ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಪಾನಿ ಜೋಡಿಗೆ ಬೋಧ ಗಯಾದಲ್ಲಿ ಹಿಂದೂ ಶೈಲಿ ವಿವಾಹ (Japanese couple | Hindu | Bodh Gaya | Massako Kawada)
Bookmark and Share Feedback Print
 
ಜಗತ್ತಿಗೆ ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ರವಾನಿಸುವ ನಿಟ್ಟಿನಲ್ಲಿ ಬುದ್ಧನಿಗೆ ಜ್ಞಾನೋದಯವಾದ ಬಿಹಾರದ ಬೋಧ ಗಯಾ ಎಂಬ ಬೌದ್ಧರ ಪವಿತ್ರ ನಗರದಲ್ಲಿ ಜಪಾನ್ ಜೋಡಿಯೊಂದು ಹಿಂದೂ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಪ್ರವೇಶಿಸಿದೆ.

ಅಸ್ತಿತ್ವದಲ್ಲಿರುವ ಪುರಾತನ ಮತ್ತು ಶಾಂತಿಯನ್ನೇ ಉಸಿರಾಡಿ ಸನಾತನ ಧರ್ಮ ಎಂಬ ಖ್ಯಾತಿ ಪಡೆದಿರುವ ಹಿಂದೂ ಧರ್ಮದತ್ತ ಒಲವು ತೋರಿಸುತ್ತಿರುವವರ ಸಾಲಿಗೆ ಇತ್ತೀಚಿನ ಸೇರ್ಪಡೆ ಈ ಜಪಾನಿ ಜೋಡಿ.
PTI

ವಿಶ್ವಕ್ಕೆ ಪ್ರೀತಿ, ಶಾಂತಿ ಮತ್ತು ಸಾಮರಸ್ಯವನ್ನು ರವಾನಿಸುವ ನಿಟ್ಟಿನಲ್ಲಿ ನಾವು ಟೋಕಿಯೋದಿಂದ ಬೋಧ ಗಯಾಕ್ಕೆ ಬಂದು ವಿವಾಹವಾದೆವು ಎಂದು ದಂಪತಿ ಹೇಳಿಕೊಂಡಿದ್ದಾರೆ.

31ರ ಹರೆಯದ ವಧು ಮಸಾಕೋ ಕವಾಡಾ ಕೆಂಪು ಸೀರೆಟನ್ನುಟ್ಟಿದ್ದರೆ, ವರ ಕಜೆನೊರಿ ಅರಾಕಿಯವರು ಸಾಂಪ್ರದಾಯಿಕ ದಿರಿಸಿನಲ್ಲಿದ್ದರು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಕ್ತರೆದುರು ಅವರಿಬ್ಬರೂ ಬೋಧ ಗಯಾದಲ್ಲಿನ ದೇವಳವೊಂದರಲ್ಲಿ ಮದುವೆಯಾದರು.

ವಧು ಮತ್ತು ವರ ಸಪ್ತಪದಿ ತುಳಿಯುವ ಮೂಲಕ ಮತ್ತು ವಧುವಿನ ಹಣೆಗೆ ವರ ಕುಂಕುಮದ ಬೊಟ್ಟು ಇಡುವುದರೊಂದಿಗೆ ಅವರಿಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ನೆರವೇರಿದೆ ಎಂದು ಈ ವಿವಾಹವನ್ನು ನೆರವೇರಿಸಿದ ಇಲ್ಲಿನ ಪುರೋಹಿತ ಶ್ರೀಕಾಂತ್ ಪಾಂಡೆ ಎಂಬವರು ತಿಳಿಸಿದ್ದಾರೆ.

ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ವಧು-ವರರ ಹತ್ತಿರದ ಸಂಬಂಧಿಕರು, ಕೆಲ ಪ್ರವಾಸಿಗರು ಮತ್ತು ಸ್ಥಳೀಯರು ಭಾಗವಹಿಸಿದ್ದರು.

ಹಿಂದೂ ಶೈಲಿಯಲ್ಲಿ ವಿದೇಶೀಯರು ಮದುವೆಯಾಗಿರುವುದರಿಂದ ಸಂತಸಗೊಂಡ ಸ್ಥಳೀಯರು ಈ ಸಂದರ್ಭದಲ್ಲಿ ಹಾಡುತ್ತಾ, ನರ್ತಿಸಿ ನೂತನ ದಂಪತಿಗೆ ಶುಭ ಹಾರೈಸಿದರು ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ