ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಲಿಂಡರ್ ಸ್ಫೋಟ; 22ಕ್ಕೂ ಹೆಚ್ಚು ಮಕ್ಕಳು ಸಜೀವ ದಹನ (School van | Azamgarh | students burn alive | LPG kit)
Bookmark and Share Feedback Print
 
ಉತ್ತರ ಪ್ರದೇಶದ ಅಜಮ್‌ಗಢ ಸಮೀಪ ಶಾಲಾ ವಾಹನವೊಂದರಲ್ಲಿದ್ದ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 22 ಮಕ್ಕಳು ಸಜೀವ ದಹನವಾಗಿರುವ ಆಘಾತಕಾರಿ ಘಟನೆಯೊಂದು ಶನಿವಾರ ಬೆಳಿಗ್ಗೆ ನಡೆದಿದೆ.

ಇಲ್ಲಿನ ಬಿಲಿರಿಯಾಗಂಜ್ ಎಂಬಲ್ಲಿನ ಶಾರದಾ ಇಂಟರ್ ಪಿಯು ಕಾಲೇಜಿನ ವ್ಯಾನಿನಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ವಾಹನಕ್ಕೆ ಅಕ್ರಮವಾಗಿ ಸಿಲಿಂಡರ್ ಅಳವಡಿಸಲಾಗಿತ್ತು ಎಂದು ವರದಿಗಳು ಹೇಳಿವೆ.

ಘಟನೆಯಲ್ಲಿ ಇದುವರೆಗೆ 22 ಮಕ್ಕಳು ಸಾವನ್ನಪ್ಪಿರುವುದು ಖಚಿತವಾಗಿದೆ. 10ಕ್ಕೂ ಹೆಚ್ಚು ಮಕ್ಕಳು ಸುಟ್ಟ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಹನದಲ್ಲಿ ಏಳರಿಂದ ಎಂಟು ವಯಸ್ಸಿನ ನಡುವಿನ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಕ್ರಮವಾಗಿ ಅಳವಡಿಸಲಾಗಿದ್ದ ಸಿಲಿಂಡರ್ ಸೋರಿಕೆಯ ಕಾರಣದಿಂದ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ