ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ಜರ್ಮನ್ ಬೇಕರಿ ಸ್ಫೋಟ; ಇಬ್ಬರು ಶಂಕಿತರ ಸೆರೆ (Pune | German Bakery blast | Maharashtra | Indian Mujahideen)
Bookmark and Share Feedback Print
 
ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರು ಎಂದು ಹೇಳಲಾಗಿರುವ ಇಬ್ಬರು ವ್ಯಕ್ತಿಗಳನ್ನು ಮುಂಬೈ ಉಗ್ರ ನಿಗ್ರಹ ದಳ ಮಹಾರಾಷ್ಟ್ರದ ಮರಾಠಾವಾಡ ಪ್ರಾಂತ್ಯದಲ್ಲಿ ಬಂಧಿಸಿದೆ.

ಹಿಮಾಯತ್ ಬೇಗ್ ಎಂಬಾತನನ್ನು ಔರಂಗಾಬಾದ್‌ನಲ್ಲಿ ಹಾಗೂ ಬಿಲಾಲ್ ಎಂಬಾತನನ್ನು ನಾಸಿಕ್‌ನಲ್ಲಿ ಬಂಧಿಸಲಾಗಿದೆ. ಇಬ್ಬರಿಂದಲೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಮಾಯತ್ ಬೇಗ್ ಮತ್ತೊಂದು ನಿಷೇಧಿತ ಸಂಘಟನೆ ಸಿಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ಬೇಕಾದವನು.

16 ಮಂದಿಯ ಸಾವು ಮತ್ತು 65 ಮಂದಿ ಗಾಯಗೊಂಡಿದ್ದ ಫೆಬ್ರವರಿ 13ರ ಸ್ಫೋಟಕ್ಕೆ ಅಗತ್ಯವಿರುವ ವಸ್ತುಗಳನ್ನು ಆರೋಪಿಗಳು ಪೂರೈಸಿದ್ದಾರೆ ಎಂದು ಆರೋಪಿಸಲಾಗಿದೆ.

ತನಿಖಾ ದಳಗಳ ಪ್ರಕಾರ ಈ ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದೀನ್ ಮತ್ತು ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಭಯೋತ್ಪಾದನಾ ಸಂಘಟನೆಗಳು ಕಾರ್ಯನಿರ್ವಹಿಸಿವೆ.

ಕರ್ನಾಟಕದ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಸೇರಿದಂತೆ ಐವರು ಭಯೋತ್ಪಾದಕರು ಪುಣೆಯ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ತನಿಖಾ ದಳ ಹೇಳುತ್ತಿದ್ದು, ಇವರಿಗೆ ಸಹಕಾರ ನೀಡಿದ್ದ ಹಲವು ಮಂದಿಯನ್ನು ಈಗಾಗಲೇ ಬಂಧಿಸಿದೆ.

ರಿಯಾಜ್ ಮತ್ತು ಇಕ್ಬಾಲ್ ಸಹೋದರರು ಕರ್ನಾಟಕದವರಾದರೆ, ಮೊಹ್ಸಿನ್ ಚೌದರಿ ಎಂಬಾತ ಪುಣೆ ನಿವಾಸಿ. ಮತ್ತೊಬ್ಬ ಅಬ್ದಾಸ್ ಶುಭಾನ್ ಖುರೇಷಿ. ಐದನೇ ವ್ಯಕ್ತಿ ಮೊಹಮ್ಮದ್ ಅಮ್ಜಾದ್ ಖ್ವಾಜಾ.

ಈತನನ್ನು ಕೆಲ ತಿಂಗಳುಗಳ ಹಿಂದೆ ಹೈದರಾಬಾದ್ ಪೊಲೀಸರು ಚೆನ್ನೈಯಲ್ಲಿ ಬಂಧಿಸಿದ್ದರು. ತನಗೆ ಪುಣೆಯಲ್ಲಿ ಸ್ಫೋಟ ನಡೆದ ಜರ್ಮನ್ ಬೇಕರಿ ಪಕ್ಕದಲ್ಲಿರುವ ಓಶೋ ಆಶ್ರಮದ ವೀಡಿಯೋಗಳನ್ನು ತೋರಿಸಲಾಗಿತ್ತು ಎಂದು ತನಿಖೆ ಸಂದರ್ಭದಲ್ಲಿ ಹೇಳಿಕೊಂಡಿದ್ದ.

ಇದೇ ಪ್ರಕರಣ ಸಂಬಂಧ ಭಟ್ಕಳದ ಮತ್ತೊಬ್ಬ ಆರೋಪಿ ಅಬ್ದುಲ್ ಸಮದ್ ಭಟ್ಕಳ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರಾದರೂ, ಸಾಕ್ಷ್ಯಾಧಾರಗಳ ಕೊರತೆಯಿಂದ ನಂತರ ಬಿಡುಗಡೆ ಮಾಡಿದ್ದರು.

ಪ್ರಮುಖ ಆರೋಪಿಗಳಾದ ಭಟ್ಕಳದ ರಿಯಾಜ್ ಮತ್ತು ಇಕ್ಬಾಲ್ ಪ್ರಸಕ್ತ ಪಾಕಿಸ್ತಾನದಲ್ಲಿ ನೆಲೆ ಪಡೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ