ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದನಿ ಸಹೋದರನ ದೂರು; ಬೆಂಗಳೂರು ಎಸಿಪಿಗೆ ಸಮನ್ಸ್ (Bangalore ACP | Kerala court | Abdul Nasser Madani | Abdul Salam)
Bookmark and Share Feedback Print
 
ಶಂಕಿತ ಭಯೋತ್ಪಾದಕ, ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು ಕರ್ನಾಟಕ ಪೊಲೀಸರು ಹರಸಾಹಸಪಟ್ಟು ಬಂಧಿಸಿದ ನಂತರ ಇದೀಗ ಆತನ ಸಹೋದರ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.

ತನ್ನ ಸಹೋದರ ಮದನಿಯನ್ನು ಕಾನೂನು ಪ್ರಕಾರವಾಗಿ ಬೆಂಗಳೂರು ಪೊಲೀಸರು ಬಂಧಿಸಿಲ್ಲ ಎಂದು ಅಬ್ದುಲ್ ಸಲೇಂ ದೂರು ನೀಡಿರುವ ಹಿನ್ನೆಲೆಯಲ್ಲಿ ಕೇರಳದ ಕೊಲ್ಲಂನಲ್ಲಿನ ಸ್ಥಳೀಯ ನ್ಯಾಯಾಲಯವು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.

ಸೆಪ್ಟೆಂಬರ್ 13ರೊಳಗೆ ಹಾಜರಾಗುವಂತೆ ಬೆಂಗಳೂರು ಸಹಾಯಕ ಪೊಲೀಸ್ ಆಯುಕ್ತ ಓಂಕಾರಯ್ಯ ಅವರಿಗೆ ಮುಖ್ಯ ನ್ಯಾಯಿಕ ದಂಡಾಧಿಕಾರಿ ಸೌಂದರೇಶ್ ನಿರ್ದೇಶನ ನೀಡಿದ್ದಾರೆ.

2008ರ ಬೆಂಗಳೂರು ಸ್ಫೋಟ ಸಂಬಂಧ ಆಗಸ್ಟ್ 17ರಂದು ಪಿಡಿಪಿ ನಾಯಕನನ್ನು ಬೆಂಗಳೂರು ಪೊಲೀಸರ ತಂಡವು ಆತನ ಅನ್ವರಶ್ಯೇರಿಯಲ್ಲಿನ ಶಿಬಿರದ ಸಮೀಪ ಕಾನೂನುಗಳಿಗೆ ವಿರುದ್ಧವಾಗಿ ಬಂಧಿಸಲಾಗಿತ್ತು ಎಂದು ಸಲೇಂ ಪ್ರಕರಣ ದಾಖಲಿಸಿದ್ದ.

ಕೊಲ್ಲಂ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಓಂಕಾರಯ್ಯ ಅವರನ್ನು ನಿನ್ನೆಯೇ ಹಾಜರಾಗುವಂತೆ ಕೋರ್ಟ್ ಈ ಹಿಂದೆ ಸಮನ್ಸ್ ನೀಡಿತ್ತು. ಆದರೆ ಕೊಲ್ಲಂ ಎಸ್‌ಪಿಯವರ ಬದಲು ಸರಕಾರಿ ವಕೀಲರು ಬಂದಿದ್ದರು. ಎಎಸ್‌ಪಿ ಪರವಾಗಿ ಯಾರೊಬ್ಬರೂ ಬಂದಿರಲಿಲ್ಲ.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಸೆಪ್ಟೆಂಬರ್ 13ರೊಳಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ.

ಕರ್ನಾಟಕ ಪೊಲೀಸರು ಮದನಿಯನ್ನು ಬಂಧಿಸಿದ ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ನಂತರ ಅವರು ಅಲ್ಲಿಂದ ವರ್ಗಾವಣೆ ವಾರೆಂಟ್ ಪಡೆದುಕೊಂಡು ಆತನನ್ನು ಬೆಂಗಳೂರಿಗೆ ಕರೆದೊಯ್ಯಬೇಕಿತ್ತು. ಹಾಗೆ ಮಾಡದೆ ನೇರವಾಗಿ ಕರೆದೊಯ್ದಿದ್ದಾರೆ ಎನ್ನುವುದು ಮದನಿ ಸಹೋದರನ ದೂರು.

ಓರ್ವನ ಸಾವು ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ 2008ರ ಬೆಂಗಳೂರು ಸರಣಿ ಸ್ಫೋಟ ಸಂಬಂಧ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ ನಂತರ ಕರ್ನಾಟಕ ಪೊಲೀಸರು ಶಂಕಿತನನ್ನು ಬಂಧಿಸಿದ್ದರು. ಪ್ರಸಕ್ತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಮದನಿ ಪರ ಹೋರಾಟ...
ಈ ನಡುವೆ ಮದನಿಗೆ ಅನ್ಯಾಯವಾಗಿದೆ ಎಂದು ಅಲವತ್ತುಕೊಂಡಿರುವ ಆತನ ಬೆಂಬಲಿಗರು, ಕಾನೂನು ಹೋರಾಟಕ್ಕಾಗಿ ಕೇರಳದಾದ್ಯಂತದ ಮಸೀದಿಗಳಲ್ಲಿ ನಿಧಿ ಸಂಗ್ರಹಿಸಲಿದ್ದಾರೆ.

'ಮದನಿ ನ್ಯಾಯ ವೇದಿಕೆ' ಎಂಬ ಸಂಘಟನೆಯೊಂದನ್ನು ಇದಕ್ಕೆ ಹುಟ್ಟು ಹಾಕಲಾಗಿದೆ. ಮದನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಘಟನೆಯ ಕಾನೂನು ವಿಭಾಗವು 15 ಜನಪ್ರಿಯ ವಕೀಲರನ್ನು ನೇಮಕ ಮಾಡಿಕೊಂಡಿದೆ ಎಂದು ಇದರ ಅಧ್ಯಕ್ಷ ಹಾಗೂ ಮಾಜಿ ಸಂಸದ ಸೆಬಾಸ್ಟಿಯನ್ ಪೌಲ್ ಕೊಲ್ಲಂನಲ್ಲಿ ಪ್ರಕಟಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ