ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಲೆಯಲ್ಲೇ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಚಸ್ಕಾ-ಮಸ್ಕಾ! (Dhanbad students | girls | Delhi Public School | Jharkhand)
Bookmark and Share Feedback Print
 
ಇಷ್ಟರವರೆಗೆ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸುದ್ದಿಯನ್ನು ಓದುತ್ತಾ ಬಂದಿದ್ದವರಿಗೆ ನಮ್ಮ ಆಧುನಿಕ ಸಮಾಜ ಮತ್ತೊಂದು ಮಜಲನ್ನು ತಲುಪಿರುವ ಪೂರಕ ಸಂಕೇತಗಳನ್ನು ಒದಗಿಸುವ ಆಘಾತಕಾರಿ ವಿಚಾರವಿದು. ಒಂಬತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲೆಯಲ್ಲೇ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಇದೀಗ ಅಮಾನತಿಗೊಳಗಾಗಿದ್ದಾರೆ.

ಇದು ನಡೆದಿರುವುದು ಜಾರ್ಖಂಡ್‌ನ ಧಾನಾಬಾದ್ ಜಿಲ್ಲೆಯ 'ದೆಹಲಿ ಪಬ್ಲಿಕ್ ಸ್ಕೂಲ್'ನಲ್ಲಿ. ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ಒಂಬತ್ತು ಮಂದಿ ನೈತಿಕ ಅಧಃಪತನವನ್ನು ಮೆರೆಯುವ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ವರದಿಗಳ ಪ್ರಕಾರ ಹತ್ತು ಮತ್ತು ಹನ್ನೆರಡನೇ ತರಗತಿಗಳ ಆರು ಹುಡುಗರು ಮತ್ತು ಓರ್ವ ಹುಡುಗಿ ಶಾಲೆಯ ಬಾತ್ ರೂಮಿನೊಳಗೆ ಅಕ್ರಮ ಚಟುವಟಿಕೆಯಲ್ಲಿ ನಿರತರಾಗಿದ್ದರು. ಇದೇ ಶಾಲೆಯ ಇನ್ನಿಬ್ಬರು ಹುಡುಗಿಯರು ತಮ್ಮ ಬಾಯ್ ಫ್ರೆಂಡ್‌ಗಳ ಜತೆ ಜಾರ್ಖಂಡ್-ಪಶ್ಚಿಮ ಬಂಗಾಲ ಗಡಿ ಭಾಗದಲ್ಲಿನ ಮೈತಾನ್ ಅಣೆಕಟ್ಟು ಪ್ರದೇಶಕ್ಕೆ ವಿಹಾರಕ್ಕೆಂದು ಹೋಗಿದ್ದರು.

ಈ ಒಂಬತ್ತೂ ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲಾ ಅವಧಿಯಲ್ಲಿ ಇಂತಹ ಘನಕಾರ್ಯಕ್ಕೆ ಮುಂದಾಗಿರುವುದರಿಂದ ತಕ್ಷಣವೇ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಏಳು ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲೆಯ ಸ್ನಾನದ ಕೊಠಡಿಯೊಳಗೆ ಬಹುತೇಕ ಬೆತ್ತಲೆಯಾಗಿದ್ದುದನ್ನು ಆರನೇ ತರಗತಿಯ ಬಾಲಕನೊಬ್ಬ ನೋಡಿದ್ದ. ಇದನ್ನು ಆತ ಪ್ರಾಂಶುಪಾಲರಿಗೆ ತಿಳಿಸಿದ್ದ. ಕಾರ್ಯಪ್ರವೃತ್ತರಾಗಿದ್ದ ಪ್ರಾಂಶುಪಾಲರು, ಸತ್ಯಾಂಶ ಪರಿಶೀಲನೆ ನಡೆಸುವಂತೆ ಮಹಿಳಾ ಶಿಕ್ಷಕಿಯೊಬ್ಬರಿಗೆ ಸೂಚಿಸಿದ್ದರು.

ಮಹಿಳಾ ಶಿಕ್ಷಕಿ ತಕ್ಷಣವೇ ಸ್ಥಳಕ್ಕೆ ತೆರಳಿದಾಗ, ಬಾಲಕ ನೀಡಿದ್ದ ದೂರು ಸರಿಯಾಗಿತ್ತು ಎಂಬುದನ್ನು ಕಂಡುಕೊಂಡಿದ್ದರು. ಅಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಶ್ಲೀಲ ಚಟುವಟಿಕೆ ನಡೆಸುತ್ತಿದ್ದರು.

ಶಾಲೆಯು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿರುವ ನಿರ್ಧಾರವನ್ನು ಹೆತ್ತವರು ತೀವ್ರವಾಗಿ ಖಂಡಿಸಿದ್ದಾರೆ.

ತಮ್ಮ ಮಕ್ಕಳು ಅಂತವರಲ್ಲ. ಅವರು ಇನ್‌ಸರ್ಟ್ (tuck in) ಮಾಡಲು ಬಾತ್ ರೂಮಿಗೆ ಹೋಗಿದ್ದರು. ಶಾಲೆಯ ಆಡಳಿತ ಮಂಡಳಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಮಕ್ಕಳ ಪೋಷಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ