ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಗೆ ದೇಶದ ಯಾವುದೂ ಸರಿಯಿಲ್ಲ: ಕಾಂಗ್ರೆಸ್ ಲೇವಡಿ (BJP | PJ Thomas | 2G spectrum scam | Congress)
Bookmark and Share Feedback Print
 
ಕೇಂದ್ರ ಜಾಗೃತ ದಳದ ಆಯುಕ್ತರನ್ನಾಗಿ ಪಿ.ಜೆ. ಥಾಮಸ್ ಅವರನ್ನು ನೇಮಕಗೊಳಿಸಿರುವುದು 2ಜಿ ತರಂಗಾಂತರ ಹಗರಣವನ್ನು ಮುಚ್ಚಿ ಹಾಕುವ ಯತ್ನ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಪ್ರಮುಖ ಪ್ರತಿಪಕ್ಷಕ್ಕೆ ದೇಶದಲ್ಲಿನ ಯಾವ ಸಂಸ್ಥೆಯೂ ಸರಿಯಿದ್ದಂತೆ ಕಾಣುತ್ತಿಲ್ಲ; ಅವುಗಳಿಗೆ ಮಸಿ ಬಳಿಯುವ ಯತ್ನದಲ್ಲಿ ಕೇಸರಿ ಪಕ್ಷ ತೊಡಗಿದೆ ಎಂದಿದೆ.

ಅದು ಸಿಬಿಐ (ಕೇಂದ್ರೀಯ ತನಿಖಾ ದಳ) ಆಗಿರಬಹುದು ಅಥವಾ ಸಿವಿಸಿ (ಕೇಂದ್ರ ಜಾಗೃತ ದಳ) ಇರಬಹುದು, ಬಿಜೆಪಿಯು ದೇಶದ ಎಲ್ಲಾ ಸಂಸ್ಥೆಗಳಿಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದೆ. ಸಿವಿಸಿ ಆಯುಕ್ತರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಪಕ್ಷದ ನಾಯಕಿ ಮುಂದೊಡ್ಡಿರುವ ಕಾರಣಗಳು ನಿರಾಧಾರ. ಆದರೆ ಪ್ರತಿಯೊಂದು ವಿಚಾರಗಳಲ್ಲೂ ರಾಜಕೀಯ ಬೇಳೆ ಬೇಯಿಸಬೇಕೆಂದು ಹೊರಟಿದ್ದರೆ, ಯಾರು ತಾನೇ ಅದನ್ನು ತಡೆಯಲು ಸಾಧ್ಯವಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರಶ್ನಿಸಿದರು.

ಸಿವಿಸಿ ಆಯುಕ್ತರನ್ನಾಗಿ ಥಾಮಸ್ ಅವರನ್ನು ನೇಮಕಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸಿದ್ದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.

2ಜಿ ತರಂಗಾಂತರ ಹಗರಣವನ್ನು 'ಮಹಾ ಬೋಫೋರ್ಸ್' ಎಂದು ಬಣ್ಣಿಸಿದ್ದ ಬಿಜೆಪಿ, ದೂರಸಂಪರ್ಕ ಇಲಾಖೆಯ ಮಾಜಿ ಕಾರ್ಯದರ್ಶಿ ಥಾಮಸ್ ಅವರನ್ನು ಸಿವಿಸಿಗೆ ನೇಮಕಗೊಳಿಸಿದ್ದಕ್ಕೆ ಸರಕಾರವನ್ನು ಗುರಿ ಮಾಡಿತ್ತು. ಇಲಾಖೆಯಲ್ಲಾದ ಹಗರಣವನ್ನು ಮುಚ್ಚಿ ಹಾಕಲು ಇಂತಹ ನಡೆಯನ್ನು ಅನುಸರಿಸಲಾಗಿದೆ ಎಂದು ಆರೋಪಿಸಲಾಗಿತ್ತು.

2ಜಿ ತರಂಗಾಂತರ ಹಂಚಿಕೆಯಲ್ಲಾದ ಅವ್ಯವಹಾರಗಳನ್ನು ಸಿವಿಸಿ ಮತ್ತು ಮಹಾಲೇಖಪಾಲರು (ಸಿಎಜಿ) ಮುಂತಾದ ತನಿಖಾ ದಳಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಥಾಮಸ್ ವಹಿಸಿರುವ ಪಾತ್ರದ ಕುರಿತು ತಾನು ಮಾಹಿತಿಗಳನ್ನು ಸಂಗ್ರಹಿಸಿರುವುದಾಗಿ ಹೇಳಿಕೊಂಡಿದ್ದ ಪ್ರತಿಪಕ್ಷವು ಈ ಸಂಬಂಧ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತ್ತು.

ಬಿಜೆಪಿಯ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕಿದ್ದ ಯುಪಿಎ ಸರಕಾರವು, ಥಾಮಸ್ ಅವರನ್ನೇ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಎಲ್ಲಾ ನಾಯಕರು ಕಾರ್ಯಕ್ರಮದಿಂದ ಹೊರಗುಳಿದಿದ್ದರು. ಅಲ್ಲದೆ ಸುಷ್ಮಾ ಸ್ವರಾಜ್ ಈ ಸಂಬಂಧ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ದೂರನ್ನೂ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ