ದಿಲ್ಲಿ, ಉತ್ತರಾಖಂಡ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದರ ಹಿನ್ನೆಲೆಯಲ್ಲಿ ಹಲೆವೆಡೆ ಪ್ರವಾಹದ ಭೀತಿ ಸೃಷ್ಟಯಾಗಿದೆ.
ಯಮುನಾ ನದಿ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಅಪಾಯದ ಮಟ್ಟವನ್ನು ಸಮೀಪಿಸಿದೆ ಎಂದು ಮೂಲಗಳು ತಿಳಿಸಿವೆ. ಯಮುನಾ ಅಪಾಯದ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ನದಿ ತೀರ ಪ್ರದೇಶದಲ್ಲಿ ವಾಸಿಸುವ ಜನರು ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ದೆಹಲಿ ಸರ್ಕಾರ ಸೂಚನೆ ನೀಡಿದೆ.
ಉತ್ತರಾಖಂಡದಲ್ಲಿನ ಮಳೆಗೆ ಇದೀಗಲೇ 63 ಮಂದಿ ಬಲಿಯಾಗಿದ್ದಾರೆಂದು ಅದಿಕೃತ ವರದಿಗಳು ತಿಳಿಸಿವೆ. ಹಾಗೆಯೇ ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ ಮ್ತತು ಉತ್ತರ ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ ಎಂದು ವರದಿಗಳು ಹೇಳಿವೆ.
ಬಿಹಾರದಲ್ಲಿ ಕೋಸಿ ಮತ್ತು ಹರಿಯಾಣದಲ್ಲಿ ಗಂಗಾ ನದಿ ತಮ್ಮ ರೌದ್ರಾವತಾರ ಮುಂದಿವರಿಸಿದೆ. ಹಲವೆಡೆ ಸಂಚಾರ ವ್ಯವಸ್ಥೆ ಪೂರ್ಣವಾಗಿ ಅಸ್ತವಸ್ತವಾಗಿದೆ. ಅದೇ ವೇಳೆ ಉತ್ತರ ಭಾರತದಲ್ಲಿ ದಾಖಲೆಯ ಮಳೆಯಾಗುತ್ತಿದೆ ಎಂದು ಹವಮಾನ ಇಲಾಖೆ ತಿಳಿಸಿವೆ.