ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಬೇಕು-ಬೇಡ, ಯಾಕೆ ಹೀಗೆ?; ನಿತೀಶ್‌ಗೆ ರಾಹುಲ್ (Bihar, Assembly polls, Congress, Rahul Gandhi, Nitish Kumar, BJP, Narendra Modi)
Bookmark and Share Feedback Print
 
ಬಿಜೆಪಿ ಮತ್ತು ಗುಜರಾತ್ ಮುಖ್ಯಮಂತ್ರಿಯವರೊಂದಿಗೆ ಸಂಬಂಧ ಹೊಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಒಮ್ಮೆ ನರೇಂದ್ರ ಮೋದಿ ಬೇಕು, ಮತ್ತೊಮ್ಮೆ ಬೇಡ; ಇದು ಯಾಕೆ ಎಂದು ಪ್ರಶ್ನಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ರಾಷ್ಟ್ರೀಯ ಜನತಾದಳ ಮುಖಂಡನಿಗೆ ಎರಡು ಮುಖವಿದೆ ಎಂದು ಟೀಕಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಬಿಹಾರದಲ್ಲಿ ಪ್ರಚಾರ ಮಾಡಿರಲಿಲ್ಲ. ಆದರೆ ಚುನಾವಣೆಯ ಬೆನ್ನಿಗೆ ನಿತೀಶ್ ಅವರು ಪಂಜಾಬಿನಲ್ಲಿ ನಡೆದ ಎನ್‌ಡಿಎ ರ‌್ಯಾಲಿಯಲ್ಲಿ ಮೋದಿ ಜತೆ ಕೈ-ಕೈ ಹಿಡಿದುಕೊಂಡು ಪೋಸ್ ಕೊಟ್ಟರು. ಅವರು ಚುನಾವಣೆಯ ಮೊದಲು ಮತ್ತು ನಂತರ ಬೇರೆ ಬೇರೆ ಮುಖಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ ಎಂದು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ನೀಡುತ್ತಾ ಟೀಕಿಸಿದರು.

ಗುಜರಾತ್ ಗಲಭೆಯ ನಂತರವೂ ಎನ್‌ಡಿಎ ಆಡಳಿತವಿದ್ದ ಕೇಂದ್ರ ಸರಕಾರದಲ್ಲಿ ನಿತೀಶ್ ಮಂತ್ರಿಯಾಗಿ ಮುಂದುವರಿದಿದ್ದುದನ್ನು ನೆನಪಿಸಿರುವ ರಾಹುಲ್, ಬಿಹಾರ ಮತ್ತು ಉತ್ತರ ಪ್ರದೇಶದ ವಲಸಿಗರ ಮೇಲೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯಿಂದ ಪ್ರಚೋದಿತಗೊಂಡ ದಾಳಿಯ ಸಂದರ್ಭದಲ್ಲೂ ಬಿಹಾರ ಸರಕಾರ ಸುಮ್ಮನಿತ್ತು ಎಂದು ಬೆಟ್ಟು ಮಾಡಿ ತೋರಿಸಿದರು.

ಈ ಬಾರಿ ಬಿಹಾರದಲ್ಲಿ ನರೇಂದ್ರ ಮೋದಿಯವರು ಬಿಜೆಪಿ ಪರ ಪ್ರಚಾರ ಮಾಡಬಾರದು ಎಂದು ನಿಬಂಧನೆ ವಿಧಿಸಿರುವ ಕುರಿತೂ ರಾಹುಲ್ ಟೀಕಿಸಿದ್ದಾರೆ.

ಬಿಹಾರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಮುಖ್ಯಮಂತ್ರಿಯ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ರಾಜ್ಯದಲ್ಲಿನ ಸಮಗ್ರ ಪ್ರಗತಿಯನ್ನು ಖಚಿತಪಡಿಸಲು ಕಾಂಗ್ರೆಸ್ಸನ್ನು ಜನತೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಬಿಹಾರದಲ್ಲಿ ಪ್ರಗತಿ ಆಗಿರುವುದೇ ನಿಜವಾಗಿದ್ದಲ್ಲಿ ಜನತೆ ತಮ್ಮ ಜೀವನ ಸಾಗಿಸಲು ಮುಂಬೈ, ಹರ್ಯಾಣ, ಪಂಜಾಬ್ ಮತ್ತು ದೆಹಲಿಗಳಿಗೆ ಯಾಕೆ ವಲಸೆ ಹೋಗುತ್ತಿದ್ದರು? ಮುಂಬೈ, ಪಂಜಾಬ್ ಅಥವಾ ಹರ್ಯಾಣಗಳಿಗೆ ನಾನು ಭೇಟಿ ನೀಡಿದಾಗಲೆಲ್ಲ ಆ ರಾಜ್ಯಗಳಲ್ಲಿ ಬಿಹಾರದ ವಲಸಿಗರೇ ನೌಕರಿಗಾಗಿ ಬಂದಿರುವುದು ಗಮನಕ್ಕೆ ಬರುತ್ತಿತ್ತು ಎಂದರು.

ಉತ್ತರ ಪ್ರದೇಶದಲ್ಲಿ ನಾನು ಪ್ರಚಾರ ಕೈಗೊಂಡ ನಂತರ ಜನತೆ ಪ್ರಸಕ್ತ ಸರಕಾರದ ಅವಧಿಯ ನಂತರ ಕಾಂಗ್ರೆಸ್ಸನ್ನು ಆರಿಸುವ ದೃಢ ನಿಶ್ಚಯ ಮಾಡಿದ್ದಾರೆ. ಅದೇ ರೀತಿಯ ಪರಿಸ್ಥಿತಿ ಬಿಹಾರದಲ್ಲೂ ಕಾಣಿಸುತ್ತಿದೆ. ಜನತೆ ಕಾಂಗ್ರೆಸ್‌ನತ್ತ ಅಪಾರ ಭರವಸೆಯೊಂದಿಗೆ ನೋಡುತ್ತಿದ್ದಾರೆ. ರಾಜ್ಯದಲ್ಲಿನ ಪ್ರಸಕ್ತ ಸ್ಥಿತಿಯನ್ನು ನಾವು ಬದಲಾಯಿಸಬೇಕಾಗಿದೆ. ಕಳೆದ 20 ವರ್ಷಗಳಲ್ಲಿ ಈ ರಾಜ್ಯದಲ್ಲಿ ಪ್ರಗತಿ ಕುಂಠಿತವಾಗಿದೆ ಎಂದಿರುವ ರಾಹುಲ್, ನಮ್ಮನ್ನು ಅಧಿಕಾರಕ್ಕೆ ತಂದಲ್ಲಿ ಸಮಾಜದ ಎಲ್ಲಾ ವರ್ಗಗಳ ಹಿತಾಸಕ್ತಿಗಳನ್ನೂ ಕಾಯಲಾಗುತ್ತದೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ