ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರದ ಭವಿಷ್ಯ ಭಾರತದಲ್ಲಿ ಭದ್ರವಾಗಿದೆ: ಚಿದಂಬರಂ (India | Jammu and Kashmir | P Chidambaram | Mehbooba Mufti)
Bookmark and Share Feedback Print
 
ನಾವಿಲ್ಲಿ ಬಂದಿರುವುದು ನಿಮ್ಮ ಅಭಿಪ್ರಾಯಗಳನ್ನು ಪಡೆದುಕೊಳ್ಳಲು. ನಾವು ಏನು ಮಾಡಬೇಕು ಎಂಬ ನಿಮ್ಮ ಮಾತುಗಳನ್ನು ನಾವು ತಾಳ್ಮೆಯಿಂದ ಕೇಳುತ್ತೇವೆ ಎಂದು ಹೇಳಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ನಿಮ್ಮ ಗೌರವ, ಪ್ರತಿಷ್ಠೆ ಮತ್ತು ಭವಿಷ್ಯವು ಭಾರತದ ಭಾಗವಾಗಿರುತ್ತದೆ ಎಂಬ ಭರವಸೆ ಮತ್ತು ವಿಶ್ವಾಸ ನಮ್ಮದು ಎಂದಿದ್ದಾರೆ.

ಎರಡು ದಶಕಗಳ ನಂತರ ಕಾಶ್ಮೀರಕ್ಕೆ ತೆರಳಿರುವ ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಿರುವ ಚಿದಂಬರಂ, ಕಣಿವೆಯಲ್ಲಿನ ಪರಿಸ್ಥಿತಿಯನ್ನು ನಿವಾರಿಸಿ ಶಾಂತಿ ನೆಲೆಸುವ ತಮ್ಮ ಪ್ರಯತ್ನ ಯಶಸ್ವಿಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ನಿಯೋಗವು ಮಾಡುವ ಶಿಫಾರಸುಗಳನ್ನು ಕಾಶ್ಮೀರದ ರಕ್ಷಣೆಗಾಗಿನ ಸಂಪುಟ ಸಮಿತಿಯು ಇದೇ ವಾರಾಂತ್ಯದಲ್ಲಿ ಗಣನೆಗೆ ತೆಗೆದುಕೊಳ್ಳಲಿದೆ.

42 ಸದಸ್ಯರ ತಂಡ ಈಗಾಗಲೇ ಕಾಶ್ಮೀರ ತಲುಪಿದ್ದು, ಎರಡು ದಿನಗಳ ಕಾಲ ವಾಸ್ತವ ಸ್ಥಿತಿಯನ್ನು ಪರಿಶೀಲನೆ ನಡೆಸಲಿದೆ. ಈ ಸಂದರ್ಭದಲ್ಲಿ ಸ್ಥಳೀಯ ಜನತೆ, ಸಂಘಟನೆಗಳು ಮತ್ತು ಪಕ್ಷಗಳ ಪ್ರತಿನಿಧಿಗಳನ್ನು ಭೇಟಿ ಮಾಡಲಿದೆ. ಶ್ರೀನಗರದಲ್ಲಿ ನಿಯೋಗವನ್ನು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸ್ವಾಗತಿಸಿದ್ದಾರೆ.

ಕಾಶ್ಮೀರಿಗಳ ಘನತೆ, ಪ್ರತಿಷ್ಠೆ ಮತ್ತು ಭವಿಷ್ಯ ಭಾರತದ ಭಾಗವಾಗಿ ಸುಭದ್ರವಾಗಿರುತ್ತದೆ ಎಂಬುದು ನಮ್ಮ ಭರವಸೆ ಮತ್ತು ವಿಶ್ವಾಸ. ನಮ್ಮ ನಿಯೋಗವು ನಿಗದಿಯಾಗಿರುವ ಸಮಯದಲ್ಲಿ ತನ್ನ ಕಾರ್ಯವನ್ನು ಮುಗಿಸಬೇಕಿದೆ. ದಯವಿಟ್ಟು ಸಂಬಂಧಪಟ್ಟವರು ನಮ್ಮ ಮುಂದೆ ಬಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ನಡುವೆ ಪ್ರಸಕ್ತ ಗೃಹಬಂಧನದಲ್ಲಿರುವ ಪ್ರತ್ಯೇಕತಾವಾದಿ ನಾಯಕರಾದ ಮಿರವಾಯಿಜ್ ಉಮರ್ ಫಾರೂಕ್ ಮತ್ತು ಎಸ್ಎಎಸ್ ಗಿಲಾನಿ ಸರ್ವಪಕ್ಷದ ಸಭೆಯಿಂದ ಹೊರಗುಳಿಯುತ್ತೇವೆ ಎಂದು ಪ್ರಕಟಿಸಿದ್ದಾರೆ.

ಅತ್ತ ಪ್ರಮುಖ ಪ್ರತಿಪಕ್ಷ ಪಿಡಿಪಿಯ ನಾಯಕಿ ತಾನು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ತನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಲವಾರ್ ಮೀರ್ ನೇತೃತ್ವದ 15 ಸದಸ್ಯರ ನಿಯೋಗವನ್ನು ಸಭೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ