ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮ.ಪ್ರ. ಬಿಜೆಪಿ ಸರ್ಕಾರ ವ್ಯಾಪಾರ ಮಾಡುತ್ತಿದೆ: ದಿಗ್ವಿಜಯ್ (BJP | Madhya Pradesh | Congress | Digvijay Singh)
Bookmark and Share Feedback Print
 
ಮಧ್ಯಪ್ರದೇಶದ ಬಿಜೆಪಿ ಸರಕಾರವು ಆಡಳಿತ ನಡೆಸುವ ಬದಲು ವ್ಯಾಪಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಮಹಾಕೋಸಲಕ್ಕೆ ಭೇಟಿ ನೀಡಿದ್ದ ಅವರು, ಸರಕಾರಿ ಕಚೇರಿಗಳಿಗೆ ಮತ್ತು ಮನೆಗಳಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ಅಕ್ರಮವಾಗಿ ಸಂಪಾದಿಸಿದ್ದ ಮಿಲಿಯನ್‌ಗಟ್ಟಲೆ ಹಣ ಪತ್ತೆಯಾಗಿದೆ. ಒಂದು ವೇಳೆ ಇದೇ ರೀತಿಯ ದಾಳಿಗಳನ್ನು ಮಧ್ಯಪ್ರದೇಶ ಸರಕಾರದ ಸಚಿವರುಗಳ ಮೇಲೆ ನಡೆಸುತ್ತಿದ್ದಲ್ಲಿ ಬಿಲಿಯನ್‌ಗಟ್ಟಲೆ ಹಣ ಹೊರಗೆ ಬರುತ್ತಿತ್ತು ಎಂದರು.

ಅದೇ ಹೊತ್ತಿಗೆ ಮಧ್ಯಪ್ರದೇಶದ ವಿರುದ್ಧ ಕೇಂದ್ರ ಸರಕಾರವು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂಬ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ವಾದವನ್ನು ತಳ್ಳಿ ಹಾಕಿರುವ ದಿಗ್ವಿಜಯ್, ಅವರ ಸರಕಾರಕ್ಕೆ ಏಳು ವರ್ಷಗಳ ಹಿಂದೆ ದೊರೆಯುತ್ತಿದ್ದ ಕೇಂದ್ರದ ನಿಧಿಗಿಂತ ಐದು ಪಟ್ಟು ಹೆಚ್ಚು ಅನುದಾನಗಳು ಈಗ ದೊರಕುತ್ತಿದೆ ಎಂದಿದ್ದಾರೆ.

ರಾಜ್ಯ ಸರಕಾರ ಹೇಳುತ್ತಿರುವಂತೆ ಕೈಗಾರಿಕಾ ಸಂಸ್ಥೆಗಳಿಂದ ಕೋಟಿಗಟ್ಟಲೆ ಬಂಡವಾಳ ಹರಿಸಲು ಪರಸ್ಪರ ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಳಮಟ್ಟದಲ್ಲಿ ಇದು ಕಾಣುತ್ತಿಲ್ಲ ಎಂದರು.

ಬಿಜೆಪಿಯು ಚುನಾವಣೆಯ ಸಂದರ್ಭದಲ್ಲಿ ಏಳು ವರ್ಷಗಳ ಹಿಂದೆ ನೀಡಿದ ಆಶ್ವಾಸನೆಯನ್ನು ಈಡೇರಿಸಿಲ್ಲ. ಅಧಿಕಾರಕ್ಕೆ ಬಂದ 100 ದಿನಗಳೊಳಗೆ ಜನತೆಗೆ ಅನಿಯಮಿತ ವಿದ್ಯುತ್ ನೀಡುವುದಾಗಿ ಹೇಳಿದ್ದರೂ, ಅದಿನ್ನೂ ಜಾರಿಯಾಗಿಲ್ಲ. ಈಗ 2013ರೊಳಗೆ 24 ಗಂಟೆಗಳ ವಿದ್ಯುತ್ ಒದಗಿಸುತ್ತೇವೆ ಎಂದು ಮತ್ತೊಂದು ಭರವಸೆ ನೀಡುತ್ತಿದ್ದಾರೆ ಎಂದು ಬಿಜೆಪಿ ಸರಕಾರವನ್ನು ಲೇವಡಿ ಮಾಡಿದರು.

ಆರೆಸ್ಸೆಸ್ ವಿರುದ್ಧ ನಿರಂತರ ಹೇಳಿಕೆ ನೀಡುತ್ತಾ ಬಂದಿರುವ ಕಾಂಗ್ರೆಸ್ ಹಿರಿಯ ನಾಯಕ ಈ ಸಂದರ್ಭದಲ್ಲೂ ಕಿಡಿ ಕಾರಿದ್ದಾರೆ. ರಾಜ್ಯ ಗೃಹಸಚಿವ ಉಮಾಶಂಕರ್ ಗುಪ್ತಾ ಅವರು ಆರೆಸ್ಸೆಸ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, 250ಕ್ಕೂ ಹೆಚ್ಚು ಮಂದಿಯ ಹೆಸರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹತ್ಯಾಯತ್ನ ಆರೋಪದ ಮೇಲೆ ಅವರೆಲ್ಲರನ್ನೂ ಬಂಧಿಸುವಂತೆ ಸಚಿವ ಗುಪ್ತಾ ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ ಎಂದು ಅವರು ನೇರವಾಗಿ ಆರೋಪ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ