ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇರಳ, ದೆಹಲಿನಲ್ಲಿ ಹುಟ್ಟಿದ ಮಕ್ಕಳು ದೀರ್ಘಾಯುಷಿಗಳು (Kerala | Delhi | Union health ministry | life expectancy at birth)
Bookmark and Share Feedback Print
 
ಜೀವಿತಾವಧಿಯನ್ನು ಪರಿಗಣಸಿದಾಗ ಕೇರಳದಲ್ಲಿ ಜನಿಸುವ ಮಕ್ಕಳು ಇತರೆಡೆಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಹಾಗಾಗಿ ಭಾರತದಲ್ಲಿ ಹುಟ್ಟುವುದಾದರೆ ಕೇರಳದಲ್ಲಿ ಹುಟ್ಟಬೇಕು. ಯಾಕೆಂದರೆ ಇಲ್ಲಿನ ಜೀವಿತಾವಧಿ ಅಧಿಕವಾಗಿದೆ ಎಂದು ವರದಿ ಬಹಿರಂಗಪಡಿಸಿದೆ.

ವರದಿಗಳ ಪ್ರಕಾರ ಕೇರಳದ ನಂತರದ ಸ್ಥಾನವನ್ನು ದೆಹಲಿ ಪಡೆದಿದೆ. 2021ರ ವೇಳೆಗೆ ಬಾರತೀಯನೋರ್ವನು ಈಗಿನ ಆಯುಷ್ಯಕ್ಕಿಂತ ನಾಲ್ಕು ವರ್ಷ ಅಧಿಕ ಬಕುಲಿದ್ದಾನೆ. ಆದರೆ ಕೇರಳಿಗನು ಸಾಮಾನ್ಯ ಭಾರತೀಯರಿಗಿಂತ 6 ವರ್ಷ ಹೆಚ್ಚು ಬದುಕಲಿದ್ದಾನೆ ಎಂದು ತಿಳಿಸಿದೆ.

2021ರ ಅವಧಿಯಲ್ಲಿ ಕೇರಳದಲ್ಲಿ ಜನಿಸುವ ಗಂಡುಮಗು 75.2 ವರ್ಷ ಮತ್ತು ಹೆಣ್ಣು ಮಗು 78.6 ವರ್ಷ ಬದುಕುವುದೆಂದು ಅಂದಾಜಿಸಲಾಗಿದೆ.
ನಿರೀಕ್ಷಿತ ಜೀವಿತಾವಧಿ ಹೊಂದಿರುವ ರಾಜ್ಯಗಳ ಪೈಕಿ ಕೇರಳದ ನಂತರದ ಸ್ಥಾನವನ್ನು ದಿಲ್ಲಿ ಪಡೆದಿದೆ. ದಿಲ್ಲಿಯಲ್ಲಿ ಜನಿಸುವ ಗಂಡು ಮಗು 73.5 ಹೆಣ್ಣು ಮಗುವಿನ ಜೀವತಾವಧಿ 77.4 ವರ್ಷಗಳಾಗಿರುತ್ತವೆ ಎಂದು ವರದಿ ಹೇಳಿದೆ.

ಆದರೂ ಪುರುಷರನ್ನು ಹೋಲಿಸಿದಾಗ ಮಹಿಳೆಯರ ಜೀವಿತಾವಧಿ ಹೆಚ್ಚಾಗಿದೆ ಎಂದು ವರದಿಯು ಬಹಿರಂಗಪಡಿಸಿದೆ. 2021ರ ವೇಳೆಗೆ ಬಹುತೇಕ ಎಲ್ಲಾ ರಾಜ್ಯಗಳ ಮಹಿಳೆಯರ ಸರಾಸರಿ ಆಯಷ್ಯ 70 ವರ್ಷ ದಾಟಲಿದೆ. ಆದರೆ ಪುರುಷರ ಜೀವಿತಾವಧಿ 70ಕ್ಕಿಂತಲೂ ಕೆಳಗಿರುವುದೆಂದು ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೇರಳ, ದೆಹಲಿ, ಸಮೀಕ್ಷೆ, ಮಕ್ಕಳು