ಭಾರತದಲ್ಲಿ ಹಸಿವೆಯಿಂದ ಇಂದು ಬಳಲುತ್ತಿರುವ ಸಂಖ್ಯೆ ಬರೋಬ್ಬರಿ 27 ಕೋಟಿ ಅಂದರೆ ನಂಬುತ್ತೀರಾ? ಹೌದು. ಅಂತಾರಾಷ್ಟ್ರೀಯ ವರದಿಯೊಂದರ ಪ್ರಕಾರ, ಆಹಾರದ ಕೊರತೆ ಎದುರಿಸುತ್ತಿರುವ ಜಗತ್ತಿನ ಕಾಲು ಭಾಗಕ್ಕಿಂತ ಅಧಿಕ ಮಂದಿ ಭಾರತದಲ್ಲೇ ವಾಸಿಸುತ್ತಿದ್ದಾರೆ!
ಲಂಡನ್ ಮೂಲದ ಆಕ್ಷನ್ ಏಡ್ ಎಂಬ ಸಂಘಟನೆ ನಡೆಸಿದ ಸಮೀಕ್ಷೆಯಲ್ಲಿ ಹೂ ಈಸ್ ರಿಯಲೀ ಫೈಟಿಂಗ್ ಹಂಗರ್ ಎಂಬ ಹೆಸರಿನ ವರದಿಯ ಪ್ರಕಾರ, ಹಸಿವಿನಿಂದ ಬಳಲುತ್ತಿರುವ ಜನರಿರುವ 28 ದೇಶಗಳ ಪಟ್ಟಿಯಲ್ಲಿ ಭಾರತ 21ನೇ ಸ್ಥಾನದಲ್ಲಿದೆ. ಬ್ರೆಜಿಲ್ ಮತ್ತು ಚೀನಾ ದೇಶಗಳು ಮೊದಲ ಎರಡು ಸ್ಥಾನಗಳಲ್ಲಿವೆ.
1999ರಿಂದ 2005ರ ನಡುವೆ ಭಾರತದ ಆದಾಯ ಮೂರು ಪಟ್ಟು ಹೆಚ್ಚಿದೆ. ಆದರೂ ವಿಪರ್ಯಾಸವೆಂದರೆ, ಇದೇ ಸಮಯದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆಯೂ 5.3 ಕೋಟಿಯಷ್ಟು ಹೆಚ್ಚಿದೆ ಎಂದೂ ಈ ವರದಿ ತಿಳಿಸಿದೆ.
ಭಾರತದಲ್ಲಿ ಇಂದು 27 ಕೋಟಿಗೂ ಅಧಿಕ ಮಂದಿ ಹಸಿವಿನಿಂದ ಬಳಲುತ್ತಿದ್ದು, ಈ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲು 50 ವರ್ಷಗಳಾದರೂ ಬೇಕು ಎಂದು ಈ ವರದಿ ಹೇಳಿದೆ.