ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದಿದೆ ಹಿಂಸಾಚಾರ; 12 ಬಲಿ (Kashmir | Baramulla district | Jammu and Kashmir | CRPF personnel)
Bookmark and Share Feedback Print
 
ಕೆಲವು ದಿನಗಳ ಹಿಂದಿನವರೆಗೆ ತಹಬದಿಗೆ ಬಂದಿದ್ದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶಾಂತಿ-ಸುವ್ಯವಸ್ಥೆ ಮತ್ತೆ ಹದಗೆಟ್ಟಿದೆ. ಸೋಮವಾರ ಒಂದೇ ದಿನ ನಡೆದ ಹಿಂಸಾಚಾರಗಳಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸರಕಾರಿ ಆಸ್ತಿ ಮತ್ತು ಖಾಸಗಿ ಶಾಲೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ.

ಅಮೆರಿಕಾದಲ್ಲಿ ಕುರಾನ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ಗಾಳಿಸುದ್ದಿಯಿಂದ ಆಕ್ರೋಶಿತಗೊಂಡಿದ್ದ ಮುಸ್ಲಿಮರ ಗುಂಪೊಂದು ಶ್ರೀನಗರದಿಂದ 45 ಕಿಲೋ ಮೀಟರ್ ದೂರದಲ್ಲಿರುವ ಬಾರಮುಲ್ಲಾ ಜಿಲ್ಲೆಯ ತಂಗಮಾರ್ಗ್ ಎಂಬಲ್ಲಿನ ಖಾಸಗಿ ಶಾಲೆಗೆ ಬೆಂಕಿ ಹಚ್ಚಿದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ರಕ್ಷಣಾ ಪಡೆಗಳು ಗುಂಡು ಹಾರಿಸಿದ್ದವು. ಈ ಸಂದರ್ಭದಲ್ಲಿ ಐವರು ಬಲಿಯಾದರೆ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಈ ಶಾಲೆಯನ್ನು ರಾಜ್ಯದ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯೊಂದು ನಡೆಸುತ್ತಿತ್ತು.

ಇಲ್ಲಿನ ವಿಭಾಗೀಯ ಅಭಿವೃದ್ಧಿ ಕಚೇರಿ, ಕೋರ್ಟ್ ಚೇಂಬರ್, ತಹಶೀಲ್ದಾರ್ ವಾಹನ ಮತ್ತು ಅವರ ಮನೆ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ, ಪಟವಾರಿ ಕಚೇರಿ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಎರಡು ಗುಡಿಸಲುಗಳಿಗೆ ಗುಂಪು ಬೆಂಕಿ ಹಚ್ಚಿತ್ತು.

ನಂತರ ಸಮೀಪದ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿ, ಠಾಣೆಯನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿತು. ಈ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ 20ರಷ್ಟು ನಾಗರಿಕರು ಗಾಯಗೊಂಡರು.

ಈ ನಡುವೆ ಜಮ್ಮು-ಕಾಶ್ಮೀರ ಸರಕಾರವು ವಿದೇಶಿ ಸುದ್ದಿ ಚಾನೆಲ್‌ಗಳ ಮೇಲೆ ನಿಷೇಧ ಹೇರಿದೆ. ಪವಿತ್ರ ಕುರಾನ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯನ್ನು ಪ್ರಕಟಿಸಿದ ನಂತರ ಈ ಬೆಳವಣಿಗೆಗಳು ಕಂಡು ಬಂದಿವೆ.

ಬದ್ಗಂ ಜಿಲ್ಲೆಯ ಹುಮಾಮ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಸ್ಥಳೀಯರು ಘರ್ಷಣೆಗಿಳಿದಾಗ ನಡೆದ ಗುಂಡು ಹಾರಾಟದಲ್ಲಿ ಇಬ್ಬರು ಪ್ರತಿಭಟನಾಕಾರರು ಬಲಿಯಾದರು. ಇವರಲ್ಲಿ ಓರ್ವ ಒಂಬತ್ತರ ಹರೆಯ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ