ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪು- ಶಾಂತಿ ಕಾಪಾಡಿ: ಮೋದಿ, ಚಿದಂಬರಂ (Ayodhya verdict | Gujarat | Narendra Modi | P Chidambaram)
Bookmark and Share Feedback Print
 
ಅಯೋಧ್ಯೆ ತೀರ್ಪು ಯಾರ ಪರವಾಗಿ ಬಂದರೂ ಸಂಭ್ರಮಿಸುವ ಅಥವಾ ಗಲಭೆಯೆಬ್ಬಿಸುವ ಅತಿರೇಕಗಳಿಗೆ ಜನತೆ ಮುಂದಾಗಬಾರದು ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಸೇರಿದಂತೆ ಹಲವು ನಾಯಕರು ಮನವಿ ಮಾಡಿಕೊಂಡಿದ್ದಾರೆ.

ಸುದೀರ್ಘಾವಧಿಯಿಂದ ನಡೆಯುತ್ತಿರುವ ಅಯೋಧ್ಯೆಯ ಒಡೆತನದ ಬಗೆಗಿನ ಕಾನೂನು ಹೋರಾಟದ ತೀರ್ಪಿನ ಬಗ್ಗೆ ಭಾವೋದ್ವೇಗವಿರುವುದು ಹೌದು, ಆದರೆ ಯಾರೊಬ್ಬರೂ ಆತುರದ ಕೋಪವನ್ನು ಪ್ರದರ್ಶಿಸಲು ಮುಂದಾಗುವುದು ಸರಿಯಲ್ಲ ಎಂದು ಶುಕ್ರವಾರದ ತೀರ್ಪಿಗಿಂತ ಮೊದಲು ಪ್ರತಿಕ್ರಿಯೆ ನೀಡಿರುವ ಮೋದಿ ತಿಳಿಸಿದ್ದಾರೆ.

ರಾಷ್ಟ್ರ ವಿರೋಧಿಗಳು ನಮ್ಮಲ್ಲಿನ ಸಾಮಾಜಿಕ ಚೌಕಟನ್ನು ಭಂಗ ಮಾಡುವ ಅವಕಾಶಗಳಿಗಾಗಿ ಹುಡುಕುತ್ತಿರುತ್ತಾರೆ. ಅಂತವರಿಗೆ ಯಶಸ್ಸು ಸಿಗಲು ನಾವು ಅವಕಾಶ ಮಾಡಿಕೊಡಬಾರದು ಎಂದು ಮೋದಿ ಕರೆ ನೀಡಿದ್ದಾರೆ.

ಆತುರದ ನಿರ್ಧಾರ ಬೇಡ: ಚಿದಂಬರಂ
ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಸೂಕ್ತ ಭದ್ರತೆಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಬೇಕು ಎಂದು ಸೂಚಿಸಿರುವ ಚಿದಂಬರಂ, ಜನತೆ ಶಾಂತ ರೀತಿಯಿಂದ ತೀರ್ಪನ್ನು ಸ್ವೀಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.

ನಾಲ್ಕು ದಾವೆಗಳ ಬಗ್ಗೆ ನ್ಯಾಯಾಧೀಶರು ನೀಡುವ ತೀರ್ಪಿನ ಕುರಿತು ನಾವು ಗೆದ್ದೆವು ಅಥವಾ ಎದುರಾಳಿ ಸೋತರು ಎಂಬ ರೀತಿಯ ಯಾವುದೇ ಆತುರದ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಯಾವುದೇ ವಾದಿ ಅಥವಾ ಉಭಯರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಸಚಿವರು ತಿಳಿ ಹೇಳಿದ್ದಾರೆ.

ಹಿಂಸಾಚಾರ ಬೇಡ: ಕರುಣಾನಿಧಿ
ಈ ಹಿಂದೆ ರಾಮ ಯಾವ ಕಾಲೇಜಿನಲ್ಲಿ ಓದಿದವನು ಎಂದು ಪ್ರಶ್ನಿಸಿದ್ದ ನಾಸ್ತಿಕ ಮುಖ್ಯಮಂತ್ರಿ ಕರುಣಾನಿಧಿ, ಅಯೋಧ್ಯೆ ತೀರ್ಪಿನ ನಂತರ ಜನತೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಮನವಿ ಮಾಡಿರುವಂತೆ ನಾನು ಕೂಡ ಜನತೆಯಲ್ಲಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ತೀರ್ಪು ಯಾವುದೇ ಆಗಿದ್ದರೂ ಭಾರತೀಯರು ಹಿಂಸಾಚಾರಕ್ಕೆ ಮುಂದಾಗಬಾರದು. ನಮ್ಮ ದೇಶವು ಹೆಮ್ಮೆಯಿಂದ ತಲೆಯೆತ್ತುವಂತೆ ನಾವು ಮಾಡಬೇಕು ಎಂದು ತನ್ನ ಹೇಳಿಕೆಯಲ್ಲಿ ಡಿಎಂಕೆ ಮುಖ್ಯಸ್ಥ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ