ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ ಆಖಾಡಕ್ಕೆ ಮುಹೂರ್ತ; ಅ.21ರಿಂದ ಚುನಾವಣೆ (Bihar Assembly polls | CEC | S Y Quraishi | India)
Bookmark and Share Feedback Print
 
ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 21ರಿಂದ ಆರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 24ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ಮೊದಲ ಹಂತದ ಚುನಾವಣೆ ಅಕ್ಟೋಬರ್ 21ರಂದು 47 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದರೆ, ಎರಡನೇ ಹಂತದ ಮತದಾನ ಅಕ್ಟೋಬರ್ 24ರಂದು 45 ಸ್ಥಾನಗಳಿಗಾಗಿ ನಡೆಯುತ್ತದೆ.

ಅಕ್ಟೋಬರ್ 28ರಂದು 48 ಸೀಟುಗಳಿಗೆ ಮೂರನೇ ಹಂತದ ಚುನಾವಣೆ, ನವೆಂಬರ್ ಒಂದರಂದು 42 ಸೀಟುಗಳಿಗಾಗಿ ನಾಲ್ಕನೇ ಹಂತ, ಐದನೇ ಹಂತದಲ್ಲಿ ನವೆಂಬರ್ 9ರಂದು 35 ಸೀಟುಗಳಿಗಾಗಿ ಹಾಗೂ ನವೆಂಬರ್ 20ರಂದು 26 ಸ್ಥಾನಗಳಿಗಾಗಿ ಕೊನೆಯ ಹಂತದ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಹಾರ ವಿಧಾನಸಭೆಯ ಒಟ್ಟು 243 ಸ್ಥಾನಗಳ ಮತಎಣಿಕೆ ಕಾರ್ಯ ನವೆಂಬರ್ 24ರಂದು ಜರಗಲಿದೆ.

ರಾಜ್ಯದಾದ್ಯಂತ 56,943 ಮತದಾನ ಕೇಂದ್ರಗಳಲ್ಲಿ 5.50 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು, ಆಡಳಿತ ಪಕ್ಷಗಳಾದ ಸಂಯುಕ್ತ ಜನತಾದಳ ಮತ್ತು ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳು ಆಖಾಡಕ್ಕೆ ಸಿದ್ಧಗೊಂಡಿವೆ.

ಪ್ರಸಕ್ತ ವರ್ಷ ಚುನಾವಣೆ ಎದುರಿಸುತ್ತಿರುವ ಏಕೈಕ ರಾಜ್ಯ ಬಿಹಾರ. ಪ್ರಸಕ್ತ ವಿಧಾನಸಭಾ ಸದಸ್ಯರ ಅವಧಿ ನವೆಂಬರ್ 27ಕ್ಕೆ ಕೊನೆಗೊಳ್ಳುತ್ತಿದೆ.

ಮುಂದಿನ ತಿಂಗಳು ಅಕ್ಟೋಬರ್ 3ರಿಂದ 14ರ ತನಕ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ನಂತರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ಸರಕಾರವು ಒಲವು ವ್ಯಕ್ತಪಡಿಸಿದೆ ಎಂದು ಈ ಹಿಂದೆ ವರದಿಗಳು ಹೇಳಿದ್ದವು.

ಅತ್ತ ರಾಜಕೀಯದ ವಿಚಾರಕ್ಕೆ ಬಂದಾಗ ಒಟ್ಟಾರೆ ತ್ರಿಕೋನ ಸ್ಪರ್ಧೆ ಎದುರಾಗುವ ಎಲ್ಲಾ ಲಕ್ಷಣಗಳೂ ಗೋಚರಿಸಿವೆ. ಜೆಡಿಯು ಮತ್ತು ಬಿಜೆಪಿಗಳು ತಮ್ಮ ಮೈತ್ರಿಯನ್ನು ಮುಂದುವರಿಸಲು ನಿರ್ಧರಿಸಿದ್ದರೆ, ಪ್ರಬಲ ಪೈಪೋಟಿ ನೀಡಿ ಸರಕಾರ ಕಟ್ಟುವ ನಿಟ್ಟಿನಲ್ಲಿ ಲಾಲೂ ಪ್ರಸಾದ್ ಅವರ ಆರ್‌ಜೆಡಿ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿಗಳು ಕೈ ಜೋಡಿಸಿವೆ. ಕಾಂಗ್ರೆಸ್ ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ