ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಮ್ಮ ಲಿಪ್‌ಸ್ಟಿಕ್‌ಗಿನ್ನು ಮೆಣಸಿನಕಾಯಿ ರಂಗು! (Lipstick | Mirchi | Color | Cake | Science)
Bookmark and Share Feedback Print
 
IFM
ಲಿಪ್‌ಸ್ಟಿಕ್‌ಗೂ ಮೆಣಸಿನಕಾಯಿಗೂ ಏನ್ ಸಂಬಂಧ ಅಂತ ಯೋಚಿಸುತ್ತಿದ್ದಾರಾ? ಹೌದು. ಸಂಬಂಧ ಏರ್ಪಡಲಿದೆ ಸದ್ಯದಲ್ಲೇ. ಹಾಗೆ ನಿಮ್ಮ ತುಟಿಯಿನ್ನು ಖಾರಾ ಆದ್ರೂ ಆಶ್ಚರ್ಯವಿಲ್ಲ!

ಕನ್‌ಫ್ಯೂಷನ್ ಬೇಡ. ವಿಷಯ ತುಂಬಾ ಸಿಂಪಲ್. ಇದೀಗ ಲಿಪ್‌ಸ್ಟಿಕ್‌ಗೆ ಮತ್ತಷ್ಟು ರಂಗು ನೀಡಬಲ್ಲ ವಿಶೇಷ ರೀತಿಯ ಮೆಣಸಿನ ಕಾಯಿಯನ್ನು ಬೆಳೆಸುವಲ್ಲಿ ವಾರಣಾಸಿಯ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಕೇವಲ ಲಿಪ್‌ಸ್ಟಿಕ್ ಮಾತ್ರವಲ್ಲದೆ, ಇತರ ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ ನೈಸರ್ಗಿಕ ಬಣ್ಣವನ್ನು ಬಳಸುವ ಉದ್ದೇಶದಿಂದ ಈ ವಿಶೇಷ ತಳಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ತಳಿಗೆ ಪಪ್ರಿಕಾ ಅಥವಾ ಐವಿಪಿಬಿಸಿ 535 ಎಂದು ಹೆಸರಿಡಲಾಗಿದೆ.
PR


ಈ ವಿಶೇಷ ಮೆಣಸಿನಕಾಯಿಯನ್ನ ಕೆಂಪು, ಹಳದಿ, ಕಂದು ಹಾಗೂ ಕಿತ್ತಳೆ ಬಣ್ಣದಲ್ಲಿ ಬೆಳೆಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹೊಸ ಮೆಣಸಿನ ಕಾಯಿಯ ಸೃಷ್ಟಿಯಿಂದಾಗಿ ಲಿಪ್‌ಸ್ಟಿಕ್ ಮತ್ತಿತರ ಸೌಂದರ್ಯ ವರ್ಧಕಗಳ ಜೊತೆಗೆ ಕೇಕ್, ಸಾಸ್, ಹಾಗೂ ಇತರ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಬಳಸಬಹುದಾಗಿದೆ. ಜೊತೆಗೆ ಚರ್ಮಕ್ಕೂ, ಆರೋಗ್ಯಕ್ಕೂ ಯಾವುದೇ ಹಾನಿಯಿಲ್ಲ.

ಹಾಂ ಅಂದಹಾಗೆ, ಈ ಮೆಣಸಿನ ಕಾಯಿಯ ರುಚಿ ಖಾರವಾಗಿರುವುದಿಲ್ಲವಂತೆ. ಹಾಗಾಗಿ ನಿಮ್ಮ ತುಟಿಯೂ ಖಾರವಿರಲಿಕ್ಕಿಲ್ಲ ಬಿಡಿ, ಚಿಂತೆ ಬೇಡ!
ಸಂಬಂಧಿತ ಮಾಹಿತಿ ಹುಡುಕಿ