ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಮ್ಮ ಜಾತಿ ಯಾವುದು ಎಂದು ಕೇಳಲಿದೆ ಕೇಂದ್ರ ಸರಕಾರ (caste census | political parties | UPA government | Manmohan Singh)
Bookmark and Share Feedback Print
 
ಹಲವು ರಾಜಕೀಯ ಪಕ್ಷಗಳ ಬೇಡಿಕೆಗೆ ಮಣಿದಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಮುಂದಿನ ವರ್ಷ ಜಾತಿ ಜನಗಣತಿ ನಡೆಸಲು ನಿರ್ಧರಿಸಿದೆ. ಅದರಂತೆ ಜಾತಿ ಜನಗಣತಿ ನಡೆಸುವ ಅಧಿಕಾರಿಗಳು ಎಲ್ಲಾ ಮನೆಗಳಿಗೂ ತೆರಳಿ, ನಿಮ್ಮ ಜಾತಿ ಯಾವುದು ಎಂದು ಪ್ರಶ್ನಿಸಿ ದಾಖಲು ಮಾಡಿಕೊಳ್ಳಲಿದ್ದಾರೆ.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಪುಟ ಸಚಿವರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಪ್ರಸಕ್ತ ನಡೆಯುತ್ತಿರುವ ಜನಗಣತಿಯಲ್ಲಿ ಜಾತಿ ಗಣತಿಯನ್ನು ನಡೆಸುತ್ತಿಲ್ಲವಾದ ಕಾರಣ, ಮುಂದಿನ ವರ್ಷ ಪ್ರತ್ಯೇಕವಾಗಿ ಜಾತಿ ಜನಗಣತಿ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜನಗಣತಿಗೆ ಜಾತಿಯನ್ನು ಸೇರ್ಪಡೆಗೊಳಿಸುವ ವಿಚಾರ ರಾಜಕೀಯ ಸೂಕ್ಷ್ಮತೆಯನ್ನೊಳಗೊಂಡಿದ್ದ ಕಾರಣ ಸರಕಾರದಲ್ಲೇ ಪರ-ವಿರೋಧಗಳು ತೀವ್ರವಾಗಿದ್ದವು. ಆದರೆ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಯು, ಬಿಎಸ್‌ಪಿ ಮತ್ತು ಸಮಾಜವಾದಿ ಸೇರಿದಂತೆ ಹಲವು ಪಕ್ಷಗಳು ಜಾತಿ ಜನಗಣತಿ ನಡೆಸುವಂತೆ ಒತ್ತಾಯಿಸಿದ್ದವು.

ಈ ಸಂಬಂಧ ಸಂಸತ್ತಿನ ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಎಲ್ಲಾ ರಾಜಕೀಯ ಪಕ್ಷಗಳು ಜನಗಣತಿಗೆ ಜಾತಿಯನ್ನು ಸೇರಿಸುವ ಕುರಿತು ಬೆಂಬಲ ವ್ಯಕ್ತಪಡಿಸಿರುವುದರಿಂದ ಈ ವಿಚಾರದ ಕುರಿತು ಯಾವುದೇ ಗುಮಾನಿ ಬೇಕಾಗಿಲ್ಲ ಎಂದಿದ್ದರು.

ಇಂದು ಸಭೆ ಸೇರಿದ ಸಂಪುಟವು ಜಾತಿ ಜನಗಣತಿಗೆ ತನ್ನ ಅಂತಿಮ ಮುದ್ರೆಯನ್ನೊತ್ತಿದೆ.

ಅದರ ಪ್ರಕಾರ ಮನೆ-ಮನೆಗೆ ತೆರಳಿ ನಡೆಸುವ ಈ ಜಾತಿ ಜನಗಣತಿ 2011ರ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಜಾತಿ ಯಾವುದೆಂಬ ಪ್ರಶ್ನೆಯನ್ನು ಅಧಿಕಾರಿಗಳು ಕೇಳಿದಾಗ, ಉತ್ತರ ನೀಡುವ ಅಥವಾ ನೀಡದೇ ಇರುವ ಅಧಿಕಾರವನ್ನು ನಾಗರಿಕರು ಹೊಂದಿರುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ