ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮ.ಪ್ರದೇಶದಲ್ಲಿ ರೈಲುಗಳ ಪರಸ್ಪರ ಡಿಕ್ಕಿ; 11 ಮಂದಿ ಬಲಿ (train collision | train accident | intercity train | Madhya Pradesh)
Bookmark and Share Feedback Print
 
ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಬಾದ್ರಾವಾಸ್ ಎಂಬಲ್ಲಿ ಎರಡು ರೈಲುಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 11 ಮಂದಿ ಸಾವೀಗೀಡಾಗಿದ್ದು, 50 ಮಂದಿ ಗಾಯಗೊಂಡಿದ್ದಾರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಗ್ವಾಲಿಯರ್ ಇಂಟರ್‌ಸಿಟಿ ಪ್ರಯಾಣಿಯರ ರೈಲುಗೆ ಹಿಂದಿನಿಂದ ಬಂದ ಗೂಡ್ಸ್ ಟ್ರೈನ್ ರಭಸದಿಂದ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ವರ್ಗದವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಪ್ರಯಾಣಿಕರ ರೈಲಿನ ಕೊನೆಯ ಮೂರು ಬೋಗಿಗಳಿಂದ ಆರು ಮೃತದೇಹಗಳನ್ನು ಇದೀಗಲೇ ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ಶಿವಪುರಿ ಜಿಲ್ಲೆಯ ಮೆಜಿಸ್ಟ್ರೇಟ್ ರಾಜಕುಮಾರ್ ಪಠಾಕ್ ತಿಳಿಸಿದ್ದಾರೆ.

ಬೆಳಗ್ಗಿನ ಜಾವ 5ಕ್ಕೆ ಗಂಟೆಗೆ ಘಟನೆ ನಡೆದಿದೆ. ಇಂಧೋರ್‌ನಿಂದ ಗ್ವಾಲಿಯರ್‌ಗೆ ತೆರಳುತ್ತಿದ್ದ ರೈಲು ಸ್ಟೇಷನ್‌ನಲ್ಲಿ ನಿಂತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ.

ಪ್ರದೇಶದಲ್ಲಿ ಬಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ಅಲ್ಲದೆ ಸಮೀಪದ ಆಸ್ಪತ್ರೆಯೂ 55 ಕಿ.ಮೀ ದೂರವಿರುವುದರಿಂದ ಗಾಯಾಳುಗಳನ್ನು ಅಲ್ಲಿಗೆ ತಲುಪಿಸಲು ಹರಸಾಹಸ ಪಡುವಂತಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸಹಾಯವಾಣಿ ಸಂಖ್ಯೆಗಳ

ಬಾದಾರ್ವಾಸ್: 07495245233/9752417560

ಗುನಾ: 07542253799/07542254778

ಶಿವಪುರಿ: 07492234407/9752417562
ಸಂಬಂಧಿತ ಮಾಹಿತಿ ಹುಡುಕಿ