ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೃಣಮೂಲ ಜತೆಗಿರುತ್ತೇವೆ, ಆದರೆ ಬಗ್ಗೋದಿಲ್ಲ: ರಾಹುಲ್ (Congress | Trinamool Congress | Rahul Gandhi | Mamta Banerjee)
Bookmark and Share Feedback Print
 
ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಮುಂದುವರಿಸುವ ಬಗ್ಗೆ ಕಾಂಗ್ರೆಸ್ ಗಂಭೀರವಾಗಿದೆ. ಆದರೆ ಅಲ್ಲಿ ಗೌರವಾರ್ಹ ನಿಬಂಧನೆಗಳಿರುತ್ತವೆ ಮತ್ತು ನಾವು ತಲೆ ಬಾಗಿ ಶರಣಾಗಲಾರೆವು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ನಾವು ಮುಂದುವರಿಸಬಹುದು. ಆದರೆ ಶಿರಬಾಗಿ ನಮಸ್ಕರಿಸುವುದು ನಮ್ಮಿಂದ ಆಗದ ಕೆಲಸ ಎಂದು ಮುಚ್ಚಿದ ಸಭಾಂಗಣದೊಳಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ನಾಯಕ ಸ್ಪಷ್ಟಪಡಿಸಿದರು.

ಎಡರಂಗದ ಆಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮುಂಬರುವ ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಮುಂದುವರಿಸಲು ಕಾಂಗ್ರೆಸ್ ಬದ್ಧವಾಗಿದೆ. ಅದಕ್ಕಾಗಿ ನೀವು ಕಾಂಗ್ರೆಸ್ಸನ್ನು ಬಲಪಡಿಸಬೇಕಾಗಿದೆ. ಹಾಗೆ ಮಾಡಿದಲ್ಲಿ ಮುಂದಿನ ವರ್ಷದ ಚುನಾವಣೆಯಲ್ಲಿ ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸಲು ಸಾಧ್ಯವಾಗುತ್ತದೆ ಎಂದರು.

ಪಶ್ಚಿಮ ಬಂಗಾಲದ ಮೂರು ದಿನಗಳ ಭೇಟಿಯ ಎರಡನೇ ದಿನ ಉತ್ತರ ಬಂಗಾಲದ ಜಲ್ಪಾಯಿಗುರಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಸಿಪಿಐಎಂ ವಿರುದ್ಧ ಅದ್ಭುತ ಗೆಲುವು ಸಾಧಿಸಲು ಪಕ್ಷವನ್ನು ಸದೃಢಗೊಳಿಸಿ ಎಂದರು.

ಬದಲಾವಣೆಯು ಅನಿವಾರ್ಯವಾಗಿದೆ ಮತ್ತು ಅದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಡೆಯಲಿದೆ ಎಂದು ನೆರೆದಿದ್ದ ನೂರಾರು ಕಾರ್ಯಕರ್ತರಲ್ಲಿ ಪುಳಕ ಹುಟ್ಟಿಸಿದರು.

ಕೆಲವು ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರು ತೃಣಮೂಲ ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದರೂ, ಅದರ ಬಗ್ಗೆ ರಾಹುಲ್ ಯಾವುದೇ ರೀತಿಯಲ್ಲೂ ತಲೆ ಕೆಡಿಸಿಕೊಂಡಂತೆ ಕಂಡಿರಲಿಲ್ಲ. ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ ಎಂದಷ್ಟೇ ಈ ಬಗ್ಗೆ ಯುವ ಕಾಂಗ್ರೆಸ್ಸಿಗರಲ್ಲಿ ಹೇಳಿದರು.

ಉಳಿದಂತೆ ಈ ಹಿಂದೆ ಬಂಗಾಲಕ್ಕೆ ಭೇಟಿ ನೀಡಿದ್ದ ಎರಡು ಸಂದರ್ಭಗಳಲ್ಲಿ ಆಡಳಿತ ಪಕ್ಷದ ವಿರುದ್ಧ ಮಾಡಿರುವ ಆರೋಪಗಳನ್ನೆಲ್ಲ ಈ ಬಾರಿಯೂ ಪುನರಾವರ್ತಿಸಿದರು.
ಸಂಬಂಧಿತ ಮಾಹಿತಿ ಹುಡುಕಿ