ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆಗಿಂತ ಶಿಕ್ಷಣ, ಮೂಲಸೌಕರ್ಯ ಮುಖ್ಯ: ರಾಹುಲ್ (Education | infrastructure | Ayodhya verdict | Rahul Gandhi)
Bookmark and Share Feedback Print
 
ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ವಿವಾದಿತ ಅಯೋಧ್ಯೆಯ ಒಡೆತನ ತೀರ್ಪು ಅಥವಾ ವಿವಾದಕ್ಕಿಂತ ಶಿಕ್ಷಣ ಮತ್ತು ಮೂಲಸೌಕರ್ಯಗಳು ಪ್ರಮುಖ ವಿಚಾರಗಳಾಗಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಇದರ ಬೆನ್ನಿಗೆ ಹೇಳಿಕೆ ನೀಡಿರುವ ಕಾಂಗ್ರೆಸ್, ರಾಹುಲ್ ದೃಷ್ಟಿಕೋನವನ್ನು ಸಮರ್ಥಿಸಿಕೊಂಡಿದೆ.

ಅಸ್ಸಾಮ್‌ನ ಸಿಲ್ಚಾರ್‌ನಲ್ಲಿರುವ 'ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾಲಯ'ದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ಕೇಳಿ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್, ಅಯೋಧ್ಯೆ ವಿವಾದಕ್ಕಿಂತ ದೇಶದಲ್ಲಿರುವ ಹಲವಾರು ಸಮಸ್ಯೆಗಳು, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವುದು ಪ್ರಮುಖವಾಗಿದೆ ಎಂದಿದ್ದರು.

ಇಂತಹ ತೀರ್ಪುಗಳು ಮಹತ್ವದ್ದು ಎಂದು ಪರಿಗಣಿಸುವ ಜನರು ನಮ್ಮ ದೇಶದಲ್ಲಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಅವರು ಅದರ ಬಗ್ಗೆ ತಮ್ಮದೇ ಆದ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಇದಕ್ಕಿಂತ ಹೆಚ್ಚು ಮಹತ್ವವುಳ್ಳ ಮೂಲಭೂತ ಅವಶ್ಯಕತೆಗಳಾದ ಮೂಲ ಸೌಕರ್ಯಗಳು, ಯುವ ಜನತೆಗೆ ನಾವು ಒದಗಿಸುವ ಶಿಕ್ಷಣ ಕ್ರಮ, ಅವರು ಬಳಸು ತಂತ್ರಜ್ಞಾನದ ಬಗೆಗಳು ಮುಂತಾದ ವಿಚಾರಗಳಿವೆ. ಇಂತಹ ಹತ್ತು ಹಲವು ವಿಚಾರಗಳು ಪ್ರಧಾನವಾದುವುಗಳಾಗಿವೆ ಎಂದು ರಾಹುಲ್ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.

ಅದೇ ಹೊತ್ತಿಗೆ ಇದು ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಎಂಬ ಮಾತಿಗೂ ಅವರು ಅನಿವಾರ್ಯವಾಗಿ ತಲೆದೂಗಿದ್ದಾರೆ.

ತನ್ನ ಮಾತನ್ನು ಮುಂದುವರಿಸಿದ ರಾಹುಲ್, '...ದುರದೃಷ್ಟಕರವೆಂದರೆ ಪ್ರಜಾಪ್ರಭುತ್ವದಲ್ಲಿ ಜನತೆಯ ಅಭಿಪ್ರಾಯಗಳನ್ನು ಕೇಳಬೇಕಾಗುತ್ತದೆ. ಇದೇ ದೊಡ್ಡ ವಿಚಾರ ಎಂದು ಜನತೆ ಭಾವಿಸುತ್ತಾರೆ ಮತ್ತು ಇದೇ ನಮಗೆ ಮತ್ತು ಸರ್ವಾಧಿಕಾರಿಗಳಿಗೆ ಇರುವ ವ್ಯತ್ಯಾಸ. ಈ ಸಿದ್ಧಾಂತದ ಕುರಿತು ನಾನು ಅಪಾರ ಗೌರವ ಹೊಂದಿದ್ದೇನೆ' ಎಂದರು.

ರಾಹುಲ್ ಹೇಳಿಕೆಯನ್ನು ಕಾಂಗ್ರೆಸ್ ಕೂಡ ಸಮರ್ಥಿಸಿಕೊಂಡಿದೆ. ಅವರು ಅಯೋಧ್ಯೆ ವಿವಾದದ ಬಗ್ಗೆ ಸಂದರ್ಭೋಚಿತವಾಗಿ ಪ್ರತಿಕ್ರಿಯಿಸಿದ್ದಾರೆ. ದೊಡ್ಡ ಪ್ರಮಾಣದ ಯುವ ಜನತೆಯ ಅಭಿಲಾಷೆಗಳು ಅವರ ಹೇಳಿಕೆಯಲ್ಲಿ ಪ್ರತಿಫಲನಗೊಂಡಿವೆ ಎಂದು ಪಕ್ಷದ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾಗುವ ಸಂದರ್ಭದಲ್ಲೂ ಭಾರೀ ಪ್ರಮಾಣದ ಯುವ ಜನತೆ ಇದೇ ಅಭಿಪ್ರಾಯವನ್ನು ಹೊಂದಿದ್ದರು. ವಿವಾದಕ್ಕಿಂತ ಜನ ಸಾಮಾನ್ಯರ ವಿಚಾರಗಳು ಮಹತ್ವದ್ದು ಎಂದು ಜನತೆ ಭಾವಿಸಿದ್ದರು ಎಂದು ತಿವಾರಿ ಅನಿಸಿಕೆ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ