ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ: ಎಸ್.ಎಂ. ಕೃಷ್ಣ (Kashmir | India | China | SM Krishna)
Bookmark and Share Feedback Print
 
ಜಮ್ಮು-ಕಾಶ್ಮೀರವನ್ನು 'ಭಾರತದ ನಿಯಂತ್ರಣದಲ್ಲಿರುವ ಕಾಶ್ಮೀರ' ಎಂದು ಚೀನಾ ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಬೀಜಿಂಗ್ ನವದೆಹಲಿಯ ಸೂಕ್ಷ್ಮ ಸಂವೇದನೆಯನ್ನು ಗೌರವಿಸಬೇಕು ಎಂದಿದ್ದಾರೆ.

ಮುಂಬೈಯಲ್ಲಿ ನಡೆದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪರ್ಯಾಲೋಚನಾ ಸಮಿತಿಯ ಸಭೆಯ ನಂತರ ಮಾತನಾಡುತ್ತಿದ್ದ ಕೃಷ್ಣ, ನಾವು ಜಮ್ಮು-ಕಾಶ್ಮೀರದ ಕುರಿತು ಹೊಂದಿರುವ ಭಾವನೆಗಳನ್ನು ಚೀನಾ ಸರಕಾರ ಗೌರವಿಸುತ್ತದೆ ಎಂಬ ವಿಶ್ವಾಸವಿಟ್ಟುಕೊಂಡಿದ್ದೇನೆ ಎಂದರು.

ಕಾಶ್ಮೀರವು ಭಾರತದಿಂದ ಬೇರ್ಪಡಿಸಲಾಗದ ಅಥವಾ ಬಿಟ್ಟುಕೊಡಲಾಗದ ಭಾಗವಾಗಿದ್ದು, ಈ ಕುರಿತು ಚೀನಾ ವಕ್ತಾರರು ನೀಡಿರುವ ಹೇಳಿಕೆಯ ಕುರಿತು ನಾವು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ಈ ವಿಚಾರವನ್ನು ಪ್ರಸ್ತಾಪಿಸಿ, ನಮ್ಮ ಕಳವಳವನ್ನು ರವಾನಿಸುವಂತೆ ನಮ್ಮ ರಾಯಭಾರಿಗೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಅದಕ್ಕೂ ಮೊದಲು 2008ರ ನವೆಂಬರ್ 26ರಂದು ಪಾಕಿಸ್ತಾನಿ ಪಾತಕಿಗಳಿಂದ ದಾಳಿಗೊಳಗಾಗಿದ್ದ ತಾಜ್ ಹೊಟೇಲ್‌ಗೆ ಸಚಿವರು ಭೇಟಿ ನೀಡಿದರು.

ತಾಜ್ ಹೊಟೇಲ್ ಕೇವಲ ಮುಂಬೈಗಷ್ಟೇ ಹೆಗ್ಗುರತಲ್ಲ, ಇಡೀ ದೇಶಕ್ಕೆ ಹೆಮ್ಮೆಯ ಸ್ಥಳ ಎಂದು ಈ ಸಂದರ್ಭದಲ್ಲಿ ಬಣ್ಣಿಸಿದ ಕೃಷ್ಣ, ಭಯೋತ್ಪಾದಕರ ದಾಳಿಯಿಂದಾಗಿ ಪ್ರಾಣ ಕಳೆದುಕೊಂಡವರಿಗೆ ನಮ್ಮ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ನಾವಿಲ್ಲಿ ಜತೆ ಸೇರಿದ್ದೇವೆ ಎಂದರು.

ನಾವಿಲ್ಲಿ ಸೇರಿರುವುದು ಘನಘೋರ ದುರಂತದಲ್ಲಿ ಬಲಿಯಾದವರಿಗೆ ಗೌರವ ಸಲ್ಲಿಸುವ ಸಲುವಾಗಿ. ಆ ಮೂಲಕ ಇಡೀ ವಿಶ್ವಕ್ಕೆ ಭಯೋತ್ಪಾದನಾ ಕೃತ್ಯದ ಕುರಿತು ನೆನಪು ಹುಟ್ಟಿಸುವ ಯತ್ನವಿದು. ಸಂಸತ್ ಸದಸ್ಯರ ಪರವಾಗಿ ನಾನು ಬಲಿಪಶುಗಳ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸುತ್ತಿದ್ದೇನೆ ಎಂದರು.

ಭಯೋತ್ಪಾದನೆಯು ದೇಶಕ್ಕೆ ಆಗಾಗ ದಾಳಿ ಮಾಡುತ್ತಿದ್ದರೂ, ದೇಶ ಬಾಂಧವರ ಬದ್ಧತೆಯ ಕಾರಣದಿಂದಾಗಿ ಅದನ್ನು ಮತ್ತೆ ಮತ್ತೆ ಮೆಟ್ಟಿ ನಿಲ್ಲುವುದು ಸಾಧ್ಯವಾಗಿದೆ ಎಂದೂ ಸಚಿವರು ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ