ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಯುವರಾಜ' ರಾಹುಲ್ ಗಾಂಧಿಗೂ ಬೂಟೆಸೆತ ಭೀತಿಯೇ? (shoe attack | footwear | Rahul Gandhi | Congress)
Bookmark and Share Feedback Print
 
ಪ್ರತಿಭಟನೆಯ ನೂತನ ಅಸ್ತ್ರವಾಗಿ ಮಾರ್ಪಟ್ಟಿರುವ ಬೂಟೆಸೆತಗಳು ರಾಜಕಾರಣಿಗಳ ಮೇಲೆ ಪ್ರಯೋಗವಾಗುತ್ತಿರುವುದು ಪರಿಣಾಮಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಪೊಲೀಸರು, ಇಲ್ಲಿಗೆ ಆಗಮಿಸಿರುವ ರಾಹುಲ್ ಗಾಂಧಿ ಜತೆ ಸಂವಹನ ನಡೆಸುವ ವಿದ್ಯಾರ್ಥಿಗಳು ಬರಿಗಾಲಲ್ಲಿ ಹೋಗಬೇಕು ಎಂದು ಫರ್ಮಾನು ಹೊರಡಿಸಿದ ಪ್ರಸಂಗ ವರದಿಯಾಗಿದೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿನ ಅಕೋಲಾ ಜಿಲ್ಲೆಯ ಪಂಜಾಬ್‌ರಾವ್ ಕೃಷಿ ವಿದ್ಯಾಪೀಠದ ವಿದ್ಯಾರ್ಥಿಗಳ ಜತೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅದರಂತೆ ಕಾಲೇಜಿನ ಸಭಾಂಗಣಕ್ಕೆ ವಿದ್ಯಾರ್ಥಿಗಳು ತೆರಳುವವರಿದ್ದರು. ಆದರೆ ಅವರನ್ನು ತಡೆದ ಪೊಲೀಸರು ಚಪ್ಪಲಿ, ಬೂಟುಗಳನ್ನು ಹೊರಗೆ ಬಿಟ್ಟು ಹೋಗುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು. ಇದಕ್ಕೆ ನಿರಾಕರಿಸಿದರನ್ನು ಪ್ರವೇಶಿಸಲು ಅವಕಾಶ ನೀಡಬೇಡಿ ಎಂದು ನಮಗೆ ಸೂಚನೆ ಬಂದಿದೆ ಎಂದು ಈ ಕುರಿತು ಭದ್ರತಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು.

ದೇಶದಾದ್ಯಂತ ರಾಜಕೀಯ ಪ್ರವಾಸ ಮಾಡುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾರ್ಥಿಗಳು ಮತ್ತು ಯುವ ಜನತೆಯ ಜತೆ ಸಂವಹನ ನಡೆಸುತ್ತಿದ್ದು, ಅದರ ಭಾಗವಾಗಿ ಮಹಾರಾಷ್ಟ್ರಕ್ಕೆ ಮಂಗಳವಾರ ಆಗಮಿಸಿದ್ದರು.

ಕಾರ್ಯಕ್ರಮಕ್ಕೆ ಚಪ್ಪಲಿಗಳನ್ನು ಧರಿಸಲು ಅವಕಾಶ ನಿರಾಕರಿಸಿರುವ ವಿಚಾರ ವಿವಾದಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ಅಧಿಕಾರಿಗಳು ಚರ್ಚೆ ನಡೆಸಿ ನಂತರ ರದ್ದು ಮಾಡಿದರು. ಆದರೆ ಅಷ್ಟರಲ್ಲಾಗಲೇ ಬಹುತೇಕ ವಿದ್ಯಾರ್ಥಿಗಳು ತಮ್ಮ ಚಪ್ಪಲಿ-ಶೂಗಳನ್ನು ಹೊರಗೆ ಬಿಟ್ಟು ಸಭಾಂಗಣ ಪ್ರವೇಶಿಸಿದ್ದರು.

ರಾಜಕಾರಣಿಗಳ ಮೇಲೆ ಬೂಟೆಸೆಯುವ ಬೆಳವಣಿಗೆ ಆರಂಭವಾದದ್ದು ಅಮೆರಿಕಾ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರ ಮೂಲಕ. ಬುಶ್ ಅವರಿಗೆ ಬಾಗ್ದಾದ್‌ನಲ್ಲಿ ಇರಾಕ್ ಪತ್ರಕರ್ತ 2008ರ ಡಿಸೆಂಬರ್ ತಿಂಗಳಲ್ಲಿ ಬೂಟೆಸೆಯುವ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದ.

ಆ ಬಳಿಕ ಚೀನಾ ಪ್ರಧಾನಿ ವೆನ್ ಜಿಯಾಬೋ, ಪಾಕಿಸ್ತಾನಿ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ, ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಮತ್ತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಮಂದಿ ಬೂಟೆಸೆತಗಳಿಗೆ ಒಳಗಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ