೀಲರಾದ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಮನವಿ ಮಾಡಿಕೊಂಡರು.

ಇದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆ ಅವರು ಸೆಪ್ಟೆಂಬರ್ 20ಕ್ಕೆ ಪ್ರಕರಣವನ್ನು ಮುಂದೂಡಿದರು. ಅದಕ್ಕೂ ಮೊದಲು ತಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಕಸಬ್ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದ್ದ ಇಬ್ಬರು ಭಾರತೀಯ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ವಿರುದ್ಧ ಸರಕಾರವು ಈ ಹಿಂದಿನ ಕಲಾಪದ ಸಂದರ್ಭದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಅದರಂತೆ ಸೆಷನ್ಸ್ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿದೆ.

ಪ್ರಸಕ್ತ ಈ ಇಬ್ಬರೂ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಜೈಲುಗಳಲ್ಲಿದ್ದಾರೆ.

2008ರ ನವೆಂಬರ್ 26ರಂದು ಮುಂಬೈಯ ಹಲವೆಡೆ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ 10 ಮಂದಿ ಉಗ್ರರು ದಾಳಿ ನಡೆಸಿದ್ದರು. ಇವರಲ್ಲಿ ಜೀವಂತವಾಗಿ ಕೈಗೆ ಸಿಕ್ಕಿದ್ದು ಕಸಬ್ ಮಾತ್ರ. ಈತನಿಗೆ ವಿಶೇಷ ನ್ಯಾಯಾಲಯವು ಕೆಲ ತಿಂಗಳ ಹಿಂದಷ್ಟೇ ಗಲ್ಲು ಶಿಕ್ಷೆ ವಿಧಿಸಿತ್ತು. ಇವರಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಲಾಗಿರುವ ಇಬ್ಬರು ಭಾರತೀಯರನ್ನು ಕೋರ್ಟ್ ಖುಲಾಸೆಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ