ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಶ್ವದ ಟಾಪ್ 100 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನವಿಲ್ಲ! (world top-100 universities|indian universities|iit kharagpur|iim-a)
Bookmark and Share Feedback Print
 
ಅಂದೊಮ್ಮೆ ಉತ್ತಮ ಶಿಕ್ಷಣಕ್ಕಾಗಿ ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಬಂದ ಕಾಲವೊಂದಿತ್ತು. ನಮ್ಮ ದೇಶದ ಶಿಕ್ಷಣವನ್ನು ಅನಾದಿಕಾಲದಿಂದಲೂ ನಾವು ಹೊಗಳತ್ತಾ ಬಂದಿದ್ದೇವೆ. ಆದರೆ ಸದ್ಯ ಬೆಳಕಿಗೆ ಬಂದಿರುವ ವರದಿಗಳ ಪ್ರಕಾರ ವಿಶ್ವದ ಅತ್ಯುನ್ನತ ಟಾಪ್ 100 ವಿಶ್ವವಿದ್ಯಾನಿಲಯಗಳ ಪೈಕಿ ಭಾರತದ ಒಂದೇ ಒಂದು ವಿಶ್ವವಿದ್ಯಾನಿಲಯವೂ ಸ್ಥಾನ ಪಡೆದಿಲ್ಲ ಎಂಬ ವಿಚಾರ ಗೊತ್ತೇ?

ಹೌದು. ಇತ್ತೀಚೆಗೆ ಹೊರಬಂದ ಹಲವಾರು ವರದಿಗಳ ಪ್ರಕಾರ ಭಾರತದ ಯಾವ ವಿಶ್ವವಿದ್ಯಾನಿಲಯವೂ ಕೂಡಾ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯುನಿವರ್ಸಿಟಿ ರ‌್ಯಾಂಕಿಂಗ್, ಅಕಾಡೆಮಿಕ್ ರ‌್ಯಾಂಕಿಂಗ್ ಆಫ್ ವರ್ಲ್ಡ್ ಯುನಿವರ್ಸಿಟೀಸ್, ಕ್ಯುಎಸ್ ವರ್ಲ್ಡ್ ಯುನಿವರ್ಸಿಟಿ ರ‌್ಯಾಂಕಿಂಗ್ಸ್ ಮತ್ತಿತರ ಪಟ್ಟಿಯಲ್ಲಿ ಒಂದರಲ್ಲೂ ಯಾವೊಂದು ಭಾರತೀಯ ವಿಶ್ವವಿದ್ಯಾನಿಲಯ ಸ್ಥಾನ ಪಡೆದಿಲ್ಲ.

ಈ ಮೂರೂ ವರದಿಗಳ ಪೈಕಿ ಅಮೆರಿಕದ ವಿಶ್ವವಿದ್ಯಾನಿಲಯಗಳೇ ಟಾಪ್ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ಇದರಲ್ಲಿ ಟೈಮ್ಸ್ ರ‌್ಯಾಂಕಿಂಗ್ ಪೈಕಿ ಭಾರತದ ಮುಂಬೈಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) 187ನೇ ಸ್ಥಾನ ಪಡೆದಿದೆ. ಇನ್ನುಳಿದ ಎರಡು ವರದಿಗಳ ಪೈಕಿ ಭಾರತ 200ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದರೆ ಚೀನಾ, ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ, ಇಸ್ರೇಲ್, ಥೈವಾನ್‌ನಂತಹ ದೇಶಗಳೂ ಕೂಡಾ ಉತ್ತಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.

ಐಐಟಿ ಖರಗ್‌ಪುರ್‌ನ ಡೀನ್ ಬಿ.ಕೆ.ಮಾಥುರ್ ಪ್ರಕಾರ, ಇಂಥ ವರದಿಗಳ ಪ್ರಸ್ತುತತೆಯನ್ನು ತಳ್ಳಿ ಹಾಕುತ್ತಾರೆ. ಇಂಥ ವರದಿಗಳೆಲ್ಲ 'ಕಾಫಿ ಟೇಬಲ್ ಡಿಸ್ಕಷನ್' ಎಂದು ವ್ಯಂಗ್ಯವಾಡಿದ್ದಾರೆ. ಭಾರತ ಇದೀಗ ವಿಶ್ವದ ಅತ್ಯಂತ ದೊಡ್ಡ ಆರ್ಥಿಕತೆಯಾಗುವತ್ತ ಬೆಳೆಯುತ್ತಿದೆ. ಜೊತೆಗೆ ಜಾಗತಿಕವಾಗಿ ಶೈಕ್ಷಣಿಕ ಹಬ್ ಆಗಿ ಪ್ರಖ್ಯಾತಿ ಪಡೆಯುತ್ತಿದೆ. ಇವೆಲ್ಲ ಭಾರತದ ಶೈಕ್ಷಣಿಕ ವಲಯದ ಸಾಧನೆಗಳಲ್ಲವೇ? ಹಾಗಾಗಿ ಇಂಥ ರ‌್ಯಾಂಕಿಂಗ್‌ಗಳಿಗೆಲ್ಲ ಮಹತ್ವ ನೀಡುವ ಅಗತ್ಯವಿಲ್ಲ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ