ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದುತ್ವ ಹಿಂಸಾಚಾರವನ್ನು ಪ್ರಚೋದಿಸುವುದಿಲ್ಲ: ಭಾಗ್ವತ್ (RSS | saffron terror | Mohan Bhagwat | jihadi terrorism)
Bookmark and Share Feedback Print
 
ಹಿಂದೂಗಳು ಕಲಹಪ್ರಿಯರಲ್ಲ, ಶಾಂತಿಗೆ ಹೆಸರಾದವರು ಎಂದು ಬಣ್ಣಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್, ಇತ್ತೀಚೆಗೆ ಕೇಳಿ ಬಂದಿರುವ 'ಕೇಸರಿ ಭಯೋತ್ಪಾದನೆ' ಸರಿಯಾದ ಉಕ್ತಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಪತ್ರಕರ್ತೆಯರೊಂದಿಗೆ ಸಂವಾದ ನಡೆಸುತ್ತಿದ್ದ ಆರೆಸ್ಸೆಸ್ ಸರಸಂಘಚಾಲಕ, 'ಕೇಸರಿ ಭಯೋತ್ಪಾದನೆ' ಶಬ್ಧವು ಸೂಕ್ತವಾದುದಲ್ಲ ಎಂದು ಅಭಿಪ್ರಾಯಪಟ್ಟರು.

ಇಲ್ಲಿ ಕೆಲವು ಆಕಸ್ಮಿಕ ಮತ್ತು ಸಣ್ಣ ಪ್ರಮಾಣದಲ್ಲಿ ವ್ಯಕ್ತಿಗಳು ಇಂತಹ ಘಟನೆಗಳು ಪಾಲ್ಗೊಂಡಿರಬಹುದು. ಅವರ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆದರೆ ಅದನ್ನು ಕೇಸರಿ ಭಯೋತ್ಪಾದನೆ ಎಂದು ಹೆಸರಿಸುವುದು ಸರಿಯಲ್ಲ ಎಂದರು.

ಇಂತಹ ವ್ಯಕ್ತಿಗಳು ದೇಶಭಕ್ತ ಸಂಘಟನೆಯೆಂದು ಹೆಸರು ಪಡೆದಿರುವ ಆರೆಸ್ಸೆಸ್‌ಗೆ ಸೇರಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗ್ವತ್, ಖಂಡಿತಾ ಅದು ಆರೆಸ್ಸೆಸ್ ಆಗಿರಲಿ ಅಥವಾ ಬೇರೆ ಯಾವುದೇ ಸಂಘಟನೆ ಸೇರಿರಲಿ. ತಪ್ಪಿತಸ್ಥರು ನಿಜವಾಗಿದ್ದಲ್ಲಿ ಅವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಸ್ಪಷ್ಟಪಡಿಸಿದರು.

ಆದರೆ ಹಿಂದೂ ಧರ್ಮ ಅಥವಾ ಆರೆಸ್ಸೆಸ್ ಹಿಂಸಾಚಾರವನ್ನು ಯಾವತ್ತೂ ಪ್ರೋತ್ಸಾಹಿಸಿಲ್ಲ ಅಥವಾ ಪೋಷಿಸುವುದಿಲ್ಲ ಎಂದೂ ಅವರು ಆರೋಪ ಮಾಡುತ್ತಿರುವವರಿಗೆ ತಿರುಗೇಟು ನೀಡಿದರು.

ಹಾಗೊಂದು ವೇಳೆ ಕೇಸರಿ ಭಯೋತ್ಪಾದನೆ ಎಂಬ ಹೆಸರಿನಲ್ಲಿ ಇಂತಹ ಘಟನೆಗಳು ಬೃಹತ್ ಎಂಬಂತೆ ಬಿಂಬಿತವಾಗಿದ್ದರೆ ಅದಕ್ಕೆ ರಾಜಕೀಯ ಪಕ್ಷಗಳ ಬಾಯಿ ಚಪ್ಪರಿಸುವಿಕೆಯೇ ಕಾರಣ ಎಂದೂ ಆರೋಪಿಸಿದ ಭಾಗ್ವತ್, ತಮ್ಮ ರಾಜಕೀಯ ಸಿದ್ಧಾಂತಕ್ಕೆ ಇಂತಹ ವಿಚಾರಗಳು ಹತ್ತಿರವೇ ಎಂದು ಆ ಸಂದರ್ಭದಲ್ಲಿ ಪ್ರಶ್ನಿಸುವ ಸನ್ನಿವೇಶ ಎದುರಾಗುತ್ತದೆ ಎಂದರು.

ಇಂತಹ ಶಬ್ಧಗಳನ್ನು ಬಳಸುವ ಮೂಲಕ ಹೊರಜಗತ್ತಿಗೆ ಯಾವ ಸಂದೇಶವನ್ನು ರವಾನಿಸಲು ನೀವು ಬಯಸುತ್ತಿದ್ದೀರಿ? ಪಾಕಿಸ್ತಾನವನ್ನು ಕೆಲವರು 'ದುಷ್ಟ ರಾಷ್ಟ್ರ' ಎಂದು ಕರೆಯುತ್ತಿರುವಂತೆ ಭಾರತವನ್ನು ಕೂಡ ಕರೆಯಬೇಕೆಂದು ಬಯಸುತ್ತಿದ್ದೀರಾ? ಇಂತಹ ವಿಚಾರಗಳಲ್ಲಿ ಕನಿಷ್ಠ ಜವಾಬ್ದಾರಿಯನ್ನು ಮೆರೆಯಬೇಕಾಗಿದೆ ಎಂದು ವಿವರಣೆ ನೀಡಿದರು.

ಕೇಸರಿ ಮತ್ತು ಭಯೋತ್ಪಾದನೆ, ಹಿಂದೂ ಮತ್ತು ಭಯೋತ್ಪಾದನೆಗಳಿಗೆ ಪರಸ್ಪರ ಹೊಂದಾಣಿಕೆಯಾಗುವುದಿಲ್ಲ. ಅವುಗಳು ಸಂಯೋಜನೆಗೊಳ್ಳಲಾರವು ಎಂದ ಭಾಗ್ವತ್ ಅವರಲ್ಲಿ ಅಭಿನವ್ ಭಾರತ್ ಮತ್ತು ರಾಮಸೇನೆಯಂತಹ ಸಂಘಟನೆಗಳ ಕುರಿತು ಪ್ರಶ್ನಿಸಿದಾಗ, ಅದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ ಎಂದಷ್ಟೇ ಉತ್ತರಿಸಿದರು.

ಜಿಹಾದಿ ಭಯೋತ್ಪಾದನೆ ಎಂಬ ಶಬ್ಧಗಳನ್ನು ಬಳಸುತ್ತಿರುವಾಗ ಕೇಸರಿ ಭಯೋತ್ಪಾದನೆ ಎಂಬ ಉಕ್ತಿಯನ್ನು ಬಳಸಬಾರದು ಎಂದು ಹೇಗೆ ಹೇಳುತ್ತೀರಿ ಎಂದು ಪತ್ರಕರ್ತೆಯೊಬ್ಬರು ಭಾಗ್ವತ್ ಅವರಲ್ಲಿ ಪ್ರಶ್ನಿಸಿದಾಗ ಕೆಳಗಿನಂತೆ ಉತ್ತರಿಸಿದರು.

ಜಿಹಾದಿ ಭಯೋತ್ಪಾದನೆ ಎನ್ನುವುದನ್ನು ಜಗತ್ತಿನಾದ್ಯಂತ ಬಳಸಲಾಗುತ್ತಿದೆ. ಹಿಂಸಾಚಾರವನ್ನು ಬೆಂಬಲಿಸುವ ನಿರ್ದಿಷ್ಟ ಸಿದ್ಧಾಂತವನ್ನು ಜಿಹಾದಿ ಭಯೋತ್ಪಾದನೆ ಹೊಂದಿದೆ. ಆದರೆ ಹಿಂದೂ ಸಮಾಜವು ಹಿಂಸಾಚಾರವನ್ನು ಪೋಷಿಸುವುದಿಲ್ಲ. ಹಾಗಾಗಿ ಕೇಸರಿ ಅಥವಾ ಹಿಂದೂ ಶಬ್ಧಗಳು ಭಯೋತ್ಪಾದನೆಯ ಜತೆ ಸಾಗಲು ಸಾಧ್ಯವಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ