ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೃತಕ ಗರ್ಭಧಾರಣೆ; 51ರ ದೆಹಲಿ ಮಹಿಳೆ ಗೆ ಅವಳಿ ಮಕ್ಕಳು (Delhi woman delivers twins | New Delhi | Anita Mathur | IVF)
Bookmark and Share Feedback Print
 
ದೆಹಲಿಯ 51ರ ಹರೆಯದ ಮಧ್ಯವಯಸ್ಕ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮದುವೆಯಾಗಿ 23 ವರ್ಷ ಕಳೆದಿದ್ದರೂ ಮಕ್ಕಳಾಗದೇ ಇದ್ದಾಗ ದಂಪತಿ ಕೃತಕ ಗರ್ಭಧಾರಣೆಗೆ ಮೊರೆ ಹೋಗಿದ್ದರು.

ಅನಿತಾ ಮಾಥುರ್ ಎಂಬವರೇ ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿರುವವರು. ರಾಜಧಾನಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ಅವಿರತ ಶ್ರಮದಿಂದ ಕೃತಕ ಗರ್ಭಧಾರಣೆಯ ಐವಿಎಫ್ ವಿಧಾನದ ಮೂಲಕ ಅನಿತಾ ಗರ್ಭವತಿಯಾಗಿದ್ದರು.
PR

ಮದುವೆಯಾಗಿ 23 ವರ್ಷಗಳೇ ಆಗಿದ್ದರೂ ಅನಿತಾ ಗರ್ಭಿಣಿಯಾಗಿರಲಿಲ್ಲ. ವಯಸ್ಸು ಹೆಚ್ಚಾಗಿದ್ದರಿಂದ ಅವರಲ್ಲಿ ಅಂಡಾಣು ಉತ್ಪಾದನೆ ಸಾಧ್ಯವಿರಲಿಲ್ಲ. ಹಾಗಾಗಿ ನಾವು ಕೃತಕ ಗರ್ಭಧಾರಣೆಯ ಮೂಲಕ ಅವರು ಗರ್ಭಿಣಿಯಾಗುವಂತೆ ಮಾಡಿದ್ದೆವು ಎಂದು ವೈದ್ಯೆ ಮನಿಕಾ ಖನ್ನಾ ವಿವರಣೆ ನೀಡಿದ್ದಾರೆ.

ಮಹಿಳೆಯೊಬ್ಬಳಿಗೆ ವಯಸ್ಸು 42 ದಾಟಿದ ನಂತರ ಐವಿಎಫ್ ವಿಧಾನವು ಯಶಸ್ವಿಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೆ ಹಾರ್ಮೋನ್ ವ್ಯವಸ್ಥೆಯು ಕೂಡ ಅನಿತಾರವರ ಪ್ರಕರಣದಲ್ಲಿ ವ್ಯತಿರಿಕ್ತವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಐವಿಎಫ್ ವಿಧಾನದಲ್ಲಿ ಅಂಡಾಣು ಮತ್ತು ವೀರ್ಯಾಣುಗಳನ್ನು ಗರ್ಭಕೋಶದ ಹೊರಗಡೆ ಫಲಪ್ರದವನ್ನಾಗಿಸಲಾಗುತ್ತದೆ. ಬಳಿಕ ಅದನ್ನು ಗರ್ಭಕೋಶಕ್ಕೆ ಪೂರಣ ಮಾಡಲಾಗುತ್ತದೆ. ಈ ಹಿಂದೆ ಎರಡು ಬಾರಿ ಇದೇ ವಿಧಾನವನ್ನು ಅನಿತಾರವರ ಮೇಲೆ ಪ್ರಯೋಗಿಸಲಾಗಿತ್ತಾದರೂ, ಯಶಸ್ವಿಯಾಗಿರಲಿಲ್ಲ.

ವಯಸ್ಸು ಹೆಚ್ಚಾದಂತೆಲ್ಲ ಮಹಿಳೆಯರು ಗರ್ಭವತಿಯರಾಗುವ ಸಾಧ್ಯತೆಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ತಡವಾಗಿ ಗರ್ಭವತಿಯಾಗುವ ನಿರ್ಧಾರ ಮತ್ತು ಧೂಮಪಾನಗಳು ಕೂಡ ಮಹಿಳೆ ಗರ್ಭವತಿಯಾಗುವುದನ್ನು ತಡೆಯುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ