ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದುಡ್ಡಿದ್ದೋನೆ ದೊಡ್ಡಪ್ಪ; ಮೂವರು ಭಾರತೀಯರಲ್ಲಿ ಒಬ್ಬ ಕಳ್ಳ (One in three Indians corrupt | CVC | India | Pratyush Sinha)
Bookmark and Share Feedback Print
 
ಭಾರತದಲ್ಲಿ ದುಡ್ಡಿದ್ದವರೇ ದೊಡ್ಡಪ್ಪ, ಸಂಪಾದಿಸಿದ ಹಾದಿಯನ್ನು ಪ್ರಶ್ನಿಸುವವರೇ ಇಲ್ಲ; ಪ್ರತಿ ಮೂವರು ಭಾರತೀಯರಲ್ಲಿ ಒಬ್ಬ ಪರಮ ಭ್ರಷ್ಟಾಚಾರಿಯಾಗಿರುತ್ತಾನೆ, ಉಳಿದವರ ಕಥೆಯೂ ಭಿನ್ನವಲ್ಲ. ಹೆಚ್ಚಿನವರು ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ಪಾಲು ತೆಗೆದುಕೊಂಡಿರುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

'ಟ್ರಾನ್ಸ್‌ಫರೆನ್ಸಿ ಇಂಟರ್ನ್ಯಾಷನಲ್' ಎಂಬ ಜಾಗತಿಕ ಭ್ರಷ್ಟಾಚಾರ ವಿರೋಧಿ ಸಂಘಟನೆಯು ನಡೆಸಿರುವ ಸಮೀಕ್ಷೆಯಲ್ಲಿ ಇಂತಹ ಹತ್ತು ಹಲವು ಅಂಶಗಳು ಬಹಿರಂಗವಾಗಿವೆ.

ದೇಶದ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ಕುರಿತು ಅಸಹ್ಯ ವ್ಯಕ್ತಪಡಿಸಿರುವ ಕೇಂದ್ರೀಯ ಜಾಗೃತ ದಳದ ಮಾಜಿ ಆಯುಕ್ತ ಪ್ರತ್ಯುಷ್ ಸಿನ್ಹಾ, ಜನ ಹೆಚ್ಚೆಚ್ಚು ಲೌಕಿಕತೆಗೆ ಒಲವು ತೋರಿಸುತ್ತಿರುವಂತೆ ಭ್ರಷ್ಟಾಚಾರದ ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಬಾಲ್ಯ ಜೀವನದ ಸಂದರ್ಭದಲ್ಲಿ ಯಾರಾದರೂ ಭ್ರಷ್ಟಾಚಾರಿಗಳಿದ್ದರೆ, ಅವರು ಸಾಮಾನ್ಯವಾಗಿ ನೇರವಾಗಿ ನೋಡಲಾಗದೆ ತಲೆ ತಗ್ಗಿಸುತ್ತಿದ್ದರು. ಇದಕ್ಕೆ ಸಾಮಾಜಿಕ ಕಳಂಕವೆಂಬ ಕನಿಷ್ಠ ಲೇಪವಾದರೂ ಇತ್ತು. ಆದರೆ ಅದೀಗ ಹೊರಟು ಹೋಗಿದೆ. ಅಂತವರನ್ನು ಯಾವುದೇ ಎಗ್ಗಿಲ್ಲದೆ ಸ್ವೀಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದೀಗ ನಡೆಸಲಾಗಿರುವ ಸಮೀಕ್ಷೆಯ ಪ್ರಕಾರ ಭ್ರಷ್ಟಾಚಾರ ಅರಿವು ಸೂಚ್ಯಂಕದಲ್ಲಿ ಭಾರತವು 10ರಲ್ಲಿ 3.4 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ವಿಶ್ವದಲ್ಲೇ 84ನೇ ಸ್ಥಾನ ಪಡೆದುಕೊಂಡಿದೆ. 9.4 ಅಂಕಗಳೊಂದಿಗೆ ನ್ಯೂಜಿಲೆಂಡ್ ಮೊದಲ ಸ್ಥಾನ ಪಡೆದಿದ್ದರೆ, ಕುಲಗೆಟ್ಟು ಹೋಗಿರುವ ಕೊನೆಯ ಸ್ಥಾನದಲ್ಲಿ 1.1 ಅಂಕ ಗಿಟ್ಟಿಸಿಕೊಂಡಿರುವುದು ಸೋಮಾಲಿಯಾ.

ಭಾರತದಲ್ಲಿನ ಲಕ್ಷಗಟ್ಟಲೆ ಬಡ ಕುಟುಂಬಗಳು ಸರಕಾರ ಒದಗಿಸುವ ಮೂಲಭೂತ ಸಾರ್ವಜನಿಕ ಸೇವೆಗಳನ್ನು ಪಡೆದುಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡುವುದು ಪ್ರತಿ ವರ್ಷ ನಡೆಯುತ್ತಾ ಬಂದಿದೆ ಎಂದು ಈ ಸಮೀಕ್ಷೆ ಹೇಳಿದೆ.

ಶೇ.20ರಷ್ಟು ಭಾರತೀಯರು ಪ್ರಾಮಾಣಿಕರು. ಶೇ.30ರಷ್ಟು ಮಂದಿ ಪರಮ ಭ್ರಷ್ಟಾಚಾರಿಗಳು. ಉಳಿದ ಜನ ಇದರ ಆಸುಪಾಸಿನಲ್ಲಿದ್ದಾರೆ ಎಂದು ಹೇಳಿರುವ 'ಟ್ರಾನ್ಸ್‌ಫರೆನ್ಸಿ ಇಂಟರ್ನ್ಯಾಷನಲ್' ತಿಳಿಸಿದೆ.

ಸಮೀಕ್ಷೆಯ ಕುರಿತು ಮಾತನಾಡಿರುವ ಸಿನ್ಹಾ, 'ಭಾರತದಲ್ಲಿ ಯಾರಲ್ಲಾದರೂ ಹಣವಿದೆಯೆಂದರೆ ಅಥವಾ ಶ್ರೀಮಂತರಿದ್ದರೆ ಅವರಿಗೆ ಅಪಾರ ಗೌರವ ನೀಡಲಾಗುತ್ತಿದೆ. ಆದರೆ ಅವರು ಹಣ ಗಳಿಸಿದ್ದು ಹೇಗೆ, ಶ್ರೀಮಂತರಾಗಿದ್ದು ಹೇಗೆ ಎಂದು ಯಾರೊಬ್ಬರೂ ಪ್ರಶ್ನಿಸುವುದಿಲ್ಲ' ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ