ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಒರೆಸಿದರೂ ಗೇಮ್ಸ್ ಸ್ಥಳ ಸಿದ್ಧವಾಗದು: ಮೋದಿ (Gujarat | Narendra Modi | Manmohan Singh | Commonwealth Games)
Bookmark and Share Feedback Print
 
ಕಾಮನ್‌ವೆಲ್ತ್ ಗೇಮ್ಸ್ ಪೂರ್ವ ತಯಾರಿ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗುರಿ ಮಾಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಒಂದು ವೇಳೆ ಕ್ರೀಡಾಂಗಣಗಳನ್ನು ಅವರು ಒರೆಸಿ ಚೊಕ್ಕವಾಗಿಡಲು ಮುಂದಾದರೂ ನಿಗದಿತ ಸಮಯದಲ್ಲಿ ಅದು ಸಿದ್ಧವಾಗದು ಎಂದಿದ್ದಾರೆ.

ಗೇಮ್ಸ್ ಸಿದ್ಧತೆಗಳು ಇನ್ನೂ ಅಸ್ತವ್ಯಸ್ತ ಸ್ಥಿತಿಯಲ್ಲೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ ಗೇಮ್ಸ್ ಸಂಘಟಕರನ್ನು ಲೇವಡಿ ಮಾಡಿದ್ದು, ಇದೇ ಕೆಲಸವನ್ನು ಅಹಮದಾಬಾದ್‌ನ ಯಾವುದೇ ಸರಕಾರಿ ಸ್ಥಳೀಯ ಸಂಸ್ಥೆಗೆ ನೀಡಿದ್ದರೆ ಎಲ್ಲಾ ಕ್ರೀಡಾಂಗಣಗಳ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುತ್ತಿತ್ತು ಎಂದರು.

ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಏನೇನು ನಡೆಯುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ. ನಮ್ಮ ಪ್ರಧಾನಿಯವರೇ ಸ್ವತಃ ನೆಲ ಒರೆಸಲು ಶುರು ಮಾಡಿದರೂ, ಗೇಮ್ಸ್ ಹೊತ್ತಿಗೆ ಕ್ರೀಡಾಂಗಣಗಳು ಸಿದ್ಧವಾಗುವುದಿಲ್ಲ ಎಂದರು.

ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಸಂಘಟನಾ ಸಮಿತಿಗೆ ನಾಲ್ಕು ವರ್ಷಗಳನ್ನು ನೀಡಲಾಗಿತ್ತು. ಆದರೆ ಅವರು ಈಗಲೂ ಪರದಾಡುತ್ತಿದ್ದಾರೆ. ಈ ಕಾರ್ಯವನ್ನು ಅವರು ಅಹಮದಾಬಾದ್ ನಗರ ಪಾಲಿಕೆಗೆ ನೀಡಬೇಕಿತ್ತು. ಖಂಡಿತಾ ಅವರು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುತ್ತಿದ್ದರು ಎಂದು ಕನಿಷ್ಠ ನಾಲ್ಕು ಬಾರಿ ಡೆಡ್‌ಲೈನ್ ತಪ್ಪಿಸಿಕೊಂಡಿದ್ದ ಸಂಘಟನಾ ಸಮಿತಿಯನ್ನು ಮೋದಿ ಲೇವಡಿ ಮಾಡಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ...
ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ತನ್ನ ಮಾಜಿ ಸಚಿವ ಅಮಿತ್ ಶಾ ಅವರನ್ನು ಬಂಧಿಸಿರುವ ಕಾಂಗ್ರೆಸ್ ಸಿಬಿಐಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ತನ್ನ ಆರೋಪವನ್ನು ಪುನರುಚ್ಛರಿಸಿದ ಮೋದಿ, ಸಿಬಿಐ ತಮ್ಮನ್ನು ಪ್ರತಿ ಬಾರಿಯೂ ರಕ್ಷಿಸುತ್ತದೆ ಎಂದು ದೆಹಲಿ ಸುಲ್ತಾನರು ಭಾವಿಸಿದ್ದಾರೆ; ಆದರೆ ಅವರನ್ನು ಕಾಮನ್‌ವೆಲ್ತ್ ಗೇಮ್ಸ್ ಸಂಕಷ್ಟದಿಂದ ಸಿಬಿಐಗೆ ರಕ್ಷಿಸಲಾಗದು ಎಂದರು.

ಅದೇ ಹೊತ್ತಿಗೆ ಸಿಬಿಐ ಹೆಸರಿನಲ್ಲಿ ಗುಜರಾತ್‌ಗೆ ಬೆದರಿಕೆ ಹಾಕುವುದನ್ನು ಕೇಂದ್ರ ಸರಕಾರ ಮುಂದುವರಿಸಿದೆ ಎಂದು ಆರೋಪಿಸಿರುವ ಅವರು, ಯುಪಿಎ ಸರಕಾರಕ್ಕೆ ಎಚ್ಚರಿಕೆ ರವಾನಿಸಿದರು.

ಗುಜರಾತಿನ ಅಭಿವೃದ್ಧಿಯನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯಕ್ಕೆ ಸೇವೆ ಸಲ್ಲಿಸುವುದೆಂದರೆ ಅದು ದೇಶ ಸೇವೆಯಂತೆ. ಅದಕ್ಕಾಗಿ ಪ್ರತ್ಯೇಕ ಸೇವೆ ಮಾಡುವ ಅಗತ್ಯವಿಲ್ಲ. ಗುಜರಾತಿನ ಯಾವೊಬ್ಬ ವ್ಯಕ್ತಿಯೂ ತೊಂದರೆಗೊಳಗಾಗಬಾರದ ಮತ್ತು ಸೂಕ್ತ ಉದ್ಯೋಗವನ್ನು ಪಡೆಯಬೇಕೆಂಬುದೇ ನನ್ನ ಧ್ಯೇಯ ಮತ್ತು ಅದೇ ನನ್ನ ದೇಶ ಸೇವೆ ಎಂದರು.

ತನ್ನನ್ನು ಅಭಿವೃದ್ಧಿಯ ವೇದಿಕೆಯಲ್ಲಿ ಎದುರಿಸುವಂತೆಯೂ ಇದೇ ಸಂದರ್ಭದಲ್ಲಿ ಮೋದಿ ಸವಾಲು ಹಾಕಿದರು.

ಕೆಲವು ಬಾರಿ ಅಭಿವೃದ್ಧಿಯೂ ಕೆಲವರಿಗೆ ನೋವನ್ನುಂಟು ಮಾಡುತ್ತದೆ. ನೀವು ಅಭಿವೃದ್ಧಿಯ ವೇದಿಕೆಯಲ್ಲಿ ಬಂದು ನನ್ನ ಎದುರು ಸ್ಪರ್ಧಿಸಿ ಎಂದು ನಾನು ದೆಹಲಿ ಸುಲ್ತಾನರಿಗೆ ಸವಾಲು ಹಾಕಿದ್ದೆ. ಆದರೆ ಅವರು ಅದಕ್ಕೆ ಸಿದ್ಧರಿಲ್ಲ. ನಿಮಗೆ (ಕೇಂದ್ರ ಸರಕಾರ) ಇಡೀ ದೇಶವಿದೆ, ಆದರೆ ನಮ್ಮದು ಚಿಕ್ಕ ರಾಜ್ಯ. ಆದರೂ ದೆಹಲಿ ಸುಲ್ತಾನರಿಗಿಂತ ನಮ್ಮ ರಾಜ್ಯ ಮುನ್ನಡೆ ಸಾಧಿಸುತ್ತದೆ ಎನ್ನುವುದು ನನ್ನ ಸವಾಲು ಎಂದು ಘೋಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ