ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಬ್ರಾಹಿಂ ಪಾಕಿಸ್ತಾನಿಯಲ್ಲ, ಭಾರತೀಯ ಪ್ರಜೆ: ಕೋರ್ಟ್ (Pakistan | Indian citizen | Kerala | C Ibrahim)
Bookmark and Share Feedback Print
 
ಇಬ್ರಾಹಿಮ್‌ರನ್ನು ಇನ್ಯಾರು ಕೂಡ ಪಾಕಿಸ್ತಾನಿ ಎಂದು ಕರೆಯಲಾರರು. ಕಳೆದ ಹಲವಾರು ವರ್ಷಗಳಿಂದ ತಾನು ಭಾರತೀಯ ಎಂದು ವಾದಿಸುತ್ತಿದ್ದವರಿಗೆ ಕೇರಳದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ಕೊನೆಗೂ ನ್ಯಾಯ ಒದಗಿಸಿದೆ. ಇಬ್ರಾಹಿಂ ಈಗ ನಿರಾಳರಾಗಿದ್ದಾರೆ.

ಕೊಯಿಕ್ಕೋಡ್ ಜಿಲ್ಲೆಯ ವಾಲಿಕ್ಕಾಡ್ ಎಂಬಲ್ಲಿನ ಸಿ. ಇಬ್ರಾಹಿಂ ಎಂಬ ದುರ್ದೈವಿಯೇ ಇದೀಗ ಸುದೈವಿಯಾಗಿ ಬದಲಾಗಿರುವವರು. ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿದ್ದು, ಅವಧಿಗಿಂತ ಹೆಚ್ಚು ಕಾಲ ದೇಶದಲ್ಲಿ ತಂಗಿದ್ದ ಆರೋಪದ ಮೇಲೆ 2003ರ ಜುಲೈ 18ರಂದು ಸ್ಥಳೀಯ ಪೊಲೀಸರು ಅವರನ್ನು ಬಂಧಿಸಿದ್ದರು.

ನಂತರದ ದಿನಗಳಲ್ಲಿ ಪ್ರಕರಣ ನ್ಯಾಯಾಲಯ ತಲುಪಿತ್ತು. ಹಲವು ವರ್ಷಗಳಿಂದ ವಿಚಾರಣೆಯಲ್ಲಿದ್ದ ಪ್ರಕರಣದಲ್ಲಿ ಇಬ್ರಾಹಿಂ ಪಾಕಿಸ್ತಾನಿ ಪ್ರಜೆ ಎಂದು ಹೇಳಲು ಬಲವಾದ ಸಾಕ್ಷ್ಯಗಳು ಲಭ್ಯವಾದ ಕಾರಣ ಆರೋಪಗಳು ಸಾಬೀತಾಗಿಲ್ಲ. ಅವರು ಮಲಬಾರಿನ ಮಲಯಾಳಿ ಹೆತ್ತವರಿಗೆ ಜನಿಸಿದವರು ಮತ್ತು ಅವರನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್ ಆದೇಶ ನೀಡಿದೆ.

ಇಬ್ರಾಹಿಂ ಅವರ ಗುರುತಿನ ಚೀಟಿ, ಹಳೆ ಪಡಿತರ ಚೀಟಿ ಮತ್ತು ಶಾಲಾ ಪ್ರಮಾಣ ಪತ್ರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ಅವರು ಪಾಕಿಸ್ತಾನಿ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯಗಳು ಇರಲಿಲ್ಲ.

ತಾನು ಯಾವ ದೇಶದ ಪ್ರಜೆಯೆಂಬುದು ವಿವಾದಕ್ಕೀಡಾಗಿರುವುದರ ಹಿಂದೆ ಬೇರೆಯೇ ಕಥೆ ಇದೆ ಎಂದು ಹೇಳುತ್ತಾರೆ 61ರ ಇಬ್ರಾಹಿಂ.

ಆರನೇ ತರಗತಿಯಲ್ಲಿರುವಾಗಲೇ ಮನೆ ಬಿಟ್ಟಿದ್ದ ಅವರು ಪಾಂಡಿಚೇರಿಯ ಮಾಹೆ, ಕೊಯಂಬತ್ತೂರು, ಅಹಮದಾಬಾದ್ ಮತ್ತು ಅಜ್ಮೀರ್‌ಗಳಲ್ಲಿ ಕೆಲ ಕಾಲ ಕೆಲಸ ಮಾಡಿ ನಂತರ ದುಬೈಗೆ ಹೋಗಿದ್ದರು. 1969ರಲ್ಲಿ ದುಬೈಯನ್ನೂ ತೊರೆದು ಪಾಕಿಸ್ತಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ವೀಸಾ ರಾಕೆಟ್ ಸುಳಿಗೆ ಬಿದ್ದ ಕಾರಣ ಭಾರತೀಯ ಪಾಸ್‌ಪೋರ್ಟ್ ಕಳೆದುಕೊಂಡು ಅತಂತ್ರ ಸ್ಥಿತಿಗೆ ತಲುಪಿದ್ದರು. ಕೆಲ ಕಾಲ ಅಲ್ಲೇ ತಂಗಿದ ಬಳಿಗ 1998ರಲ್ಲಿ ಪಾಕಿಸ್ತಾನಿ ಪಾಸ್‌ಪೋರ್ಟ್ ಪಡೆದುಕೊಂಡು ತಾಯ್ನಾಡಿಗೆ ಮರಳಿದ್ದರು.

ತನ್ನ ತವರು ನೆಲಕ್ಕೆ ಬಂದರೂ ನೆಮ್ಮದಿ ಸಿಗಲಿಲ್ಲ. 2003ರಲ್ಲಿ ಪೊಲೀಸರು ಬಂಧಿಸಿದ ನಂತರ ಇಬ್ರಾಹಿಂ ಅವರನ್ನು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಮರಳಿಸಲು ನಿರ್ಧರಿಸಿದ್ದರು. ಆದರೆ ಗಡಿಯಲ್ಲಿನ ಅಧಿಕಾರಿಗಳು ವಲಸೆ ಪತ್ರಗಳಲ್ಲಿನ ಲೋಪಗಳನ್ನು ಎತ್ತಿ ಹಿಡಿದು ಗಡೀಪಾರಿಗೆ ನಿರಾಕರಿಸಿದ್ದರು.

ಹಿನ್ನಡೆ ಅನುಭವಿಸಿದ ಪೊಲೀಸರು ಇಬ್ರಾಹಿಂ ಅವರನ್ನು ಮರಳಿ ಕೇರಳಕ್ಕೆ ಕರೆ ತಂದರು. ಜಾಮೀನು ಪಡೆದುಕೊಂಡ ಇಬ್ರಾಹಿಂ ಕಾನೂನು ಹೋರಾಟಕ್ಕೆ ಚಾಲನೆ ನೀಡಿದರು. ಕೊನೆಗೂ ಅದರಲ್ಲಿ ಗೆದ್ದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ