ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಗಾಂಧಿಗೆ ದಿನಕ್ಕೆ 5,000 ಪತ್ರಗಳು ಬರ್ತವಂತೆ! (Rahul Gandhi | Santiniketan | West Bengal | Congress)
Bookmark and Share Feedback Print
 
ಉತ್ತರ ಕನ್ನಡದ ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಅವರ ಆರಂಭದ ದಿನಗಳಲ್ಲಿ ಮತ ಪೆಟ್ಟಿಗೆಗಳಿಗೆ ಯುವತಿಯರು ಪ್ರೇಮ ಪತ್ರಗಳನ್ನು ತುರುಕುತ್ತಿದ್ದರು ಎಂಬುದು ಕೆಲ ವರ್ಷಗಳ ಹಿಂದೆ ಪ್ರತೀತಿಯಲ್ಲಿದ್ದ ಮಾತು. ಈಗ ಅದೇ ರೀತಿಯ ಪರಿಸ್ಥಿತಿ ಎದುರಿಸುತ್ತಿರುವವರು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ.

ಇಲ್ಲಿರುವ ಭಿನ್ನತೆಯೆಂದರೆ ಇಲ್ಲಿ ರಾಹುಲ್‌ಗಾಂಧಿಯವರಿಗೆ ದಿನಾ ಪತ್ರ ಬರುತ್ತಿರುವುದು ಮತ್ತು ಅದು ರಾಷ್ಟ್ರದ ಸಮಸ್ಯೆಗಳ ಕುರಿತಾಗಿರುವುದು.

ಇದನ್ನು ಬಹಿರಂಗಪಡಿಸಿರುವುದು ಸ್ವತಃ ರಾಹುಲ್ ಗಾಂಧಿ. ಪಶ್ಚಿಮ ಬಂಗಾಲ ಪ್ರವಾಸದಲ್ಲಿರುವ ಅವರು ವಿದ್ಯಾರ್ಥಿಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.

ತನಗೆ ದಿನಕ್ಕೆ ಬರುತ್ತಿರುವ ಇಷ್ಟೊಂದು ಪತ್ರಗಳನ್ನು ಓದುವುದು ಸಾಧ್ಯವಾಗುತ್ತಿಲ್ಲ. ಆದರೂ ಸಾಕಷ್ಟು ಸಲಹೆಗಳು, ಬೇಡಿಕೆಗಳು, ಯೋಜನೆಗಳ ಬಗ್ಗೆ ಪ್ರಶ್ನೆಗಳು ನನಗೆ ಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

ತಮಗೆ ಸಿಗಬೇಕಾದ ಸವಲತ್ತುಗಳಲ್ಲಿನ ವಿಳಂಬ ಅಥವಾ ತಡೆಯುವಿಕೆ ಮುಂತಾದ ಸಮಸ್ಯೆಗಳನ್ನು ಮೇಲಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದರೂ ಪರಿಹಾರ ಕಾಣದೇ ಇದ್ದಾಗ ಏನು ಮಾಡಬೇಕು ಎಂದು ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿನ ಕೆಲವು ಸಂಶೋಧನಾ ವಿದ್ವಾಂಸರು ಪ್ರಶ್ನಿಸಿದಾಗ ಉತ್ತರಿಸಿದ ಗಾಂಧಿ, ತಾನು ಪ್ರತಿದಿನ 5,000ಕ್ಕೂ ಹೆಚ್ಚು ಪತ್ರಗಳನ್ನು ಸ್ವೀಕರಿಸುತ್ತಿದ್ದೇನೆ; ಆದರೆ ಅವೆಲ್ಲವನ್ನೂ ಗಮನಿಸಿ ಪರಿಹಾರ ಕೊಡುವುದು ಅಸಾಧ್ಯವಾದ ಕೆಲಸ ಎಂದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಥವಾ ಇತರರಿಗೆ ಜನತೆ ಎಷ್ಟೆಲ್ಲ ಪತ್ರಗಳನ್ನು ಬರೆಯುತ್ತಾರೆ, ಅವುಗಳಿಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ನನಗೆ ಗೊತ್ತಿಲ್ಲ. ಆ ಕುರಿತು ಯಾವ ಪ್ರತಿಕ್ರಿಯೆಯನ್ನೂ ನಾನು ನೀಡುವುದಿಲ್ಲ. ನನಗಂತೂ ಪ್ರತಿ ದಿನ ಸರಾಸರಿ ಐದು ಸಾವಿರ ಪತ್ರಗಳು ಬರುತ್ತಿವೆ. ಸಾಧ್ಯವಾದ ರೀತಿಯಲ್ಲಿ ಅವುಗಳಿಗೆ ಸ್ಪಂದಿಸಲು ಯತ್ನಿಸುತ್ತೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ