ಕಣಿವೆ ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರಕ್ಕೆ ಮೂವರ ಬಲಿ
ಶ್ರೀನಗರ, ಭಾನುವಾರ, 19 ಸೆಪ್ಟೆಂಬರ್ 2010( 08:55 IST )
ಕಾಶ್ಮೀರ ಕಣಿವೆ ರಾಜ್ಯದಲ್ಲಿ ನೂತನವಾಗಿ ಹುಟ್ಟಿಕೊಂಡಿರುವ ಹಿಂಸಾಚಾರದಲ್ಲಿ ಮತ್ತೆ ಮೂವರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಆ ಮೂಲಕ ಹಿಂಸಾಚಾರಕ್ಕೆ ಒಟ್ಟು ಬಲಿಯಾದವರ ಸಂಖ್ಯೆ 103ಕ್ಕೇರಿದೆ. ಇದರಲ್ಲಿ ಮೂವರು ಮೇಧರ್ ಪ್ರದೇಶದ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ.
ಶನಿವಾರವು ಕೂಡಾ ಬಹುತೇಕ ಎಲ್ಲಾ ವ್ಯಾಪಾರ ಸಂಸ್ಥೆಗಳು ಮುಚ್ಚಿಕೊಂಡಿತ್ತು. ಸಣ್ಣ ಸಣ್ಣ ಅಂಗಡಿ ಮುಗ್ಗಟ್ಟುಗಳು, ಮೆಡಿಕಲ್‌ನಲ್ಲಿ ಭಾರೀ ನೂಕುನುಗ್ಗಲು ಕಂಡುಬಂದಿತ್ತು. ಹಳೆಯ ನಗರದಲ್ಲಿ ಕರ್ಫ್ಯೂ ಸಡಿಲಿಕೆಯಿಂದಾಗಿ ಕೆಲವೊಂದು ಅಂಗಡಿಗಳು ಕಾರ್ಯಚರಿಸಿದ್ದವು.
ಉದ್ರಿಕ್ತ ಪ್ರದೇಶದಲ್ಲಿ ಯುವಕರ ಗುಂಪೊಂದು ಭದ್ರತಾ ಪಡೆಗಳತ್ತ ಕಲ್ಲೆಸೆತ ನಡೆಸುತ್ತಿದ್ದದ್ದು ಕಂಡುಬಂದಿತ್ತು. ಇದನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪಟ್ಟಾನ್ ಪಟ್ಟಣದಲ್ಲಿ ಇಬ್ಬರು ಹಾಗೂ ಅನಂತ್‌ನಾಗ್ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಸಾವೀಗೀಡಾಗಿದ್ದಾನೆ.
ಮೂಗು ತೂರಿಸುತ್ತಿರುವ ಪಾಕ್... ಕಾಶ್ಮೀರ ವಿಷಯದಲ್ಲಿ ತಮ್ಮ ತೀವ್ರ ಕಳವನ್ನು ವ್ಯಕ್ತಪಡಿಸಿರುವ ಪಾಕ್ ವಿದೇಶಾಂಗ ಸಚಿವ ಷಾ ಮಹಮೂದ್, ಭಾರತವು ಇಸ್ಲಾಮಾಬಾದನ್ನು ದೂಷಿಸುವುದನ್ನು ಬಿಟ್ಟು ಸ್ವತ: ಆತ್ಮಶೋಧನೆ ಮಾಡಬೇಕೆಂದು ಸಲಹೆ ನೀಡಿದೆ.