ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆದರಿಕೆಗಳಿಗೆ ಸೊಪ್ಪು ಹಾಕುವವಳು ನಾನಲ್ಲ: ಜಯಲಲಿತಾ (AIADMK | Jayalalithaa | Madurai | M Karunanidhi)
Bookmark and Share Feedback Print
 
ತಾನು ಬೆದರಿಕೆಗಳಿಗೆ ಹೆದರುವವಳಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಡಿಎಂಕೆ ಪಕ್ಷವನ್ನು ಹೆಸರಿಸದೆ ತಿರುಗೇಟು ನೀಡಿರುವ ಎಐಎಡಿಎಂಕೆ ವರಿಷ್ಠೆ ಜಯಲಲಿತಾ, ನಿರಂತರ ಜೀವ ಬೆದರಿಕೆಗಳು ಬರುತ್ತಿವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನನ್ನ ಜೀವಕ್ಕಿರುವ ಬೆದರಿಕೆಗಳನ್ನು ನಾನು ಲೆಕ್ಕಿಸುತ್ತಿಲ್ಲ, ಅದಕ್ಕೆ ಯಾವುದೇ ರೀತಿಯಲ್ಲೂ ನಾನು ಹೆದರುತ್ತಿಲ್ಲ. ಇಂತಹ ಬೆದರಿಕೆಗಳನ್ನು ನಾನು ಸತತವಾಗಿ ಎದುರಿಸುತ್ತಾ ಬಂದಿದ್ದೇನೆ ಎಂದು ಪತ್ರಕರ್ತರೊಂದಿಗೆ ಹೇಳಿಕೊಂಡರು.

ಮುಂದಿನ ತಿಂಗಳು ಮಧುರೈಯಲ್ಲಿ ನಡೆಯಲಿರುವ ಪ್ರಸ್ತಾಪಿತ ಎಐಎಡಿಎಂಕೆ ಬೃಹತ್ ರ‌್ಯಾಲಿಯ ಸಂದರ್ಭದಲ್ಲಿ ಜಯಲಲಿತಾ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗುತ್ತದೆ ಎಂಬ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಈ ಬೆದರಿಕೆ ಪತ್ರ ಕಳೆದ ವಾರವಷ್ಟೇ 'ಜಯಾ ಟಿವಿ' ಕಚೇರಿ ತಲುಪಿತ್ತು.

ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಾಗಿನ ಮೈತ್ರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಜಯಲಲಿತಾ, ಇದನ್ನು ಚುನಾವಣೆಯ ಸಂದರ್ಭದಲ್ಲೇ ನಿರ್ಧರಿಸಲಾಗುತ್ತದೆ ಎಂದರು.

ಮೈತ್ರಿಯು ಜನತೆ ನಿರ್ಧರಿಸಿದಂತೆಯೇ ನಡೆಯುತ್ತದೆ ಎಂದಿರುವ ಎಐಎಡಿಎಂಕೆ ಸುಪ್ರೀಂ, ಇದು ಪ್ರಸಕ್ತ ಡಿಎಂಕೆ ಮೈತ್ರಿಯಲ್ಲಿರುವ ಕಾಂಗ್ರೆಸ್ ಜತೆಗೂ ಇರಬಹುದು ಎಂಬರ್ಥದ ಮಾತುಗಳನ್ನಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ