ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಂತ್ರಿಕ ದೋಷ; ಭಾರತದ ಪೃಥ್ವಿ-II ಕ್ಷಿಪಣಿ ಪರೀಕ್ಷೆ ವಿಫಲ (Prithvi-II | Orissa | ballistic missile | Integrated Test Range)
Bookmark and Share Feedback Print
 
ದಿನದಿಂದ ದಿನಕ್ಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಇತರ ದೇಶಗಳೇ ತಿರುಗಿ ನೋಡುವಂತೆ ಮಾಡುತ್ತಿರುವ ಭಾರತವು ಶುಕ್ರವಾರ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಸ್ವದೇಶಿ ನಿರ್ಮಿತ ಪೃಥ್ವಿ-II ಕ್ಷಿಪಣಿಯ ಪರೀಕ್ಷೆಯಲ್ಲಿ ಎಡವಿದೆ.

ಒರಿಸ್ಸಾದ ಕಡಲ ತೀರ ಚಾಂದಿಪುರದಲ್ಲಿನ ಸಮಗ್ರ ಪರೀಕ್ಷಾ ವಲಯದಿಂದ ನಡೆಸಲಾದ ಬಳಕೆಗಾಗಿನ ಪ್ರಾಯೋಗಿಕ ಪರೀಕ್ಷೆಯು ತಾಂತ್ರಿಕ ಕಾರಣಗಳಿಂದ ವಿಫಲವಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.

ಕೆಲವೊಂದು ತಾಂತ್ರಿಕ ದೋಷಗಳಿಂದಾಗಿ ಮೊಬೈಲ್ ಲಾಂಚರ್ ಕಾಂಪ್ಲೆಕ್ಸ್-IIIರಿಂದ ಕ್ಷಿಪಣಿಯು ಯೋಜನೆಯಂತೆ ಚಿಮ್ಮಲು ವಿಫಲವಾಗಿದೆ ಎಂದು ರಕ್ಷಣಾ ಮೂಲಗಳು ಹೇಳಿವೆಯಾದರೂ, ಕ್ಷಿಪಣಿ ಪರೀಕ್ಷಕರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಸಮಗ್ರ ಪ್ರಾಯೋಗಿಕ ವಲಯದಲ್ಲಿನ ಲಾಂಚರ್ ಅಥವಾ ಒಳ ವ್ಯವಸ್ಥೆ ಅಥವಾ ಪ್ರಮುಖ ಕ್ಷಿಪಣಿಯಲ್ಲಿನ ತೊಂದರೆಯಿಂದಾಗಿ ಪೃಥ್ವಿ-II ಕ್ಷಿಪಣಿಯು ಯೋಜನೆಯಂತೆ ಚಿಮ್ಮಲಿಲ್ಲ ಎಂದು ಸಶಸ್ತ್ರ ಪಡೆಗಳು ತಮ್ಮ ಉಪಯೋಗಕ್ಕಾಗಿ ನಡೆಸುತ್ತಿರುವ ಪ್ರಯೋಗದ ಭಾಗವಾಗಿ ನಡೆಸಿದ ಪರೀಕ್ಷೆಯು ವಿಫಲವಾದ ನಂತರ ಪ್ರತಿಕ್ರಿಯಿಸಿವೆ.

ಶುಕ್ರವಾರ ನಡೆಸಲಾದ ಪರೀಕ್ಷೆಯ ಸಂದರ್ಭದಲ್ಲಿ ಲಾಂಚರ್‌ನಿಂದ ಕ್ಷಿಪಣಿ ಚಿಮ್ಮುವ ಬದಲು ಸ್ಥಳದಲ್ಲಿ ಭಾರೀ ಪ್ರಮಾಣದ ಹೊಗೆ ಮತ್ತು ಶಬ್ಧ ಕೇಳಿ ಬಂದಿದೆ. ಉಡಾವಣೆ ವೈಫಲ್ಯದ ಹಿಂದಿನ ಕಾರಣಗಳೇನು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದೇ ಪರೀಕ್ಷಾ ಕೇಂದ್ರದಲ್ಲಿ ಈ ಹಿಂದೆ ನಾಲ್ಕು ಬಾರಿ ಇದೇ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಅದೂ ಒಂದು ವರ್ಷದೊಳಗೆ. ಆದರೆ ಐದನೇ ಪರೀಕ್ಷೆಯು ವಿಫಲವಾಗಿದೆ.

ಕೊನೆಯ ಪ್ರಾಯೋಗಿಕ ಪರೀಕ್ಷೆ ನಡೆಸಿರುವುದು ಜೂನ್ 18ರಂದು. ಈಗಾಗಲೇ ಸೇನೆಗೆ ಸೇರಿಸಲ್ಪಟ್ಟಿರುವ ಕ್ಷಿಪಣಿಯನ್ನು ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ತರಲಾಗಿರುವ 'ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್' ಎಂಬ ದಳವು ಪರೀಕ್ಷೆ ನಡೆಸುತ್ತಿದೆ.

350 ಕಿಲೋ ಮೀಟರ್ ಗರಿಷ್ಠ ದೂರ ಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ ಸುಮಾರು 500 ಕೆ.ಜಿ. ಭಾರವನ್ನು ಹೊತ್ತು 483 ಸೆಕುಂಡುಗಳಲ್ಲಿ 43.5 ಕಿಲೋ ಮೀಟರ್ ಎತ್ತರಕ್ಕೆ ಚಿಮ್ಮುವ ಶಕ್ತಿಯನ್ನೂ ಹೊಂದಿದೆ. ಅಲ್ಲದೆ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವೂ ಈ ಕ್ಷಿಪಣಿಗಿದೆ.
ಸಂಬಂಧಿತ ಮಾಹಿತಿ ಹುಡುಕಿ