ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೆರೆ ಪರಿಹಾರಕ್ಕೆ 2,000 ಕೋಟಿ ಕೊಡಿ: ಕೇಂದ್ರಕ್ಕೆ ಮಾಯಾ (Mayawati | flood relief | Uttar Pradesh | Bundelkhand)
Bookmark and Share Feedback Print
 
ತನ್ನ ರಾಜ್ಯದ ವಿಚಾರ ಬಂದಾಗ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರನ್ನು ಹೊರತುಪಡಿಸಿ ಗಟ್ಟಿದನಿಯಿಂದ ಕೇಂದ್ರವನ್ನು ಗದರಿಸುವ ತಾಕತ್ತನ್ನು ಹೊಂದಿರುವ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿಯವರು ಮುಂದಿಟ್ಟಿರುವ ಬೇಡಿಕೆಯಿದು.

ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರವು 2,000 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿನ ನೆರೆ ಪರಿಹಾರ ಕಾರ್ಯಾಚರಣೆಗಳಿಗಾಗಿ 2,000 ಕೋಟಿಯ ಅಗತ್ಯ ನಮಗಿದೆ. ಆ 2,000 ಕೋಟಿ ರೂಪಾಯಿಗಳಲ್ಲಿ 1,000 ಕೋಟಿ ಬಂದೇಲ್‌ಖಂಡ್ ಮತ್ತು ಪೂರ್ವಾಂಚಲಗಳಿಗೆ ಬೇಕಾಗುತ್ತದೆ. ಉಳಿದ ಹಣವನ್ನು ಉತ್ತರ ಪ್ರದೇಶದ ಪಶ್ಚಿಮ ಭಾಗಕ್ಕೆ ವ್ಯಯಿಸಲಾಗುತ್ತದೆ ಎಂದು ನೆರೆಯಿಂದ ಆವೃತ್ತವಾಗಿರುವ ಹಳ್ಳಿಗಳನ್ನು ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಮಾತನಾಡುತ್ತಾ ಮಾಯಾವತಿ ತಿಳಿಸಿದರು.

ನಮಗೀಗ ತಕ್ಷಣವೇ 225 ಕೋಟಿ ರೂಪಾಯಿಗಳು ಬೇಕು. ಕೇಂದ್ರ ಸರಕಾರವು ಹಣ ನೀಡದೇ ಇದ್ದರೆ ರಾಜ್ಯ ಸರಕಾರವು ತನ್ನದೇ ಸಂಪನ್ಮೂಲಗಳನ್ನು ಬಳಸಿಕೊಂಡು ನಿಧಿ ಸಂಗ್ರಹಿಸುತ್ತದೆ ಎಂದೂ ಹೇಳಿದ್ದಾರೆ.

ಮಾಯಾವತಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೃಪಾಳುಜೀ ಮಹಾರಾಜ್ ಆಶ್ರಮದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ನೀಡಲು ರಾಜ್ಯ ಸರ್ಕಾರದ ಬಳಿ ದುಡ್ಡೇ ಇಲ್ಲ ಎಂದು ಅವರು ಹೇಳಿಕೊಂಡಿದ್ದರು.

ಆದರೆ ಕೇಂದ್ರ ಸರಕಾರವು ತನ್ನ ವಿಕೋಪ ಪರಿಹಾರ ನಿಧಿಯಿಂದ ಇಂತಹ ಘಟನೆಗಳಿಗೆ ಹಣ ನೀಡುವುದಿಲ್ಲ ಎಂದು ಹೇಳಿದಾಗ ಬಿಎಸ್‌ಪಿ ನಾಯಕಿ ಕಿಡಿ ಕಾರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ