ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರಿಂದ ಪೊಲೀಸರ ಬಿಡುಗಡೆ; ಮುಂದುವರಿದ ನಿಗೂಢತೆ (Maoists | Bihar | Nitish Kumar | police)
Bookmark and Share Feedback Print
 
ಅಪಹರಣಕ್ಕೊಳಗಾಗಿರುವ ಪೊಲೀಸ್ ಸಿಬ್ಬಂದಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಮಾವೋವಾದಿಗಳು ಹೇಳಿಕೊಂಡಿದ್ದರೂ, ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಇದರೊಂದಿಗೆ ಪೊಲೀಸರ ಸ್ಥಿತಿ-ಗತಿ ಕುರಿತ ಆತಂಕ ಕಡಿಮೆಯಾಗುವ ಯಾವುದೇ ಸಂಭವನೀಯತೆಗಳು ಕಾಣದೆ ನಿಗೂಢತೆಯೇ ಮುಂದುವರಿದಿದೆ.

ಆಗಸ್ಟ್ 29ರಂದು ಲಖಿಸರಾಯ್ ಎನ್‌ಕೌಂಟರ್ ಸಂದರ್ಭದಲ್ಲಿ ಅಪಹರಿಸಿದ್ದ ಪೊಲೀಸರನ್ನು ಮಾವೋವಾದಿಗಳು ಬಿಡುಗಡೆ ಮಾಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ನಿತೀಶ್ ಹೇಳಿದ್ದಾರೆ.

ತಾವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಭಾನುವಾರ ನಕ್ಸಲರು ಹೇಳಿಕೊಂಡ ನಂತರ ಮುಖ್ಯಮಂತ್ರಿ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಥಳೀಯ ಟಿವಿ ಚಾನೆಲ್ ಒಂದು ಬಿತ್ತರಿಸಿರುವ ವೀಡಿಯೋ ಪ್ರಕಾರ ಅಪಹರಣಕ್ಕೆ ಒಳಗಾಗಿರುವ ಪೊಲೀಸರಲ್ಲಿ ಒಬ್ಬನಾಗಿರುವ ಅಭಯ್ ಪ್ರಸಾದ್ ಯಾದವ್ ಅವರ ಕುಟುಂಬದ ಸದಸ್ಯರನ್ನು ಮಾವೋವಾದಿ ನಾಯಕ ಕಿಶನ್‌ಜೀ ತಡರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅಭಯ್ ಮರಳಲಿದ್ದಾರೆ ಎಂದು ಹೇಳಿದ್ದ.

ಅಪಹರಣಕ್ಕೊಳಗಾಗಿ ಜೀವಂತವಾಗಿ ಬದುಕುಳಿದಿರುವ ರೂಪೇಶ್ ಕುಮಾರ್ ಸಿನ್ಹಾ, ಮೊಹಮ್ಮದ್ ಎಹ್ಸಾನ್ ಮತ್ತು ಅಭಯ್ ಯಾದವ್ ಎಂಬ ಮೂವರು ಪೊಲೀಸ್ ಅಧಿಕಾರಿಗಳನ್ನು ಭಾನುವಾರ ಬೆಳಿಗ್ಗೆ ಎಂಟು ಗಂಟೆಗೆ ಬಿಡುಗಡೆ ಮಾಡಿದ್ದೇವೆ ಎಂದು ನಕ್ಸಲರು ಹೇಳಿಕೊಂಡಿದ್ದಾರೆ.

ಒಟ್ಟು ನಾಲ್ವರನ್ನು ಅಪಹರಿಸಿದ್ದ ನಕ್ಸಲರು ಲುಕಾಲ್ ತೇಟೆ ಎಂಬ ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದು ಹಾಕಿದ್ದರು. ಅವರ ಶವ ಶುಕ್ರವಾರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಮುಖ್ಯಮಂತ್ರಿ ನಿತೀಶ್ ಕುಮಾರ್ ನಕ್ಸಲರ ಜತೆ ಮಾತುಕತೆ ನಡೆಸುವ ಪ್ರಸ್ತಾಪವನ್ನು ಕೊನೆಯ ಹಂತದಲ್ಲಿ ಮುಂದಿಟ್ಟಿದ್ದರಾದರೂ, ಇದನ್ನು ನಕ್ಸಲರು ತಳ್ಳಿ ಹಾಕಿದ್ದರು. ತಮ್ಮ ಕೇಂದ್ರೀಯ ಸಮಿತಿಯ ಸಲಹೆಯಂತೆ ಪೊಲೀಸರನ್ನು ಬಿಡುಗಡೆ ಮಾಡುತ್ತೇವೆ, ಮಾತುಕತೆಗೆ ನಾವು ಸಿದ್ಧರಿಲ್ಲ ಎಂದು ಮಾವೋಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಮುಖ್ಯಸ್ಥರು, ನಕ್ಸಲರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ನಮಗೆ ಇದುವರೆಗೂ ಪತ್ತೆಯಾಗಿಲ್ಲ. ಹಲವು ಕಡೆ ನಾವು ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ