ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಮರಾಯನಿಗೆ ಸವಾಲು ಹಾಕುತ್ತಿರುವ 120 ವರ್ಷದ ವೃದ್ಧೆ! (boiled food | rice beer | Assam | Kareng Teronpi)
Bookmark and Share Feedback Print
 
ಭಾರತದ ಅತೀ ಹಿರಿಯ ಮಹಿಳೆಯರಲ್ಲಿ ಬಹುಶಃ ಈಕೆಯೂ ಒಬ್ಬರಾಗಿರಬಹುದು. ವಯಸ್ಸು 120 ದಾಟಿದೆ. ಆದರೆ ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ಕುಚ್ಚಲಕ್ಕಿ ಅನ್ನ, ತರಕಾರಿ ಮತ್ತು ದಿನಕ್ಕೊಂದು ಬಾಟಲಿ ಕಳ್ಳಭಟ್ಟಿ ಸಾರಾಯಿಯೇ ನನ್ನ ಜೀವನಕ್ಕೆ ಸ್ಫೂರ್ತಿ ಎಂದು ಈ ಮುತ್ತಜ್ಜಿ ಹೇಳಿಕೊಂಡಿದ್ದಾರೆ.

ಅಸ್ಸಾಮ್‌ನ ರಂಗ್‌ಪೋವ್ ಎಂಬಲ್ಲಿನ ಕರೆಂಗ್ ತೆರೊಂಪಿ ಎಂಬವರೇ ಈ ರೀತಿ ಗಟ್ಟಿಗ ಮುತ್ತಜ್ಜಿ. ಆದರೂ ಇತ್ತೀಚಿನ ಒಂದು ವರ್ಷದಿಂದ ದೈಹಿಕ ಸ್ಥಿತಿಯಲ್ಲಿ ಅಪಾರ ಬದಲಾವಣೆಗಳು ಕಂಡು ಬಂದಿವೆ. ಮಂಚ ಬಿಟ್ಟು ಏಳುವುದಕ್ಕೆ ಸಾಧ್ಯವಾಗುತ್ತಿಲ್ಲ. ದೇಹ ಸ್ಥಿತಿ ದುರ್ಬಲವಾಗಿದೆ.

ಅವರ ದೈಹಿಕ ಅಶಕ್ತತೆ ಮಾತಿನಲ್ಲಿ ಗೋಚರಿಸುತ್ತಿಲ್ಲ. ಹತ್ತಿರ ಸರಿದರೆ ಗುರುತು ಹಿಡಿಯುವಷ್ಟು ದೃಷ್ಟಿ ಹೊಂದಿರುವ ಕರೆಂಗ್, ಗೆಲುವಿನ ದನಿಯೊಂದಿಗೆ ತುಂಬಾ ಹುರುಪಿನೊಂದಿಗೆ ಚುರುಕಾಗಿ ಮಾತಿಗಿಳಿಯುತ್ತಾರೆ.

ಅಪರೂಪಕ್ಕೊಮ್ಮೆ ಮುಖದಲ್ಲಿ ನಗು ತಂದುಕೊಳ್ಳುವ ಅಜ್ಜಿಯಲ್ಲಿ ತಾವು ಹುಟ್ಟಿದ್ದು ಯಾವಾಗ ಎಂದು ಕೇಳಿದರೆ, ಅದೆಲ್ಲ ನನಗೆ ಗೊತ್ತಿಲ್ಲ; ಬಹುಶಃ ತುಂಬಾ ವರ್ಷಗಳ ಹಿಂದೆ ಎನ್ನುತ್ತಾರೆ.

ಆದರೂ ಅವರ ಮಗಳ ವಯಸ್ಸನ್ನು (90) ಆಧರಿಸಿ ವಯಸ್ಸನ್ನು ನಿರ್ಧರಿಸಲಾಗಿದೆ.

ನಮ್ಮ ತಂದೆ ಮತ್ತು ಅವರ ಸಹೋದರರು, ಸಹೋದರಿಯರು, ಅಜ್ಜ-ಅಜ್ಜಿಯರ ವಯಸ್ಸುಗಳನ್ನು ಲೆಕ್ಕ ಹಾಕಿ ಅಂದಾಜುಗಳ ಮೂಲಕ ನಾವು ಇವರ ವಯಸ್ಸನ್ನು ಲೆಕ್ಕಾಚಾರ ಮಾಡಿದ್ದೇವೆ ಎಂದು ಕರೆಂಗ್ ಅವರ ಮೊಮ್ಮಕ್ಕಳಲ್ಲೊಬ್ಬರಾದ ದೊಕ್ಸಿಂಗ್ ಕಾಥರ್ ಹೇಳುತ್ತಾರೆ.

ಕುಚ್ಚಲಕ್ಕಿ ಎಂದರೆ ಈ 120 ದಾಟಿರುವ ಅಜ್ಜಿಗೆ ಇಷ್ಟವೆಂತೆ. ಜತೆಗೆ ಬೇಯಿಸಿದ ತರಕಾರಿ ಮತ್ತು ಅಕ್ಕಿಯಿಂದ ತಯಾರಿಸಿದ ಕಳ್ಳಭಟ್ಟಿಯನ್ನೂ ಸೇವಿಸುತ್ತಾ ಬಂದಿದ್ದಾರೆ. ದಿನಕ್ಕೆರಡು ಲೋಟ ಮದ್ಯ ಬೇಕೇ ಬೇಕು. ಆದರೆ ಸಂಪೂರ್ಣ ಸಸ್ಯಾಹಾರಿ. ಅಲ್ಲದೆ ಮಸಾಲೆ ಪದಾರ್ಥಗಳನ್ನೂ ತಿನ್ನುವುದಿಲ್ಲ.

ನಾಲ್ಕು ಮಕ್ಕಳ ತಾಯಿಯಾಗಿರುವ ಕರೆಂಗ್ ಈಗಾಗಲೇ ನಾಲ್ಕು ಪೀಳಿಕೆಗಳನ್ನು ಕಂಡಿದ್ದಾರೆ. ಇವರ ಕುಟುಂಬದ ಒಟ್ಟು ಸದಸ್ಯರ ಸಂಖ್ಯೆಯೇ 60 ದಾಟಿದೆ. ನಾಲ್ವರು ಮಕ್ಕಳಲ್ಲಿ ಇಬ್ಬರು ವಯೋಸಹಜವಾಗಿ ಸಾವನ್ನಪ್ಪಿದ್ದಾರೆ. ಓರ್ವ ಮಗ ಮತ್ತು ಮಗಳು ಇನ್ನೂ ಬದುಕಿದ್ದಾರೆ. ಕರೆಂಗ್ ಅವರ ಕಂಡ ಆರು ದಶಕಗಳ ಹಿಂದೆಯೇ ಸತ್ತಿದ್ದರು.

ಕರೆಂಗ್ ಅವರ ಪುತ್ರ ಜಾನ್ ಕಾಥರ್‌ಗೆ ಈಗಾಗಲೇ 100 ತುಂಬಿದೆ. ತನ್ನ ಸುದೀರ್ಘ ಆಯುಷ್ಯದ ಬಗ್ಗೆ ಅವರನ್ನೇ ಕೇಳಿದಾಗ, ನಾನು ಯಾವತ್ತೂ ತಂಬಾಕು ಅಥವಾ ತಂಬಾಕು ಉತ್ಪನ್ನಗಳನ್ನು ಸೇವಿಸಿಲ್ಲ. ಬೇಯಿಸಿದ ಪದಾರ್ಥಗಳನ್ನು ಮಸಾಲೆ ಇಲ್ಲದೆ ಸೇವಿಸುತ್ತಾ ಬಂದಿದ್ದೇನೆ. ಜೀವನದಲ್ಲಿನ ಶಿಸ್ತು ಕೂಡ ನನಗೆ ಸಹಾಯಕವಾಗಿದೆ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ