ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಪನ್ಯಾಸಕ ಜೋಸೆಫ್ ಜೀವ ಉಳಿಸಿದ್ದು ಕೂಡ ಮುಸ್ಲಿಮರು! (Kerala | TJ Josef | Stella | Muslim)
Bookmark and Share Feedback Print
 
ಧಾರ್ಮಿಕ ಮೂಲಭೂತವಾದಿ ಸಂಘಟನೆಯೊಂದರ ಮತಾಂಧ ಕಾರ್ಯಕರ್ತರಿಂದ ಕೈಕತ್ತರಿಸಿಕೊಂಡಿದ್ದ ಉಪನ್ಯಾಸಕ ಟಿ.ಜೆ. ಜೋಸೆಫ್ ಅವರಿಗೆ ತುರ್ತು ಸಂದರ್ಭದಲ್ಲಿ ರಕ್ತ ನೀಡಿ ಪ್ರಾಣ ಉಳಿಸಿದ್ದು ಕೂಡ ಅದೇ ಧರ್ಮೀಯರು ಎಂದು ಮುಸ್ಲಿಮರ ಬಗ್ಗೆ ಅವರ ಸಹೋದರಿ ಮೇರಿ ಸ್ಟೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಮರ ಕ್ಷಮೆ ಕೇಳಲು ಸಿದ್ಧ: ಉಪನ್ಯಾಸಕ ಜೋಸೆಫ್

ಕೇರಳದ ಎರ್ನಾಕುಲಂ ಜಿಲ್ಲೆಯ ಮುವಾತ್ತುಪುಳ ಎಂಬಲ್ಲಿನ ತೊಡುಪುಳದಲ್ಲಿನ ನ್ಯೂಮನ್ ಕಾಲೇಜಿನ ಮಲಯಾಳಂ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರು ಬಿ.ಕಾಂ. ಎರಡನೇ ವರ್ಷದ ಪದವಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದರು. ಅದರಲ್ಲಿ ದೇವರು ಮತ್ತು ಮೊಹಮ್ಮದ್ ನಡುವಿನ ಕಾಲ್ಪನಿಕ ಮಾತುಕತೆಯ ಭಾಗವೊಂದನ್ನು ಬರೆದಿದ್ದರು.
PR

ಇದನ್ನು ಖಂಡಿಸಿ ಮುಸ್ಲಿಂ ಮೂಲಭೂತವಾದಿ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಜೋಸೆಫ್ ಅವರ ಬಲಗೈಯನ್ನು ಕತ್ತರಿಸಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಉಪನ್ಯಾಸಕರಿಗೆ ತುರ್ತು ರಕ್ತ ಬೇಕಾದಾಗ ರಕ್ತದಾನ ಮಾಡಿದ್ದು ಮುಸ್ಲಿಂ ಯುವಕರು ಎಂಬ ಕುತೂಹಲಕಾರಿ ವಿಚಾರವನ್ನು ಅವರ ಸಹೋದರಿ ಬಹಿರಂಗಪಡಿಸಿದ್ದಾರೆ.

ಮುಸ್ಲಿಂ ಯುವಕರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತಿದ್ದೇನೆ. ನನ್ನ ಸಹೋದರನ ಕೈ ತುಂಡಾದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ರಕ್ತ ದೊರಕಿರಲಿಲ್ಲ. ಆದರೆ ಆಗ ಮುಸ್ಲಿಂ ಯುವಕರೇ ಮುಂದೆ ಬಂದು ರಕ್ತದಾನ ಮಾಡಿದರು. ನನ್ನ ಸಹೋದರನ ಪ್ರಾಣ ಉಳಿಸಿದ್ದು ಅದೇ ರಕ್ತ ಎಂದು ಸ್ಟೆಲ್ಲಾ ತಿಳಿಸಿದ್ದಾರೆ.

ಜಾಮೀನು ನಕಾರ...
ಉಪನ್ಯಾಸಕ ಜೋಸೆಫ್ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಳ್ಳಿ ಹಾಕಿದೆ.

ತಮ್ಮ ಕೃತ್ಯದಿಂದಾಗಿ ಜನತೆಯ ಮನಸ್ಸಿನಲ್ಲಿ ಭೀತಿ ಹುಟ್ಟಿದೆ. ಇದು ಭಯೋತ್ಪಾದನೆ ಸಂಬಂಧಿ ಪ್ರಕರಣಕ್ಕೆ ಸಮಾನವಾದುದ್ದಾಗಿದೆ. ಹಾಗಾಗಿ ನಿಮಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ವಿ. ರಾಮಕುಮಾರ್ ತಿಳಿಸಿದರು.

ನಿಮಗೆ ಜಾಮೀನು ನೀಡುವುದೆಂದರೆ, ಉಪನ್ಯಾಸಕನ ಜೀವವನ್ನು ಮತ್ತೆ ಅಪಾಯಕ್ಕೆ ತಳ್ಳಿದಂತಾಗುತ್ತದೆ. ಜನಗಳ ಮನಸ್ಸಿನಲ್ಲಿ ಭೀತಿ ಹುಟ್ಟಿಸಿರುವ ನಿಮಗೆ ಜಾಮೀನು ನೀಡಲಾಗದು ಎಂದು ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ