ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಜೈಲಿನಲ್ಲಿದ್ದ ಭಾರತೀಯ ಮದ್ರಸಾ ಶಿಕ್ಷಕ ಬಿಡುಗಡೆ (Madrasa teacher | Pak jail | Howrah | Abdul Karim)
Bookmark and Share Feedback Print
 
ಸುಮಾರು ಏಳು ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿ ಕೈದಿಯಾಗಿ ಬದುಕು ಸಾಗಿಸಿದ್ದ ಪಶ್ಚಿಮ ಬಂಗಾಲದ ಹೌರಾದಲ್ಲಿನ ಮದ್ರಸಾ ಶಿಕ್ಷಕರೊಬ್ಬರು ಅದೃಷ್ಟವಶಾತ್ ಬಿಡುಗಡೆಗೊಂಡು ತವರಿಗೆ ಮರಳಿದ್ದಾರೆ.

ಅಬ್ದುಲ್ ಕರೀಂ ಎಂಬವರೇ ಪಾತಕಿಗಳ ನಾಡಿನಿಂದ ವಾಪಸ್ ಬಂದವರು. 2003ರಲ್ಲಿ ಪಂಜಾಬ್ ಗಡಿ ದಾಟಿ ಆಕಸ್ಮಿಕವಾಗಿ ಹೋಗಿದ್ದ ಸಂದರ್ಭದಲ್ಲಿ ಪಾಕಿಸ್ತಾನಿ ರೇಂಜರ್ಸ್ ಕರೀಮ್‌ರನ್ನು ಬಂಧಿಸಿದ್ದರು. ಇದೀಗ ಅಮೃತಸರದಿಂದ ಬಸ್ ಮೂಲಕ ತವರಿಗೆ ವಾಪಸ್ಸಾಗಿದ್ದಾರೆ.

ಕರೀಂ ಪ್ರಕಾರ ನೆರೆ ರಾಷ್ಟ್ರದಲ್ಲಿ ಇವರು ತಂಗಿರುವ ಜೈಲಿನಲ್ಲಿ ಇನ್ನೂ ಏಳು ಮಂದಿ ಇತರ ಭಾರತೀಯ ಕೈದಿಗಳಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಫುಟ್ಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಚೆಂಡು ಗಡಿಯಾಚೆ ಬಿದ್ದದ್ದನ್ನು ಹೆಕ್ಕಲೆಂದು ಹೋಗಿ ಪಾಕ್ ಪಾಲಾಗಿದ್ದ ಕರೀಂ ಅವರಿಗೆ ಈಗ 27ರ ಹರೆಯ. ಆ ತಪ್ಪಿಗಾಗಿ ಅವರನ್ನು ರಾವಲ್ಪಿಂಡಿಯಲ್ಲಿನ ಸೆಂಟ್ರಲ್ ಜೈಲಿನಲ್ಲಿಡಲಾಗಿತ್ತು.

ಕರೀಂ ಪಾಕ್ ಜೈಲಿನಲ್ಲಿರುವುದನ್ನು 2007ರಲ್ಲಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಪತ್ತೆ ಹಚ್ಚಿತ್ತು. ಸಾಮಾಜಿಕ ಸೇವಾ ಸಂಸ್ಥೆ 'ದಿಗಂತ' ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದ ಬಳಿಕ ಭಾರತದ ವಿದೇಶಾಂಗ ಸಚಿವಾಲಯವು ಈ ಕುರಿತು ಪಾಕಿಸ್ತಾನಿ ಸರಕಾರದ ಜತೆ ಮಾತುಕತೆ ನಡೆಸಿತ್ತು.

ಕರೀಂ ಅವರ ಬಿಡುಗಡೆಯ ಕುರಿತು ಉಭಯ ರಾಷ್ಟ್ರಗಳ ನಡುವೆ ಸುದೀರ್ಘ ಮಾತುಕತೆ ಪ್ರಕ್ರಿಯೆಗಳು ನಡೆದು ಕೊನೆಗೂ ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ತೀರ್ಮಾನಕ್ಕೆ ಬರಲಾಗಿತ್ತು. ಆದರೂ ಇದು ಜಾರಿಗೆ ಬಂದದ್ದು ಆಗಸ್ಟ್ ತಿಂಗಳಲ್ಲಿ. ಕಳೆದ ಭಾನುವಾರವಷ್ಟೇ ಅವರು ಪಶ್ಚಿಮ ಬಂಗಾಲದ ಉತ್ತರ ದಿಂಜಾಪುರ್ ಜಿಲ್ಲೆಯ ಬೇತಾಬಿ ಗ್ರಾಮಕ್ಕೆ ಮರಳಿದ್ದಾರೆ.

ದುರಂತವೆಂದರೆ ಮಗ ಇಂದು ಬಿಡುಗಡೆಯಾಗುತ್ತಾನೆ, ನಾಳೆ ಬಿಡುಗಡೆಯಾಗುತ್ತಾನೆ ಎಂದು ಕಾಯುತ್ತಿದ್ದ ಕರೀಂ ಅವರ ತಂದೆ ಮೊಹಮ್ಮದ್ ತಾಜುದ್ದೀನ್ ಮೇ ತಿಂಗಳಲ್ಲಿ ಇಹಲೋಕ ತ್ಯಜಿಸಿರುವುದು.

ಮೂಲಗಳ ಪ್ರಕಾರ 2008ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನಿ ಜೈಲಿನಿಂದ ಬಿಡುಗಡೆಯಾದ ಮೊದಲ ಭಾರತೀಯ ಕರೀಂ.
ಸಂಬಂಧಿತ ಮಾಹಿತಿ ಹುಡುಕಿ